HEALTH TIPS

21ನೇ ದಿನಕ್ಕೆ ಕಾಲಿಟ್ಟ ಇರಾನ್ ಯುದ್ಧ: ಪರ್ಯಾಯ ಮಾರ್ಗಗಳ ಬಗ್ಗೆ ಟ್ರಂಪ್ ಚಿಂತನೆ

 ವಾಷಿಂಗ್ಟನ್: 'ಇರಾನ್‌ ಯುದ್ಧವು 21ನೇ ದಿನಕ್ಕೆ ಕಾಲಿಟ್ಟಿದ್ದು, ಅಮೆರಿಕದ ಸೇನಾ ಕಾರ್ಯಾಚರಣೆಗಳನ್ನು ವಿಸ್ತರಿಸುವ ಕುರಿತು ಟ್ರಂಪ್ ಪರ್ಯಾಯ ಮಾರ್ಗಗಳನ್ನು ಪರಿಶೀಲಿಸುತ್ತಿದ್ದಾರೆ' ಎಂದು ಅಮೆರಿಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಕಾರ್ಯಾಚರಣೆಯನ್ನು ಬಲಪಡಿಸಲು ಸಾವಿರಾರು ಸೈನಿಕರನ್ನು ನಿಯೋಜಿಸುವ ಬಗ್ಗೆಯೂ ಟ್ರಂಪ್ ಆಡಳಿತ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.

ಇನ್ನು, ಹೊರ್ಮುಜ್‌ ಜಲಸಂಧಿಯ ಮೂಲಕ ತೈಲ ತುಂಬಿದ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸುವುದು ಈ ಆಯ್ಕೆಗಳಲ್ಲಿ ಸೇರಿದೆ. ಈ ಕಾರ್ಯಾಚರಣೆಯನ್ನು ಮುಖ್ಯವಾಗಿ ವಾಯು ಮತ್ತು ನೌಕಾಪಡೆಗಳ ಮೂಲಕ ಪೂರ್ಣಗೊಳಿಸಲಾಗುವುದು ಎಂದು ಅಮೆರಿಕ ಸೇನಾ ಮೂಲಗಳು ತಿಳಿಸಿವೆ.

ಆದರೆ, ಹೊರ್ಮುಜ್‌ ಜಲಸಂಧಿಯನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಬೇಕಾದರೆ ಇರಾನ್‌ನ ಕರಾವಳಿಯಲ್ಲಿ ಅಮೆರಿಕ ಸೈನಿಕರನ್ನು ನಿಯೋಜಿಸಬೇಕಾಗಬಹುದು ಎಂದು ಅದು ತಿಳಿಸಿದೆ.

ಇದಲ್ಲದೆ, ಇರಾನ್‌ನ ಪ್ರಮುಖ ತೈಲ ರಫ್ತು ಕೇಂದ್ರವಾಗಿರುವ ಖಾರ್ಗ್ ದ್ವೀಪಕ್ಕೆ ಭೂಸೇನೆಯನ್ನು ಕಳುಹಿಸುವ ಆಯ್ಕೆಗಳ ಬಗ್ಗೆಯೂ ಟ್ರಂಪ್ ಆಡಳಿತ ಚರ್ಚಿಸಿದೆ ಎಂದು ಮೂವರು ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.

ಆದರೆ, ಈ ಕಾರ್ಯಾಚರಣೆಯು ಅಪಾಯಕಾರಿಯಾಗಿದ್ದು, ಕ್ಷಿಪಣಿಗಳು ಮತ್ತು ಡ್ರೋನ್‌ಗಳ ಮೂಲಕ ಈ ದ್ವೀಪವನ್ನು ತಲುಪುವ ಸಾಮರ್ಥ್ಯವನ್ನು ಇರಾನ್ ಹೊಂದಿದೆ ಎಂದು ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ಮಾ. 13 ರಂದು ಖಾರ್ಗ್‌ ದ್ವೀಪದ ಮೇಲಿರುವ ಸೇನಾ ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿತ್ತು.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries