ಕಾಸರಗೋಡು: ಮೈಲಾಟಿ 220 ಕೆವಿ ಸಬ್‍ಸ್ಟೇಷನ್‍ನಲ್ಲಿ ಸ್ಥಾಪಿಸಲಾಗುವ 125 ಮೆಗಾವ್ಯಾಟ್ ಮತ್ತು 500 ಮೆಗಾವ್ಯಾಟ್ ಬ್ಯಾಟರಿ ಇಂಧನ ಸಂಗ್ರಹ ವ್ಯವಸ್ಥೆ (ಬಿಇಎಸ್‍ಎಸ್) ನಿರ್ಮಾಣವನ್ನು ವಿದ್ಯುತ್ ಸಚಿವ ಕೆ. ಕೃಷ್ಣನ್ ಕುಟ್ಟಿ ಆನ್‍ಲೈನ್ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾಸರಗೋಡಿನಲ್ಲಿ ನಡೆಯುತ್ತಿರುವ ಇಂಧನ ಕ್ರಾಂತಿ ಮತ್ತು ಕೇರಳದ ಇಂಧನ ವಲಯದಲ್ಲಿನ ದೊಡ್ಡ ಬದಲಾವಣೆ ರಾಜ್ಯದ ವಿದ್ಯುತ್ ವಲಯಕ್ಕೆ ಪುನಶ್ಚೇತನ ಒದಗಿಸಿದೆ. ಇದು ಕಾಸರಗೋಡು ಜಿಲ್ಲೆಯ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಸಹಕಾರಿಯಾಗುವುದುರ ಜತೆಗೆ ಗ್ರಾಹಕರಿಗೆ ಗುಣಮಟ್ಟದ ಸೇವೆ ಖಚಿತಪಡಿಸುವುದು ಸರ್ಕಾರದ ಗುರಿಯಾಗಿದೆ. ಮೈಲಾಟಿ ಯೋಜನೆ ರಾಜ್ಯದ ಮೊದಲ 125 ಮೆಗಾವ್ಯಾಟ್ ಬ್ಯಾಟರಿ ಶಕ್ತಿ ಸಂಗ್ರಹ ಯೋಜನೆಯಾಗಿದೆ ಎಂದು ಸಚಿವರು ತಿಳಿಸಿದರು.
ಶಾಸಕ ಸಿ.ಎಚ್. ಕುಂಞಂಬು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕೆಎಸ್‍ಇಬಿಎಲ್ ಸ್ವತಂತ್ರ ನಿರ್ದೇಶಕ, ವಕೀಲ ವಿ.ಮುರುಕದಾಸ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಕೆ.ಸುಜಾತ, ಉದುಮ ಗ್ರಾಪಂ ಅಧ್ಯಕ್ಷ ಪಿ.ವಿ. ರಾಜೇಂದ್ರನ್, ಮುಖ್ಯ ಇಂಜಿನಿಯರ್‍ಗಳಾದ ಕೆ.ಶಾಂತಿ ಮತ್ತು ಹರೀಶನ್ ಮೊಟ್ಟಮ್ಮಾಳ್ ಮೊದಲಾದವರು ಉಪಸ್ಥಿತರಿದ್ದರು. ಕೆಎಸ್‍ಇಬಿಎಲ್ ವಿತರಣೆ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ನಿರ್ದೇಶಕ ಪಿ. ಸುರೇಂದ್ರ ಸ್ವಾಗತಿಸಿದರು. ಕೆಎಸ್‍ಇಬಿಎಲ್ ಜನರೇಷನ್-ಎಲೆಕ್ಟ್ರಿಕಲ್, ರೀಸ್ ನಿರ್ದೇಶಕ ಜಿ. ಸಜೀವ್ ಯೋಜನಾ ವರದಿ ಮಂಡಿಸಿದರು.



