HEALTH TIPS

ಸಿಲಿಂಡರ್ ಪಡೆಯಲು ಇ-ಕೆವೈಸಿ ಕಡ್ಡಾಯ: ಮನೆಯಿಂದಲೇ ಆಧಾರ್ ದೃಢೀಕರಣ ಹೇಗೆ?

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದ ನಡುವೆ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಬಿಕ್ಕಟ್ಟು ಉಂಟಾಗಿದೆ. ಈ ನಡುವೆ ದೇಶದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹೊಸದೊಂದು ಆದೇಶ ಜಾರಿ ಮಾಡಿದೆ.

ದೇಶದ ಎಲ್ಲಾ ಬಳಕೆದಾರರು ಬಯೋಮೆಟ್ರಿಕ್ ಆಧಾರ್ ದೃಢೀಕರಣ (ಇ-ಕೆವೈಸಿ) ಕಡ್ಡಾಯಗೊಳಿಸುವಂತೆ ತಿಳಿಸಿದೆ.

ಗ್ರಾಹಕರಿಗೆ ನೀಡುತ್ತಿದ್ದ ಸಬ್ಸಿಡಿ ದುರುಪಯೋಗ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.

ಮೊಬೈಲ್‌ನಲ್ಲಿ ಆಧಾರ್ ಫೇಸ್‌ ಆರ್‌.ಡಿ ಅಪ್ಲಿಕೇಶನ್ ಮೂಲಕ ಮನೆಯಿಂದಲೇ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸಾರ್ವಜನಿಕ ವಲಯದ ಕಂಪನಿಗಳ ಗ್ರಾಹಕರಿಗೆ ಇದು ಅನ್ವಯವಾಗುವುದಾಗಿ ಸಚಿವಾಲಯ ಹೇಳಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಕಡ್ಡಾಯ

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಈ ನಿಯಮ ಕಡ್ಡಾಯವಾಗಿದೆ. ಒಂದು ವೇಳೆ ಆಧಾರ್‌ ದೃಢಿಕರಣ ಮಾಡದಿದ್ದರೇ, ಎಲ್‌ಪಿಜಿ ಸಿಲಿಂಡರ್‌ನ ಮರು ಪೂರೈಕೆಗೆ ತಡೆಯಾಗಬಹುದು ಅಥವಾ ಸಬ್ಸಿಡಿ ಸ್ಥಗಿತಗೊಳಿಸಬಹುದು. ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ, ಮೊದಲ ಸಿಲಿಂಡರ್‌ನ ಪಡೆಯುವ ಮುನ್ನ ಬಯೋಮೆಟ್ರಿಕ್ ದೃಢೀಕರಣವನ್ನು ಪೂರ್ಣಗೊಳಿಸುವುದು ಕಡ್ಡಾಯ.

9 ತಿಂಗಳು ಗ್ಯಾಸ್‌ ಬುಕ್ಕಿಂಗ್ ಮಾಡದಿದ್ದರೆ ಕಷ್ಟ!

ಇತ್ತೀಚೆಗೆ ಸಿಲಿಂಡರ್‌ ಕಂಪನಿಗಳು ತನ್ನ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಿವೆ. ಯಾವೊಬ್ಬ ಗ್ರಾಹಕ 9 ತಿಂಗಳ ವರೆಗೆ ಸಿಲಿಂಡರ್‌ಗಳನ್ನು ಮುಂಗಡ ಕಾಯ್ದಿರಿಸದಿದ್ದರೆ, ನಂತರದ ಬುಕ್ಕಿಂಗ್‌ಗಾಗಿ ಎಲ್‌ಪಿಜಿ ಕಚೇರಿಗೆ ಭೇಟಿ ನೀಡಿ ಅಲ್ಲಿ ನಿಮ್ಮ ಇ-ಕೆವೈಸಿಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದರಿಂದ ಸಿಲಿಂಡರ್ ಕಳ್ಳತನಕ್ಕೂ ಕಡಿವಾಣ ಬೀಳಲಿದೆ ಎಂದು ಸಂಸ್ಥೆಗಳು ಹೇಳಿವೆ.

ಮನೆಯಿಂದಲೇ ಆಧಾರ್ ದೃಢೀಕರಣ ಹೇಗೆ?

  • ಮೊದಲಿಗೆ ಮೊಬೈಲ್‌ ಫೋನ್‌ನಿಂದ ಎಲ್‌ಪಿಜಿ ಸಿಲಿಂಡರ್‌ ಕಂಪನಿಯ ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಬೇಕು.

  • ನಂತರ ‌'ಆಧಾರ್ ಫೇಸ್‌ ಆರ್‌.ಡಿ' ಅಪ್ಲಿಕೇಶನ್ ಡೌನ್‌ಲೋಡ್‌ ಮಾಡಿಕೊಳ್ಳಿ. ( ಇದು ಆಂಡ್ರಾಯ್ಡ್ ಮತ್ತು ಐಒಎಸ್‌ನಲ್ಲಿ ಲಭ್ಯವಿದೆ).

  • ಎಲ್‌ಪಿಜಿ ಗ್ಯಾಸ್‌ಗೆ ಲಿಂಕ್‌ ಆಗಿರುವ ಮೊಬೈಲ್ ನಂಬರ್ ಅಥವಾ ಎಲ್‌ಪಿಜಿ ಐಡಿ ಬಳಸಿ ಗ್ಯಾಸ್ ಅಪ್ಲಿಕೇಶನ್‌ಗೆ ಲಾಗಿನ್‌ ಮಾಡಿಕೊಳ್ಳಿ. ಬಳಿಕ 'e KYC' ಅಥವಾ 'Link Aadhaar' ಆಯ್ಕೆ ಮಾಡಿ. ಅಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿ ಆಧಾರ್‌ ಲಿಂಕ್‌ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ಮುಖ ದೃಢೀಕರಣದ ಆಯ್ಕೆ ದೊರೆಯುತ್ತದೆ. ಆಗ ಫೇಸ್‌ ಆರ್‌ಡಿ ಅಪ್ಲಿಕೇಶನ್‌ ಮೂಲಕ ಮುಖವನ್ನು ಸ್ಕ್ಯಾನ್‌ ಮಾಡಿದ ಬಳಿಕ ನಿಮ್ಮ ಇ-ಕೆವೈಸಿ ದೃಢೀಕರಣಗೊಳ್ಳುತ್ತದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries