HEALTH TIPS

ಇರಾನ್ ದಾಳಿಯಿಂದ ಖತರ್ ನ ಶೇ.17 ರಷ್ಟು LNG ಉತ್ಪಾದನಾ ಸಾಮರ್ಥ್ಯಕ್ಕೆ ಹಾನಿ; ಮರುಸ್ಥಾಪನೆಗೆ ಬೇಕು 3-5 ವರ್ಷ!

 ದೋಹಾ: ಇರಾನ್ ನಡೆಸಿದ ದಾಳಿಗಳ ಪರಿಣಾಮವಾಗಿ ಖತರ್ ನ ದ್ರವೀಕೃತ ನೈಸರ್ಗಿಕ ಅನಿಲ (ಐಓಉ) ಉತ್ಪಾದನಾ ಸಾಮರ್ಥ್ಯದ ಸುಮಾರು 17 ಪ್ರತಿಶತವನ್ನು ಒದಗಿಸುವ ಪ್ರಮುಖ ಸೌಲಭ್ಯಗಳು ಗಂಭೀರವಾಗಿ ಹಾನಿಗೊಳಗಾಗಿವೆ ಎಂದು ಖತರ್ ಎನರ್ಜಿ ಸಂಸ್ಥೆಯ ಸಿಇಒ ಸಾದ್ ಅಲ್-ಕಾಬಿ ತಿಳಿಸಿದ್ದಾರೆ. 


ಹಾನಿಗೊಳಗಾದ ಮೂಲಸೌಕರ್ಯವನ್ನು ಸಂಪೂರ್ಣವಾಗಿ ಮರುಸ್ಥಾಪಿಸಲು ಕನಿಷ್ಠ ಮೂರುರಿಂದ ಐದು ವರ್ಷಗಳು ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ರಮಝಾನ್ ತಿಂಗಳಲ್ಲಿ ಸಹೋದರ ಮುಸ್ಲಿಂ ದೇಶದಿಂದ ಈ ರೀತಿಯ ದಾಳಿ ನಡೆಯುತ್ತದೆ ಎಂದು ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ ಎಂದು ಅಲ್-ಕಾಬಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ರಾಯಿಟರ್ಸ್ ಗೆ ನೀಡಿದ ಸಂದರ್ಶನದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಖತರ್ ಎನರ್ಜಿ, ಇಟಲಿ, ಬೆಲ್ಜಿಯಂ, ದಕ್ಷಿಣ ಕೊರಿಯಾ ಮತ್ತು ಚೀನಾಕ್ಕೆ ಐಓಉ ಪೂರೈಕೆಗೆ ಮಾಡಿಕೊಂಡಿರುವ ದೀರ್ಘಾವಧಿಯ ಒಪ್ಪಂದಗಳ ಮೇಲೆ 'ಬಲವಂತದ ನಿರ್ಬಂಧ' ಘೋಷಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಅಲ್-ಕಾಬಿ ತಿಳಿಸಿದ್ದಾರೆ.

"ಇವು ದೀರ್ಘಾವಧಿಯ ಒಪ್ಪಂದಗಳು. ಈ ಹಿನ್ನೆಲೆಯಲ್ಲಿ ನಾವು ಬಲವಂತದ ನಿರ್ಬಂಧವನ್ನು ಘೋಷಿಸಬೇಕಾಗಬಹುದು. ನಾವು ಈಗಾಗಲೇ ಅಲ್ಪಾವಧಿಗೆ ಅದನ್ನು ಘೋಷಿಸಿದ್ದೇವೆ. ಈಗ ಅವಧಿ ಹೇಗಿರುತ್ತದೆ ಎಂಬುದು ಮುಂದಿನ ಬೆಳವಣಿಗೆಗಳ ಮೇಲೆ ಅವಲಂಬಿತ," ಎಂದು ಅವರು ಹೇಳಿದ್ದಾರೆ.

ಹಾನಿಗೊಳಗಾದ ಐಓಉ ಮೂಲಸೌಕರ್ಯವನ್ನು ನಿರ್ಮಿಸಲು ಸುಮಾರು 26 ಬಿಲಿಯನ್ ಡಾಲರ್ ವೆಚ್ಚವಾಗಿತ್ತು ಎಂದು ಅಲ್-ಕಾಬಿ ತಿಳಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries