HEALTH TIPS

ಅಸ್ಸಾಂನಲ್ಲಿ ₹23,550 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಮೋದಿ ಚಾಲನೆ

ಸಿಲ್ಚಾರ್: ವಿಧಾನಸಭೆ ಚುನಾವಣೆಗೂ ಮುನ್ನ ಅಸ್ಸಾಂನ ಸಿಲ್ಚಾರ್‌ನಲ್ಲಿ ₹23,550 ಕೋಟಿ ಮೌಲ್ಯದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಶಂಕು ಸ್ಥಾಪನೆ ನೆರವೇರಿಸಿದ್ದಾರೆ.

₹22,864 ಕೋಟಿ ವೆಚ್ಚದ ಸಿಲ್ಚಾರ್ ಮತ್ತು ಮೇಘಾಲಯದ ಶಿಲ್ಲಾಂಗ್ ನಡುವಿನ ಎಕ್ಸ್‌ಪ್ರೆಸ್‌ವೇಗೆ ಮೋದಿ ಭೂಮಿ ಪೂಜೆ ನೆರವೇರಿಸಿದರು.

166 ಕಿ.ಮೀ ಉದ್ದದ ನಾಲ್ಕು ಪಥದ ಗ್ರೀನ್‌ಫೀಲ್ಡ್ ಹೈ-ಸ್ಪೀಡ್ ಕಾರಿಡಾರ್ ಇದಾಗಿದ್ದು, ಗುವಾಹಟಿ ಮತ್ತು ಸಿಲ್ಚಾರ್ ನಡುವಿನ ಅಂತರವನ್ನು 295 ಕಿ.ಮೀನಿಂದ 252 ಕಿ.ಮೀಗೆ ಇಳಿಸುತ್ತದೆ. ಪ್ರಯಾಣದ ಸಮಯವನ್ನು 8.5 ಗಂಟೆಗಳಿಂದ ಸುಮಾರು 5 ಗಂಟೆಗೆ ಇಳಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-306ರಲ್ಲಿ ಕ್ಯಾಪಿಟಲ್ ಪಾಯಿಂಟ್ ಬಳಿಯ ಟ್ರಂಕ್ ರಸ್ತೆಯಿಂದ ಸಿಲ್ಚಾರ್‌ನ ರಂಗೀರ್ಖರಿ ಪಾಯಿಂಟ್‌ವರೆಗಿನ ಎತ್ತರದ ಕಾರಿಡಾರ್‌ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಕಾರಿಡಾರ್ ಅನ್ನು ₹565 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಯೋಜನೆಯಿಂದ ಮಿಜೋರಾಂ, ತ್ರಿಪುರ ಮತ್ತು ಮಣಿಪುರದಂತಹ ನೆರೆಯ ರಾಜ್ಯಗಳೊಂದಿಗೆ ಸಂಪರ್ಕವನ್ನು ಸುಧಾರಿಸುವುದು. ಬರಾಕ್ ಕಣಿವೆಯ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರೀಂಗಂಜ್ ಜಿಲ್ಲೆಯ ಪಥರ್ಕಂಡಿಯಲ್ಲಿ ₹122 ಕೋಟಿ ವೆಚ್ಚದ ಕೃಷಿ ಕಾಲೇಜಿಗೆ ಪ್ರಧಾನಿಯವರು ಶಂಕುಸ್ಥಾಪನೆ ನೆರವೇರಿಸಿದರು.

ಅಸ್ಸಾಂನಲ್ಲಿ ಏಪ್ರಿಲ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ ಸತತ ಮೂರನೇ ಅವಧಿಗೆ ಅಧಿಕಾರದ ಮೇಲೆ ಕಣ್ಣಿಟ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries