HEALTH TIPS

ಎಲ್‌ಪಿಜಿ ಅಭಾವ: 35 ವರ್ಷ ಹಳೆಯ ಬಯೋಗ್ಯಾಸ್ ಈ ನಗರಕ್ಕೆ ಆಸರೆ

ಪಣಜಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಕೊರತೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಡುವೆ ಗೋವಾದ (Goa) ಫಾರ್ಮ್ ಸ್ಟೇ ಸರಳ ತಂತ್ರಜ್ಞಾನ ಎಲ್ಲರ ಗಮನ ಸೆಳೆಯುತ್ತಿದೆ. ಗೋವಾದ ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನದ ಹತ್ತಿರ ಇರುವ ಕಾರ್ಮನೆ ಗ್ರಾಮದ ಜನರು ಎಲ್‌ಪಿಜಿ ಹಂಗಿಲ್ಲದೆ ಇಲ್ಲಿ ಜೀವನ ಸಾಗಿಸುತ್ತಿದ್ದಾರೆ.

ಮೊಲ್ಲೆಮ್ ರಾಷ್ಟ್ರೀಯ ಉದ್ಯಾನವನದೊಳಗಿನ ಕರ್ಮನೆ ಗ್ರಾಮದಲ್ಲಿ ನೆಲೆಗೊಂಡಿರುವ ದೂಧ್‌ಸಾಗರ್ ಪ್ಲಾಂಟೇಶನ್ ಫಾರ್ಮ್‌ಸ್ಟೇ ಇಲ್ಲಿನ ಜನರಿಗೆ ಬಹಳಷ್ಟು ನೆರವಾಗುತ್ತಿದೆ. 1987ರಲ್ಲಿ ನಿರ್ಮಿಸಲಾದ ಈ ಫಾರ್ಮ್‌ ಸ್ಟೇಯ ಜೈವಿಕ ಅನಿಲ ಡೈಜೆಸ್ಟರ್ ನಿರಂತರವಾಗಿ ವಿದ್ಯುತ್ ಪೂರೈಸುತ್ತಿದೆ. 35 ವರ್ಷ ಹಳೆಯ ಜೈವಿಕ ಅನಿಲ ವ್ಯವಸ್ಥೆಯು ಇನ್ನೂ ಕೂಡ ಕಾರ್ಯ ನಿರ್ವಹಿಸುತ್ತಿದೆ.

ವಿಡಿಯೊ ನೋಡಿ:

1987ರಲ್ಲಿ ನಿರ್ಮಿಸಲಾದ ಸರಳ ಬಯೋಗ್ಯಾಸ್ ಘಟಕ ಇಂದಿಗೂ ಸುಸ್ಥಿತಿಯಲ್ಲಿದ್ದು, ಇಡೀ ಗ್ರಾಮದ ಅಡುಗೆ ಮನೆಯ ಇಂಧನದ ಅಗತ್ಯವನ್ನು ಪೂರೈಸುತ್ತಿದೆ. "ನಮ್ಮಲ್ಲಿ ಅನಿಲ ಕೊರತೆಯಿಲ್ಲ, ನಮ್ಮಲ್ಲಿ ಜೈವಿಕ ಅನಿಲವಿದೆ" ಎಂದು ಸೆಟಪ್ ವಿವರಿಸುವ ವ್ಯಕ್ತಿ ಹೇಳುತ್ತಾರೆ. ಡೈಜೆಸ್ಟರ್‌ನ ಮೇಲೆ ನಿಂತು, ಸರಳ ಪೈಪ್ ಟ್ಯಾಂಕ್ ನೇರವಾಗಿ ಅಡುಗೆಮನೆಗೆ ಹೇಗೆ ಸಂಪರ್ಕಿಸುತ್ತದೆ ಎಂಬುದನ್ನು ಅವರು ತೋರಿಸಿದ್ದಾರೆ.
ಸ್ಥಳೀಯ ಮೇಸ್ತ್ರಿಯೊಬ್ಬರು ನಿರ್ಮಿಸಿರುವ ಇದು ಟ್ಯಾಂಕ್ ಮತ್ತು ಅನಿಲವನ್ನು ಸಾಗಿಸಲು ಮೇಲ್ಭಾಗದಲ್ಲಿ ಜೋಡಿಸಲಾದ ಪೈಪ್ ಒಳಗೊಂಡಿದೆ. ಹಸುವಿನ ಸಗಣಿ ಮತ್ತು ತ್ಯಾಜ್ಯ ನೀರಿನ ಈ ಮಿಶ್ರಣವು ಜೈವಿಕ ಅನಿಲವನ್ನು ಉತ್ಪಾದಿಸುತ್ತದೆ. ನಂತರ ಅಡುಗೆಗೆ ಬಳಸಲಾಗುತ್ತದೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ʼʼನಮ್ಮ ಶಾಲಾ ಪುಸ್ತಕಗಳಲ್ಲಿ ನಾವೆಲ್ಲರೂ ಜೈವಿಕ ಅನಿಲವನ್ನು ಓದಿದ್ದೇವೆ. ನಾವು ಭಾರತೀಯರು ಸರಳ ಪರ್ಯಾಯ ಮಾರ್ಗ ಹೊಂದಿದ್ದರೂ ಯಾವಾಗಲೂ ಪಾಶ್ಚಿಮಾತ್ಯ ತಂತ್ರಗಳಿಗೆ ಆಸಕ್ತಿ ನೀಡುತ್ತೇವೆʼʼ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries