ಬಿಹಾರದ ಶೇಖ್‌ಪುರ ಜಿಲ್ಲೆಯ ರಂಜಿತ್ ಯಾದವ್ ಎಂಬ ಯುವಕ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿರುವುದಾಗಿ ಹೇಳಿಕೊಂಡಿದ್ದನು.
ಬಳಿಕ ಆತನನ್ನು ಮಾಜಿ ಶಾಸಕರು ಸೇರಿದಂತೆ ಅನೇಕರು ಶುಭಕೋರಿದ್ದರು. ಈ ನಡುವೆ ಜಿಲ್ಲಾಧಿಕಾರಿ ಕಚೇರಿಯು ದಾಖಲೆಗಳನ್ನು ಪರಿಶೀಲಿಸಿದಾಗ, ರಂಜೀತ್ ಯಾದವ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ, ಆತ ಸುಳ್ಳು ಹೇಳಿದ್ದಾನೆ ಎಂಬ ವಿಷಯ ಬೆಳಕಿಗೆ ಬಂದಿದೆ.
ವಾಸ್ತವವಾಗಿ ಅಖಿಲ ಭಾರತೀಯ ರ‍್ಯಾಂಕ್ ಪಟ್ಟಿಯಲ್ಲಿ 440ನೇ ರ‍್ಯಾಂಕ್ ಅನ್ನು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ರಂಜಿತ್ ಕುಮಾರ್ ಆರ್. ಎಂಬುವವರು ಪಡೆದುಕೊಂಡಿದ್ದಾರೆ.
ವರದಿಗಳ ಪ್ರಕಾರ, ರಂಜಿತ್ ಯಾದವ್ ಯುಪಿಎಸ್‌ಸಿಯಲ್ಲಿ 440ನೇ ರ‍್ಯಾಂಕ್ ಪಡೆದಿರುವುದಾಗಿ ಹೇಳಿಕೊಂಡ ಬಳಿಕ ಮಾಜಿ ಶಾಸಕ ವಿಜಯ್ ಸಾಮ್ರಾಟ್ ಕೂಡ ಮನೆಗೆ ಬಂದು ಸನ್ಮಾನಿಸಿದ್ದರು. ಅಲ್ಲದೇ ಸ್ಥಳೀಯ ಪೊಲೀಸ್ ಠಾಣೆಗೂ ಆಹ್ವಾನಿಸಿ ಅಲ್ಲಿನ ಅಧಿಕಾರಿಗಳು ಕೂಡ ರಂಜಿತ್ ಯಾದವ್ ಅವರಿಗೆ ಅಭಿನಂದನೆ ತಿಳಿಸಿ, ಸಿಹಿ ಹಂಚಿದ್ದರು.
ಅಧಿಕಾರಿಗಳಿಗೆ ಅನುಮಾನ ಬಂದು ಸತ್ಯಾಸತ್ಯತೆ ತಿಳಿಯಲು ರಂಜಿತ್ ಯಾದವ್‌ಗೆ ಕರೆಮಾಡಿದ್ದಾರೆ. ಆಗ ರಂಜಿತ್ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡಿಕೊಂಡು ಊರನ್ನು ತೊರೆದಿರುವುದು ಬೆಳಕಿಗೆ ಬಂದಿದೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

