ಬದಿಯಡ್ಕ: ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರ ರೋಡ್ ಶೋ ಬದಿಯಡ್ಕದಲ್ಲಿ ಮಾರ್ಚ್ 28 ಶನಿವಾರ ನಡೆಯಲಿದೆ. ಅಂದು ಸಂಜೆ 4ಕ್ಕೆ ಬೋಳುಕಟ್ಟೆ ಮೈದಾನ ಬಳಿಯಿಂದ ರೋಡ್ ಶೊ ಆರಂಭವಾಗಲಿದೆ. ಬದಿಯಡ್ಕ ಪೇಟೆ ಸುತ್ತಿ ಪೇಟೆಯಲ್ಲಿ ಕೊನೆಗೊಳ್ಳುವುದು. ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಅವರು ಭಾಗವಹಿಸಲಿದ್ದು ಪ್ರಧಾನ ಭಾಷಣ ಮಾಡಲಿರುವರು. ಪಕ್ಷದ ಪ್ರಮುಖರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

-%20Tejaswi%20Soorya.jpg)
