HEALTH TIPS

ಇಂಜೆಕ್ಷನ್​ ಭಯಕ್ಕೆ ರೇಬಿಸ್​ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು; 9 ವರ್ಷದ ಬಾಲಕಿ ಸಾವು

ಮುಂಬೈ: ಎಲ್ಲರಿಗೂ ಒಂದಿಲ್ಲ ಒಂದು ಫೋಬಿಯಾ ಇದ್ದೇ ಇರುತ್ತದೆ. ಕೆಲವರಿಗೆ ಜಿರಳೆ ಸೇರಿದಂತೆ ಹಲವು ಕೀಟಗಳ ಕಂಡರೆ ಭಯವಿದ್ದರೆ, ಇನ್ನು ಕೆಲವರಿಗೆ ನೀರು, ಬೆಂಕಿ, ಕೆಲವೊಂದು ಆಹಾರದ ಬಗ್ಗೆ ಹೆದರಿಕೆ ಇರುತ್ತದೆ. ಆದರೆ, ಮುಂಬೈನಲ್ಲಿ ಬಾಲಕಿಯೊಬ್ಬಳಿಗಿದ್ದ ಇಂಜೆಕ್ಷನ್​ ಫೋಬಿಯಾ, ಆಕೆಯನ್ನು ಸದ್ಯ ಸಾವಿನ ಮನೆಗೆ ದೂಡುವಂತೆ ಮಾಡಿದೆ.

ಇಂಜೆಕ್ಷನ್​ ಭಯದಿಂದ, ನಾಯಿ ಕಚ್ಚಿದ್ದರೂ ರೇಬಿಸ್​ ಲಸಿಕೆ (Rabies Shot)ಹಾಕಿಸಿಕೊಳ್ಳದ ಕಾರಣ, ಮುಂಬೈನಲ್ಲಿ ಒಂಬತ್ತು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಬೆಳಕಿಗೆ ಬಂದಿದೆ. 4ನೇ ತರಗತಿ ಓದುತ್ತಿರುವ ಕೌಶಿಶ್​ ಸಹಾನಿ ಮೃತಪಟ್ಟ ಬಾಲಕಿ ಎನ್ನಲಾಗಿದೆ. ಇಂಜೆಕ್ಷನ್​ ಭಯದಿಂದ ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದದ್ದೇ ಸಾವಿಗೆ ಕಾರಣ ಎಂದು ವೈದ್ಯಕೀಯ ಮರಣೋತ್ತರ ಪರೀಕ್ಷೆಗಳು ದೃಢಪಡಿಸಿವೆ.

ಬಾಲಕಿಗೆ ಆಗಿದ್ದು ಏನು?

ಆರು ತಿಂಗಳ ಹಿಂದೆ ಅಜ್ಜಿಯೊಂದಿಗೆ ಪ್ರಯಾಣ ಬೆಳೆಸಿದ್ದಾಗ ಕೌಶಿಶ್​ ಸಹಾನಿಗೆ ನಾಯಿಯೊಂದು ಕಚ್ಚಿತ್ತು. ಜೊತೆಯಲ್ಲಿದ್ದ ಅಜ್ಜಿ ತಡ ಮಾಡದೇ ಅಂದೇ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ರೇಬಿಸ್​ ಲಸಿಕೆ ಹಾಕಿಸಿಕೊಳ್ಳಲು ಒತ್ತಾಯಿಸಿದರು. ಆದರೆ, ಆಕೆ ಭಯಪಟ್ಟು ಇಂಜೆಕ್ಷನ್​ ಹಾಕಿಸಿಕೊಳ್ಳಲು ಒದ್ದಾಡಿದಳು. ಎಷ್ಟೇ ಒತ್ತಾಯ ಮಾಡಿದರೂ ಪಟ್ಟು ಸಡಲಿಸಲೇ ಇಲ್ಲ. ಪೋಷಕರು ಸುಮ್ಮನಾದರು.
ಮುಂದುವರೆದು, ಕೌಶಿಶ್​ ಸಹಾನಿಗೆ ನಾಯಿ ಕಚ್ಚಿದ ಕೆಲವು ದಿನದ ನಂತರ, ಮೊದಲಿನಂತೆ ನಡೆಯಲು, ಮಾತನಾಡಲು ಶುರು ಮಾಡಿದಳು. ಸಹಪಾಠಿಗಳೊಂದಿಗೆ ಆಕ್ಟೀವ್​ ಆಗಿಯೇ ಇದ್ದಳು. ಇದನ್ನು ಕಂಡ ಪೋಷಕರು ಲಸಿಕೆಯ ಅಗತ್ಯವಿಲ್ಲ ಎಂದು ಭಾವಿಸಿದರು. ಇನ್ನೆಂದು ಚುಚ್ಚುಮದ್ದು ಹಾಕಿಸಿಕೊಳ್ಳಲು ಅವರು ಆಕೆಯ ಮೇಲೆ ಒತ್ತಡ ಹೇರಲೇ ಇಲ್ಲ.
ಇದನ್ನು ಓದಿ:ಬೈಕ್‌ನಿಂದ ಬಿದ್ದು ಮಹಿಳೆ ಸಾವು

ರೇಬಿಸ್​ ಲಸಿಕೆ ಹಾಕಿಸಿಕೊಳ್ಳದೇ ಬಾಲಕಿ ಸಾವು

ಆದರೆ, ಕೌಶಿಶ್​ನ ಸ್ಥಿತಿ ಹಾಗೆಯೇ ಇರಲಿಲ್ಲ. ಕೆಲವು ದಿನಗಳ ಹಿಂದೆ ಆಕೆಗೆ ಆರೋಗ್ಯ ಹದಗೆಟ್ಟಿತ್ತು. ಸೋಮವಾರ ಮುಂಬೈನ ಕಸ್ತೂರ್​ ಬಾ ಆಸ್ಪತ್ರೆಯಲ್ಲಿ ಆಕೆಯನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಳು ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ.
ಸದ್ಯ ವೈದ್ಯರು ಘಟನೆ ಬಗ್ಗೆ ಮಾತನಾಡಿದ್ದು, ಬೆಕ್ಕು ಅಥವಾ ನಾಯಿ ಯಾವುದೇ ಪ್ರಾಣಿ ಕಚ್ಚಿದರು ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ. ಮಕ್ಕಳು ಲಸಿಕೆ ಹಾಕಿಸಿಕೊಳ್ಳಲು ಹಿಂಜರಿದರೂ ಸಹ ಪೋಷಕರು ನಿರ್ಲಕ್ಷ್ಯವಹಿಸಬೇಡಿ ಎಂದು ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries