ಮಂಜೇಶ್ವರ: ಹೇರೂರು ತಾಡ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ ಪ್ರಯುಕ್ತ ಇತ್ತೀಚೆಗೆ ಶ್ರೀಗುರುನರಸಿಂಹ ಯಕ್ಷಬಳಗ ಮೀಯಪದವು ತಂಡದ ಯಕ್ಷಗಾನ ತಾಳಮದ್ದಳೆ ಇಂದ್ರಜಿತು ಕಾಳಗ ಪ್ರಸ್ತುತಿ ಗೊಂಡಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಭಾಗವಹಿಸಿದ್ದು ಚೆಂಡೆ ಮದ್ದಳೆಯಲ್ಲಿ ಮಧ್ವರಾಜ್ ಅಡಿಗ, ವಿಕ್ರಂ ಮಯ್ಯ ಪೈವಳಿಕೆ, ಭಾಗವಹಿಸಿದ್ದರು. ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ರಾಜಾರಾಮ ರಾವ್ ಮೀಯಪದವು, ವೇದಮೂರ್ತಿ ಹರಿನಾರಾಯಣ ಮಯ್ಯ ಬಜೆ, ಯೋಗೀಶ ರಾವ್ ಚಿಗುರುಪಾದೆ, ಗುರುರಾಜ ಹೊಳ್ಳ ಬಾಯಾರು, ಗುರುಪ್ರಸಾದ ಹೊಳ್ಳ ತಿಂಬರ, ಶಿವರಾಮ ಪ್ರಸಾದ್ ಮಯ್ಯ ಇಚ್ಲಂಗೋಡು, ಡಾ.ಅಭಿಲಾಷ್ ಮಯ್ಯ ಕಡೆಗದ್ದೆ ಭಾಗವಹಿಸಿ ಯಶಸ್ವಿಗೊಳಿಸಿದರು.

.jpg)
