HEALTH TIPS

ಮಾ. 31 ರಿಂದ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನ ವಾರ್ಷಿಕ ಜಾತ್ರೆ, ಬಂಡಿ ಉತ್ಸವ

ಕುಂಬಳೆ: ಕುಂಬಳೆ ಸೀಮೆಯ ನಾಲ್ಕು ದೈವಸ್ಥಾನಗಳಲ್ಲಿ ಒಂದಾದ ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಬಂಡಿ ಉತ್ಸವ ಮಾರ್ಚ್ 30ರಿಂದ ಏಪ್ರಿಲ್ 4ರವರೆಗೆ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ಅವರ ದಿವ್ಯ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವಪೂರ್ಣವಾಗಿ ಜರುಗಲಿದೆ. 


30ರಂದು ಸಂಜೆ 4ಕ್ಕೆ ಕೋಟೆಕುಂಜ ಮಾಳ್ಯ ಮೂಲಸ್ಥಾನದಿಂದ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಕೀರ್ವಾಳು ಆಗಮಿಸಲಿದ್ದು, ರಾತ್ರಿ 7ಕ್ಕೆ ತಂತ್ರಿವರ್ಯರಿಂದ ಧ್ವಜಾರೋಹಣ, ನಂತರ ತಂಬಿಲ ಹಾಗೂ ಮಹಾಪೂಜೆ ನಡೆಯಲಿದೆ.  

ಮಾರ್ಚ್ 31ರಂದು ಸಂಜೆ 7ಕ್ಕೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೆÇೀಷಿತ ಯಕ್ಷಗಾನ ಮಂಡಳಿಯಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆ ನಡೆಯಲಿದೆ. ರಾತ್ರಿ10ಕ್ಕೆ  ಕೊಟ್ಯತ್ತಾಯನ ತಂಬಿಲ ಹಾಗೂ ಮಹಾಪೂಜೆ ಜರುಗಲಿದೆ.

ಏಪ್ರಿಲ್ 1ರಂದು ಮಧ್ಯಾಹ್ನ 1.00 ಗಂಟೆಗೆ ಶ್ರೀ ಕಿನ್ನಿಮಾಣಿ ದೈವದ ನೇಮೋತ್ಸವ ನಡೆಯಲಿದ್ದು, ಸಂಜೆ 6.30ಕ್ಕೆ ಅಮ್ಮ ಕಲಾವಿದರು, ಕುಡ್ಲ ಇವರಿಂದ 'ಆಣ್ ಮಗೆ'ಎಂಬ ತುಳು ಹಾಸ್ಯ ನಾಟಕ ಪ್ರದರ್ಶನವಾಗಲಿದೆ. ರಾತ್ರಿ 10ಕ್ಕೆ ಪಾಪೆ ಬಂಡಿ ಉತ್ಸವ, ಬಂಡಿ ಕಾಣಿಕೆ, ತಂಬಿಲ ಹಾಗೂ ಮಹಾಪೂಜೆ ನಡೆಯಲಿದೆ.

ಏ.2ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ಪೂಮಾಣಿ ದೈವದ ನೇಮೋತ್ಸವ ನಡೆಯಲಿದ್ದು, ಸಂಜೆ 7ಕ್ಕೆ ಶ್ರೀ ಅಯ್ಯಪ್ಪ ಮಹಿಳಾ ಸಂಘ, ಬೆದ್ರಡ್ಕ ಇವರಿಂದ ಫ್ಯೂಷನ್ ಕೈ ಕೊಟ್ಟ್ ಕಳಿ'ಎಂಬ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಕಣ್ಣೂರು ಮಾಳ್ಯ ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನದಿಂದ ಹಾಗೂ ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನದಿಂದ ದೈವಗಳ ಭಂಡಾರವು ಮೆರವಣಿಗೆಯೊಂದಿಗೆ ಕ್ಷೇತ್ರಕ್ಕೆ ಆಗಮಿಸಲಿದೆ. ರಾತ್ರಿ 8.30ಕ್ಕೆ ಕಲಾತಪಸ್ವಿ ಶ್ರೀ ಬಾಲಕೃಷ್ಣ ಮಾಸ್ಟರ್ ನಾಟ್ಯ ನಿಲಯ, ಮಂಜೇಶ್ವರ ಇವರ ಶಿಷ್ಯ ವೃಂದದವರಿಂದ 'ನೃತ್ಯ ಸಮನ್ವಿತಂ'ಕಾರ್ಯಕ್ರಮ ನಡೆಯಲಿದೆ.  ರಾತ್ರಿ 11ಕ್ಕೆ ಪಾಪೆ ಬಂಡಿ ಉತ್ಸವ, ವಿಶೇಷ ಸುಡುಮದ್ದು ಪ್ರದರ್ಶನ, ಬಂಡಿ ಕಾಣಿಕೆ ಹಾಗೂ ತಂಬಿಲ ಮಹಾಪೂಜೆ ನಡೆಯಲಿದೆ.

ಏಪ್ರಿಲ್ 3ರಂದು ಮಧ್ಯಾಹ್ನ 12.30ಕ್ಕೆ ಶ್ರೀ ಬೀರ್ಣಾಳ್ವ ದೈವದ ನೇಮೋತ್ಸವ ಮತ್ತು ಮಧ್ಯಾಹ್ನ 3.30 ಗಂಟೆಗೆ ಶ್ರೀ ಧೂಮಾವತೀ ದೈವದ ನೇಮೋತ್ಸವ ನಡೆಯಲಿದೆ. ರಾತ್ರಿ 8ಕ್ಕೆ ಉಜಿರೆ ಕೆರೆ ಆರಾಟು ಕಟ್ಟೆಯಲ್ಲಿ ಮಂಗಳ ಸ್ನಾನ (ಆರಾಟು) ನಡೆಯಲಿದ್ದು, ಬಳಿಕ ದೈವಸ್ಥಾನದಲ್ಲಿ ತಂತ್ರಿವರ್ಯರಿಂದ ಧ್ವಜಾವರೋಹಣ ನೆರವೇರಲಿದೆ. ನಂತರ ತಂಬಿಲ, ಮಹಾಪೂಜೆ ಹಾಗೂ ಅಯ್ಯಂಗಾಯಿ ನಡೆಯಲಿದೆ. ಏಪ್ರಿಲ್ 4ರಂದು ಬೆಳಿಗ್ಗೆ 8ಕ್ಕೆ  ಕೋಟೆಕುಂಜ ಮಾಳ್ಯ ಮೂಲಸ್ಥಾನಕ್ಕೆ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಗಳ ಕೀರ್ವಾಳು ಹಾಗೂ ಕಣ್ಣೂರು ಶ್ರೀ ಬೀರ್ಣಾಳ್ವ ದೈವದ ಮೂಲಸ್ಥಾನಕ್ಕೆ ಮತ್ತು ಪುತ್ತೂರುಕೊಟ್ಯ ಶ್ರೀ ಧೂಮಾವತೀ ದೈವಸ್ಥಾನಗಳಿಗೆ ದೈವಗಳ ಭಂಡಾರವು ಕ್ಷೇತ್ರದಿಂದ ನಿರ್ಗಮಿಸಲಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries