HEALTH TIPS

₹2,585 ಕೋಟಿ ವೆಚ್ಚದ ಕಿರು ಜಲ ವಿದ್ಯುತ್‌ ಅಭಿವೃದ್ಧಿ ಯೋಜನೆ: ಕೇಂದ್ರದ ಒಪ್ಪಿಗೆ

ನವದೆಹಲಿ: ₹2,585 ಕೋಟಿ ವೆಚ್ಚದ ಕಿರು ಜಲ ವಿದ್ಯುತ್ ಅಭಿವೃದ್ಧಿ ಯೋಜನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. 1,500 ಮೆಗಾ ವಾಟ್‌ ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಅಭಿವೃದ್ಧಿಯ ಉದ್ದೇಶ ಇದಾಗಿದೆ. 

'ನದಿ ಹರಿಯುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸದೆ, ಜನರನ್ನು ಸ್ಥಳಾಂತರ ಮಾಡದೇ ವಿದ್ಯುತ್‌ ಉತ್ಪಾದಿಸುವ ಯೋಜನೆ ಇದು.

ದೇಶದ 7,133 ಸ್ಥಳಗಳಲ್ಲಿ 21,000 ಮೆ.ವಾ ವಿದ್ಯುತ್ ಉತ್ಪಾದಿಸುವ ಸಣ್ಣ ಜಲ ವಿದ್ಯುತ್‌ ಉತ್ಪಾದನಾ ಕೇಂದ್ರಗಳಿಗೆ ಅವಕಾಶ ಇದೆ. ಒಂದು ಘಟಕದಿಂದ 1 ಮೆಗಾ ವಾಟ್‌ನಿಂದ 25 ಮೆಗಾ ವಾಟ್‌ವರೆಗೂ ವಿದ್ಯುತ್‌ ಉತ್ಪಾದಿಸಬಹುದಾಗಿದೆ' ಎಂದು ಸಚಿವ ಅಶ್ವಿನಿ ವೈಷ್ಣವ್ ಅವರು ಬುಧವಾರ ತಿಳಿಸಿದರು.

'ಮುಂದಿನ ಐದು ವರ್ಷಗಳಲ್ಲಿ (2030-31) ಯೋಜನೆಗಳನ್ನು ಅನುಷ್ಠಾನಗೊಳಿಸಲಿದ್ದು, ₹ 15,000 ಹೂಡಿಕೆ ಆಕರ್ಷಿಸುವ ಸಾಧ್ಯತೆ ಇದೆ. ಗರಿಷ್ಠ ₹ 30 ಕೋಟಿ ವೆಚ್ಚದ ಒಂದು ಯೋಜನೆಗೆ ಕೇಂದ್ರ ಸರ್ಕಾರ ಯೋಜನಾ ವೆಚ್ಚದ ಶೇ.30ರಷ್ಟು ಆರ್ಥಿಕ ನೆರವು ನೀಡಲಿದೆ' ಎಂದರು.

ಸದ್ಯ ದೇಶದಲ್ಲಿ ಸಣ್ಣ ಜಲ ವಿದ್ಯುತ್‌ ಯೋಜನೆಗಳಿಂದ 5,100 ಮೆ.ವಾ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries