ಕಾಸರಗೋಡು: ಐಸಿಎಆರ್-ಸಿಪಿಸಿಆರ್.ಐ ಕಾಸರಗೋಡಿನಲ್ಲಿ 2026ರ ರಾಷ್ಟ್ರೀಯ ವಿಜ್ಞಾನ ಮತ್ತು ಕೈಗಾರಿಕಾ ದಿನವನ್ನು ಆಚರಿಸಲಾಯಿತು. ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಸಮಾರಂಭ ಉದ್ಘಾಟಿಸಿ ಮಾತನಾಡಿ, ಷಿ ಉತ್ಪಾದಕತೆ ಹೆಚ್ಚಿಸಿಕೊಳ್ಳಬೇಕಾದರೆ, ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ ಎಂದು ತಿಳಿಸಿದರು. ಸಿಪಿಸಿಆರ್‍ಐ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡಿದರು.
ಕಲ್ಪ ವರ್ಧಿನಿಯೊಂದಿಗೆ ಕೆವಿಕೆ ಕೋಯಿಕ್ಕೋಡ್ ಮುಖ್ಯಸ್ಥ ಡಾ. ರಾಧಾಕೃಷ್ಣನ್, ಸೌತ್ ಮಲಬಾರ್ ಎಂಟರ್‍ಪ್ರೈಸಸ್‍ನ ಸಜನ್ ಕೆ, ಮತ್ತು ಸುಷ್ಮಾ ಅವರು ತಳಿಪರಂಬ ಕಾರ್ಬೊನೇಟೆಡ್ ಎಳನೀರಿಗೆ ಸಂಬಂಧಿಸಿದ ಎಂಓಯು ವಿನಿಮಯ ನಡೆಸಿದರು.
ಈ ಸಂದರ್ಭ ನಡೆದ ತಾಂತ್ರಿಕ ಅಧಿವೇಶನದಲ್ಲಿ 'ಕಾಸರಗೋಡಿನಲ್ಲಿ ಕೃಷಿ ಸಂಶೋಧನಾ ಅವಕಾಶಗಳ' ಕುರಿತು ಕೆವಿಕೆ ಮುಖ್ಯಸ್ಥ ಡಾ. ಟಿ.ಎಸ್. ಮನೋಜ್‍ಕುಮಾರ್, ವಿವಿಧ ಪ್ರಭೇದಗಳು ಮತ್ತು ಆಹಾರೇತರ ತಂತ್ರಜ್ಞಾನಗಳನ್ನು ಒಳಗೊಂಡ ಸಿಪಿಸಿಆರ್‍ಐನ ತಂತ್ರಜ್ಞಾನ ಪೆÇೀರ್ಟ್‍ಫೆÇೀಲಿಯೊ ಬಗ್ಗೆ ಡಾ. ಎಸ್. ಜಯಶೇಖರ್, ಸಿಪಿಸಿಆರ್‍ಐನ ಆಹಾರ ಉತ್ಪನ್ನಗಳು ಮತ್ತು ಸಂಬಂಧಿತ ನಾವೀನ್ಯತೆಗಳ ಕುರಿತು ಡಾ. ಹಿಮಾ ಜಾನ್, ಎಪಿಇಡಿಎಯ ಪಾತ್ರ ಮತ್ತು ರಫ್ತು ಸೌಲಭ್ಯಗಳ ಬಗ್ಗೆ ಕೊಚ್ಚಿಯ ಎಪಿಇಡಿಎಯ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕಿ ಅಲ್ಫಿನ್ ಸಂತೋಷ್, ಕೃಷಿ ಆಧಾರಿತ ಉದ್ಯಮಗಳು ಮತ್ತು ನವೋದ್ಯಮಗಳಿಗೆ ಲಭ್ಯವಿರುವ ಸಾಲ ಬೆಂಬಲ ಕಾರ್ಯವಿಧಾನಗಳ ಕುರಿತು ನರಾ ಬ್ಯಾಂಕಿನ ಕೃಷಿ ಅಧಿಕಾರಿ ಶ್ರೀಮತಿ ಅಪರ್ಣಾ ಕೆ, ಕೃಷಿ-ಉದ್ಯಮಿಗಳಿಗೆ ಬೆಂಬಲ ಯೋಜನೆಗಳು ಮತ್ತು ಸೌಲಭ್ಯ ಸೇವೆಗಳ ಬಗ್ಗೆ ಜಿಲ್ಲಾ ಕೈಗಾರಿಕಾ ಕೇಂದ್ರ (ಡಿಐಸಿ) ದ ಜನರಲ್ ಮ್ಯಾನೇಜರ್ ಸಜಿತ್ ಕುಮಾರ್, ಉದ್ಯಮಶೀಲತೆಗಾಗಿ ಔಷಧೀಯ ಮತ್ತು ಸುಗಂಧ ದ್ರವ್ಯಗಳನ್ನು ಬೆಳೆಸುವ ಸಾಧ್ಯತೆಯ ಬಗ್ಗೆ ಬೆಂಗಳೂರಿನ ಪ್ರಾದೇಶಿಕ ಕಚೇರಿಯ ಸಿಎಸ್‍ಐಆರ್-ಸಿಐಎಂಎಪಿಯ ಪ್ರಧಾನ ವಿಜ್ಞಾನಿ ಡಾ. ಯೋಗೇಂದ್ರ ಎನ್.ಡಿ ವಿಷಯ ಮಂಡಿಸಿದರು. ಯಶಸ್ವಿ ಉದ್ಯಮಿ ಟಿ.ಕೆ. ಅನ್ನಮ್ಮ ಅವರು ತಮ್ಮ ಉದ್ದಿಮೆಯಲ್ಲಿನ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಉದ್ಯಮಿಗಳ ವಿವಿಧ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಈ ಸಂದರ್ಭ 'ತಂತ್ರಜ್ಞಾನ ಚಿಕಿತ್ಸಾಲಯ' ಅಧಿವೇಶನವನ್ನು ಆಯೋಜಿಸಲಾಗಿತ್ತು. ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೆÇನ್ನುಸ್ವಾಮಿ ಸ್ವಾಗತಿಸಿದರು. ಡಾ. ಕೆ.ಪಿ. ಚಂದ್ರನ್ ವಂದಿಸಿದರು.



