ಮುಳ್ಳೇರಿಯ: ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ದೇವಾಲಯದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮಗಳು ಮಾ.29ರಿಂದ 31ರ ತನಕ ನಾನಾ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಾ.28 ರಂದು ರಾತ್ರಿ 7.30ಕ್ಕೆ ಅತ್ತಾಳ, ಮಾ.29 ರಂದು ಬೆಳಗ್ಗೆ 8.30 ರಿಂದ ಗಣಪತಿ ಹೋಮ, ನವಕ, 9 ರಿಂದ ಶ್ರೀ ಅಯ್ಯಪ್ಪ ಭಜನಾ ಸಂಘ ಕುಂಟಾರು, 10 ರಿಂದ ಶ್ರೀ ಮೂಕಾಂಬಿಕಾ ಭಜನಾ ಸಂಘ ಉಯಿತ್ತಡ್ಕ, 11ಕ್ಕೆ ಹರಿಪ್ರಿಯಾ ಮಹಿಳಾ ಭಜನಾ ಸಂಘ ಮುಳ್ಳೇರಿಯ ಇವರಿಂದ ಭಜನೆ, ಮಧ್ಯಾಹ್ನ 12 ರಿಂದ ಶ್ರೀಕೃಷ್ಣ ಮಹಿಳಾ ಕುಣಿತ ಭಜನಾ ಸಂಘ ಕುಂಟಾರು ಇವರಿಂದ ಕುಣಿತ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 1.30 ರಿಂದ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ ಕೂಡ್ಲು ಇವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4.30ಕ್ಕೆ ಶ್ರೀಕೃಷ್ಣ ಬಾಲಕುಣಿತ ಭಜನಾ ಸಂಘ ಕುಂಟಾರು ಇವರಿಂದ ಕುಣಿತ ಭಜನೆ ನಡೆಯಲಿದೆ. 5.30ಕ್ಕೆ ಶ್ರೀ ಅಯ್ಯಪ್ಪ ಕುಣಿತ ಭಜನಾ ಸಂಘ ಶಕ್ತಿನಗರ ಗಾಳಿಮುಖ ಇವರಿಂದ ಭಜನೆ, 6.30ಕ್ಕೆ ತಾಯಂಬಕ, ಕುಂಟಾರು ಶಾರದಾ ಸಂಗೀತ ಶಾಲೆಯ ಮಕ್ಕಳಿಂದ ಭಕ್ತಿಗಾನಮೇಳ, ರಾತ್ರಿ 7.30ಕ್ಕೆ ಮಹಾಪೂಜೆ, ಅನ್ನದಾನ, ರಾತ್ರಿ 8.30ಕ್ಕೆ ಶ್ರೀದೇವರ ಭೂತಬಲಿ ಉತ್ಸವ, ಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ ನಡೆಯಲಿದೆ.
ಮಾ.30 ರಂದು ಬೆಳಿಗ್ಗೆ 6ರಿಂದ ಶ್ರೀ ದೇವರ ಉತ್ಸವ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಮಂತ್ರಾಕ್ಷತೆ, 10ರಿಂದ ಭಜನೆ ಶ್ರೀ ಅಣ್ಣಪ್ಪ ಪಂಜುರ್ಲಿ ಭಜನಾ ಸಂಘ ಕಟ್ಟತ್ತಬಯಲು, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, ಸಂಜೆ 6.30ಕ್ಕೆ ಓಂಕಾರ ಕುಣಿತ ಭಜನಾ ಸಂಘ ಕುಂಟಾರು ಇವರಿಂದ ಕುಣಿತ ಭಜನೆ, ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ, ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಇವರಿಂದ ಆಶೀರ್ವಚನ, ದೇಗುಲ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್.ಯು ಅಧ್ಯಕ್ಷತೆ ವಹಿಸುವರು, ಡಾ.ಶೈಲಜ ಮೂಡಿತ್ತಾಯ ಪ್ರೊ. ಆಫ್ ಫಿಸಿಯೋಲಜಿ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ, ನಿಟ್ಟೆ ವಿ.ವಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪ್ರೊ. ಡಾ.ಎಂ.ಎಸ್.ಮೂಡಿತ್ತಾಯ ಉಪಕುಲಪತಿ ನಿಟ್ಟೆ ವಿ.ವಿ. ಮಂಗಳೂರು ಇವರು ಧಾರ್ಮಿಕ ಭಾಷಣ ಮಾಡುವರು. ಈ ಸಂದರ್ಭದಲ್ಲಿ ಹಿರಿಯರಿಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 7.30ಕ್ಕೆ ರಂಗಪೂಜೆ, ಅನ್ನದಾನ, 9ರಿಂದ ಮಹಾವಿಷ್ಣು ಕೃಪಾಶ್ರಿತ ಯಕ್ಷಗಾನ ಕಲಾಸಂಘ ಕುಂಟಾರು ಇವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ.31ರಂದು ಬೆಳಿಗ್ಗೆ 9ಕ್ಕೆ ಕುಂಟಾರು ಚಾಮುಂಡಿ ದೈವದ ನೇಮ, 11.30ಕ್ಕೆ ಪಡೈ ಚಾಮುಂಡಿ ದೈವದ ನೇಮ, ಸಂಜೆ 4ಕ್ಕೆ ವೆಳುತೇಡನ್ ತರವಾಡು ಪರಿಸರದಲ್ಲಿ ಕುಂಟಾರು ಚಾಮುಂಡಿ ದೈವದ ನೇಮ ನಡೆಯಲಿದೆ.

