ಕಾಸರಗೋಡು: ಶೋರ್ನೂರ್ ಕುಟ್ಟನಾಡು ತೊಳುಕ್ಕಾಡ್ ನಿವಾಸಿ ಸುಧೀರ್ ಎಂಬವರ ಮನೆಯಿಂದ 25ಪವನು ಚಿನ್ನಾಭರಣಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಾದ ಇಬ್ಬರನ್ನು ಪಟ್ಟಾಂಬಿ ಪೊಲೀಸರು ಬೋವಿಕ್ಕಾನದಿಂದ ಬಂಧಿಸಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಎ.ಎಚ್ ಹಾಶಿಂ ಹಾಗೂ ಕಾಸರಗೋಡು ವಿದ್ಯಾಣಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೋಜ್ ಬಂಧಿತರು.
ಸುಧೀರ್ ಮತ್ತು ಕುಟುಂಬ ಕ್ಷೇತ್ರಕ್ಕೆ ತೆರಳಿದ್ದ ಸಂದರ್ಭ ಮನೆ ಬಗಿಲು ಒಡೆದು ನುಗ್ಗಿ ಕಪಾಟಿನಲ್ಲಿರಿಸಿದ್ದ ಚಿನ್ನಾಭರಣ ಕಳವುಗೈಯಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿ ತಪಾಸಣೆ ನಡೆಸಿದಾಗ ಆರೋಪಿಗಳ ಬಗ್ಗೆ ಸುಳಿವು ಲಭಿಸಿದ್ದು, ಕಾಸರಗೋಡಿನ ಬೋವಿಕ್ಕಾನದಲ್ಲಿ ಹುಡುಕಾಟ ನಡೆಸಿ ಆರೋಪಿಗಳನ್ನುಬಂಧಿಸಲಾಗಿದೆ. ಇವರನ್ನು ವಿಚಾರಣೆಗೊಳಪಡಿಸಿದಾಗ ಹಾಶೀಂನ ಪೆರುಂಬಳದ ಮನೆಯಿಂದ 22 ಪವನು ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

