HEALTH TIPS

ಪೆರಡಾಲ ದೇವಸ್ಥಾನಕ್ಕೆ ಕಂಪ್ಯೂಟರ್, ಮುದ್ರಣ ಯಂತ್ರ ಹಸ್ತಾಂತರ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಸಮಿತಿ ಮನವಿಗೆ ಸ್ಪಂದಿಸಿದ ಪ್ರತಿಷ್ಠಿತ ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ಆಡಳಿತ ಸಮಿತಿ ಶ್ರೀ ಕ್ಷೇತ್ರದ ಹೊಸ ಸೇವಾ ಕಚೇರಿಗೆ ಗಣಕೀಕೃತ ಸೇವಾ ರಸೀದಿ ವ್ಯವಸ್ಥೆಗೆ ಗಣಕ ಯಂತ್ರ ಮತ್ತು ಮುದ್ರಣ ಯಂತ್ರವನ್ನು ಸೇವಾ ರೂಪದಲ್ಲಿ ನೀಡಿದರು. ಸಹಕಾರಿ ಬ್ಯಾಂಕ್ ಆಡಳಿತ ಸಮಿತಿ ಅಧ್ಯಕ್ಷ ಗಣಪತಿ ಪ್ರಸಾದ್ ಕುಳಮರ್ವ ಕ್ಷೇತ್ರದ ಮೊಕ್ತೇಸರ ಜಗನ್ನಾಥ ರೈ ಪೆರಡಾಲ ಗುತ್ತು ಇವರಿಗೆ ಹಸ್ತಾಂತರಿಸಿದರು.

ಕ್ಷೇತ್ರದ ಅರ್ಚಕ ಶಿವರಾಂ ಭಟ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾ ಪಂಚಾಯತಿ ಸದಸ್ಯ, ಬ್ಯಾಂಕ್ ನಿರ್ದೇಶಕ ರಾಮಪ್ಪ ಮಂಜೇಶ್ವರ, ಆಡಳಿತ ಮಂಡಳಿ ಸದಸ್ಯರು, ಬ್ಯಾಂಕಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿರಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಪ್ರಸ್ತಾವಿಕ ಮಾತುಗಳನ್ನಾಡಿ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries