ಕಾಸರಗೋಡು: ವಿಧಾನಸಭಾ ಚುನಾವಣೆ 2026 ಕ್ಕೆ ನಾಮಪತ್ರ ಹಿಂಪಡೆಯುವ ಸಮಯ ಮುಕ್ತಾಯ ಗೊಂಡಿದೆ.ಜಿಲ್ಲೆಯ ವಿವಿಧ ಕ್ಷೇತ್ರಗಳಿಗೆ 32 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಂಜೇಶ್ವರ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳಿದ್ದಾರೆ (11). ಕಡಿಮೆ ಅಭ್ಯರ್ಥಿಗಳ ಸಂಖ್ಯೆ ಕಾಞಂಗಾಡ್ ಕ್ಷೇತ್ರದಲ್ಲಿ (ನಾಲ್ಕು). ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ನೀಡಲಾಗಿದೆ. ಮಂಜೇಶ್ವರದಲ್ಲಿ ಮೂವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ.ಎಸ್ ಡಿ ಪಿ ಐ ಅಭ್ಯರ್ಥಿ ಕೆ.ಎಂ. ಅಶ್ರಫ್, ಸ್ವತಂತ್ರ ಅಭ್ಯರ್ಥಿಗಳಾದ ಮುಹಮ್ಮದ್ ರಫೀಕ್ ಮತ್ತು ಎನ್.ಕೇಶವ್ ನಾಯಕ್ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ. ತ್ರಿಕರಿಪುರ ಕ್ಷೇತ್ರದಲ್ಲಿ ಟ್ವೆಂಟಿ20 ಅಭ್ಯರ್ಥಿ ರಮಣಿ ಕೆ.ವಿ. ಮತ್ತು ಕಾಸರಗೋಡು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಎಂ.ಎ. ಲತೀಫ್ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ.
ಹೆಸರು, ರಾಜಕೀಯ ಪಕ್ಷ ಮತ್ತು ಚಿಹ್ನೆಯ ಕ್ರಮದಲ್ಲಿ ಕ್ಷೇತ್ರಗಳ ಅಭ್ಯರ್ಥಿಗಳ ವಿವರಗಳು
ತ್ರಿಕ್ಕರಿಪುರ ಕ್ಷೇತ್ರದಲ್ಲಿ ಆರು ಅಭ್ಯರ್ಥಿಗಳು
ಡಾ. ವಿ.ಪಿ.ಪಿ. ಮುಸ್ತಫಾ- ಸಿಪಿಎಂ - ಕತ್ತಿ ಸುತ್ತಿಗೆ ನಕ್ಷತ್ರ
ಸಂದೀಪ್ ವಾರಿಯರ್ - ಕಾಂಗ್ರೆಸ್- ಕೈ
ರವಿ ಕುಲಂಗರ- ಟ್ವೆಂಟಿ-20 - ಹಲಸು
ಮುಸ್ತಫಾ ಪಿ.ಪಿ.- ಸ್ವತಂತ್ರ- ಕತ್ತರಿ
ಮುಸ್ತಫಾ ವಿ.ಪಿ.- ಸ್ವತಂತ್ರ- ಚೈನ್
ಸಂದೀಪ್ ಎಲಾಟ್- ಸ್ವತಂತ್ರ- ಗ್ಯಾಸ್ ಸಿಲಿಂಡರ್
ಕಾಂಞಂಗಾಡು ಕ್ಷೇತ್ರದಲ್ಲಿ ನಾಲ್ಕು ಅಭ್ಯರ್ಥಿಗಳು
ವಕೀಲ ಗೋವಿಂದನ್ ಪಲ್ಲಿಕಾಪ್ಪಿಲ್ - ಸಿಪಿಎಂ - ಕತ್ತಿ ಸುತ್ತಿಗೆ ನಕ್ಷತ್ರ
ಎಂ. ಬಾಲರಾಜ್- ಬಿಜೆಪಿ -ತಾವರೆ
ವಿಜಯ್ ಕುಮಾರ್. ಬಿ.-ಬಹುಜನ ಸಮಾಜ ಪಕ್ಷ - ಆನೆ
ಶೈಜಿ ಒಟ್ಟಪಳ್ಳಿ - ಕೇರಳ ಕಾಂಗ್ರೆಸ್- ಆಟೋರಿಕ್ಷಾ
ಉದುಮ ಕ್ಷೇತ್ರದಲ್ಲಿ ಆರು ಅಭ್ಯರ್ಥಿಗಳು
ಸಿ. ಎಚ್. ಸಿ.ಎಚ್. ಕುಂಞಂಬು - ಸಿಪಿಎಂ - ಕತ್ತಿ ಸುತ್ತಿಗೆ ನಕ್ಷತ್ರ
ನೀಲಕಂಠನ್ - ಕಾಂಗ್ರೆಸ್- ಕೈ
ಮನುಲಾಲ್.ಎಂ - ಬಿಜೆಪಿ - ತಾವರೆ
ಕುಂಞಂಬು.ಪಿ.ಪಿ s/o ರಾಮನ್ - ಸ್ವತಂತ್ರ- ದುರ್ಬೀನು
ಕುಂಞಿರಾಮನ್- ಸ್ವತಂತ್ರ- ಬ್ಯಾಟ್
ನಜೀರ್- ಸ್ವತಂತ್ರ - ಡ್ರಿಲ್ ಮೆಷಿನ್.
