HEALTH TIPS

ಕಾಸರಗೋಡು ನಗರಸಭೆಗೆ ಮಿಗತೆ ಬಜೆಟ್-ಮೀನು ಮಾರುಕಟ್ಟೆ, ಹೊಸ ಬಸ್ ನಿಲ್ದಾಣ ಕಾಂಪ್ಲೆಕ್ಸ್ಗೆ ತಲಾ ಹತ್ತು ಕೋಟಿ ಮೀಸಲು

ಕಾಸರಗೋಡು: ನಗರಸಭಾ ಬಜೆಟ್ ಅಧಿವೇಶನ ಸೋಮವಾರ ಕಾಸರಗೋಡು ನಗರಸಭಾಂಗಣದಲ್ಲಿ ನಿನ್ನೆ ಜರುಗಿತು. ಒಟ್ಟು 1430209322 ರೂ. ಆದಾಯ ಮತ್ತು 1266579300ರೂ. ಖರ್ಚು ಅಂದಾಜಿಸಿರುವ 1636330022ರೂ. ಉಳಿಕೆ ಬಜೆಟನ್ನು ನಗರಸಭಾ ಉಪಾಧ್ಯಕ್ಷ ಕೆ.ಎಂ ಹನೀಫ್ ಮಂಡಿಸಿದರು. ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂ ನೇತೃತ್ವದ ಆಡಳಿತ ಸಮಿತಿಯ ಚೊಚ್ಚಲ ಬಜೆಟ್ ಇದಾಗಿದೆ. 


ನಗರಸಭಾ ಎಲ್ಲಾ ವಾರ್ಡುಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಪ್ರತಿ ವಾರ್ಡಿಗೆ 8ಲಕ್ಷ ರೂ.ನಂತೆ ಒಟ್ಟು 3.12ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಕಾಸರಗೋಡು ಹೊಸ ಬಸ್‍ನಿಲ್ದಾಣದ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ನಗರಸಭಾ ಮೀನು ಮಾರುಕಟ್ಟೆ ನವೀಕರಣಕ್ಕಾಗಿ ತಲಾ ಹತ್ತು ಕೋಟಿ ರೂ. ಮೀಸಲಿರಿಸಲಾಗಿದೆ.ಕಾಸರಗೋಡು ಟೌನ್‍ಹಾಲ್ ಸಭಾಂಗಣವನ್ನುಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ನಗರಸಭೆ, ಸಂಸದ, ಶಾಸಕರ ಅನುದಾನ ಬಳಸಿಕೊಳ್ಳಲಾಗುವುದು. ನಗರಸಭೆ ವ್ಯಾಪ್ತಿಯ ಕಾಸರಗೋಡು ಹಳೇ ಬಸ್ ನಿಲ್ದಾಣ ಮತ್ತು ಶಾಪಿಂಗ್ ಕಾಂಪ್ಲೆಕ್ಸ್ ಒಳಗೊಮಡ ಎರಡಂತಸ್ತಿನ ಕಟ್ಟಡವನ್ನು ಅಭಿವೃದ್ಧಿಪಡಿಸಿ ಎ.ಸಿ ಡೋರ್ಮಟರಿ ನಿರ್ಮಿಸಿ ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು.

ನಗರಸಭೆ ಅಧೀನದಲ್ಲಿರುವ ವಿದ್ಯಾಲಯಗಳ ಮೂಲಸೌಕರ್ಯ ಹೆಚ್ಚಿಸಿ, ಶಾಲೆಗಳಲ್ಲಿ ಶೀ ಟಾಯ್‍ಲೆಟ್ ವ್ಯವಸ್ಥೆ ಜಾರಿಗೊಳಿಸಲಾಗುವುದು. ನಗರಸಭಾ ವ್ಯಾಪ್ತಿಯಲ್ಲಿ ಟ್ರಾಫಿಕ್ ಜಾಮ್ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ನಗರಪ್ರದೇಶದಲ್ಲಿ ಬಡಜನರಿಗೆ ಹಾಗೂ ಉದ್ಯೋಗರಹಿತರಿಗೆ ಕಾಯಂ ಜೀವನಮಾರ್ಗ ಕಂಡುಕೊಲ್ಳುವ ನಿಟ್ಟಿನಲ್ಲಿ ರಾಷ್ಟ್ರೀಯ ನಗರ ಉಪಜೀವನ ಮಿಷನ್ ಸಹಖಾರದೊಂದಿಗೆ ಯೋಜನೆ ತಯಾರಿಸಲಾಗುವುದು ಎಂದೂ ತಿಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries