ಬದಿಯಡ್ಕ: ಪಾತೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪದ ಕೆತ್ತಲ್ಪಟ್ಟ ಶಿಲೆಗಳ ಸಮರ್ಪಣೆ ಮತ್ತು ಅದರ ಶೋಭಾಯಾತ್ರೆಯ ಸಭಾ ಕಾರ್ಯಕ್ರಮ ಕುರುಮುಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಜರಗಿತು. ಪಾತೇರಿ ಶ್ರೀ ಶಂಕರನಾರಾಯಣ ದೇವಸ್ಥಾನದ ಅನುವಂಶಿಕ ಮೊಕ್ತೇಸರ ನಟೇಶ್ ಅಮ್ಮಣ್ಣಾಯ ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿದರು. ಈ ಸಂದರ್ಭ ಜೀರ್ಣೊದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ, ಕೋಶಾಧಿಕಾರಿ ಶಂಕರನಾರಾಯಣ ಮಯ್ಯ ಬದಿಯಡ್ಕ, ಡಾ. ವೇಣುಗೋಪಾಲ ಕಳೆಯತ್ತೋಡಿ, ಶಿಲ್ಪಿ ವಿಜಯ ಮೇಸ್ತ್ರಿ ಉಪ್ಪಿನಂಗಡಿ, ಶ್ರೀ ಧರ್ಮಶಾಸ್ತಾ ಸೇವಾಸಮಿತಿಯ ಅಧ್ಯಕ್ಷ ಕೆ.ವಿ.ರಮೇಶ ಶರ್ಮ ಹಾಗೂ ಭಗವದ್ಭಕ್ತರು ಪಾಲ್ಗೊಂಡಿದ್ದರು. ಸೇವಾಸಮಿತಿಯ ಕಾರ್ಯದರ್ಶಿ ನಾರಾಯಣ ಕೆ.ಎಂ.ಸ್ವಾಗತಿಸಿ, ಭಜನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯರ್ ಉಪ್ಪಂಗಳ ಮೂಲೆ ವಂದಿಸಿದರು. ನಂತರ ಮೆರವಣಿಗೆಯೊಂದಿಗೆ ಶಿಲೆಗಳನ್ನು ವಾದ್ಯಘೋಷಗಳೊಂದಿಗೆ ಶ್ರೀಕ್ಷೇತ್ರಕ್ಕೆ ತಲುಪಿಸಲಾಯಿತು. ನಾಡಿನ ಭವದ್ಭಕ್ತರು ಮೆರವಣಿಗೆಯಲ್ಲಿ ಭಕ್ತಿಭಾವಗಳೊಂದಿಗೆ ಸೇರಿಕೊಂಡರು.

.jpg)