ಕಾಸರಗೋಡು ಕ್ಷೇತ್ರದಲ್ಲಿ ಐದು ಅಭ್ಯರ್ಥಿಗಳು
ಅಶ್ವಿನಿ ಎಂ. ಎಲ್. - ಬಿಜೆಪಿ - ತಾವರೆ
ಕಲ್ಲಟ್ರ ಮಾಹಿನ್ ಹಾಜಿ - ಮುಸ್ಲಿಂಲೀಗ್ - ಏಣಿ
ಮುಹಮ್ಮದ್ ಅಲಿ ಫತಹ್ ಬಿ. ಎಂ - ಸ್ವತಂತ್ರ- ಬ್ಯಾಟ್
ಶಾನವಾಸ್ ಎ. ಎ - ಸ್ವತಂತ್ರ -ಡೈಮಂಡ್
ಶಾನವಾಸ್ ಪಾದೂರು - ಬ್ಯಾಟರಿ ಟಾರ್ಚ್.
ಮಂಜೇಶ್ವರ ಕ್ಷೇತ್ರದಲ್ಲಿ ಹನ್ನೊಂದು ಅಭ್ಯರ್ಥಿಗಳು
ಎ.ಕೆ.ಎಂ. ಅಶ್ರಫ್- ಮುಸ್ಲಿಂಲೀಗ್ - ಏಣಿ
ಕೆ.ಆರ್. ಜಯಾನಂದ- ಸಿಪಿಎಂ - ಕತ್ತಿ ಸುತ್ತಿಗೆ ನಕ್ಷತ್ರ
ಸಂಜೀವ- ಬಹುಜನ ಸಮಾಜ ಪಕ್ಷ- ಆನೆ
ಕೆ. ಸುರೇಂದ್ರನ್- ಬಿಜೆಪಿ - ತಾವರೆ
ಕಣ್ಣೂರು ಅಬ್ದುಲ್ಲಾ ಮಾಸ್ಟರ್- ಸ್ವತಂತ್ರ- ಗ್ಯಾಸ್ ಸಿಲಿಂಡರ್
ಅಬ್ದುಲ್ ಲತೀಫ್ - ಸ್ವತಂತ್ರ- ದೂರದರ್ಶನ
ಜೀನ್ ಲವಿನಾ ಮಾಂತೆರೋ- ಸ್ವತಂತ್ರ- ಬ್ಯಾಟರಿ ಟಾರ್ಚ್
ಜೋನ್ ಡಿ'ಸೋಜಾ- ಸ್ವತಂತ್ರ- ಟ್ರಕ್
ಮುಹಮ್ಮದ್ ಅಶ್ರಫ್, ಪಾಪಿಯಾ ಹೌಸ್ - ಸ್ವತಂತ್ರ- ಬ್ಯಾಟ್
ಮುಹಮ್ಮದ್ ಅಶ್ರಫ್ ಕೆ.ಎ, ಸಿಎಂ ಹೌಸ್- ಸ್ವತಂತ್ರ- ಗ್ಯಾಸ್ ಸ್ಟೌವ್
ಡಿ. ಸುರೇಂದ್ರನ್ ನಾಯರ್- ಸ್ವತಂತ್ರ-ಡೈಮಂಡ್

