HEALTH TIPS

ಮಹಾರಾಷ್ಟ್ರದಲ್ಲಿ ಅನಿಲ ಸೋರಿಕೆ: 458 ಜನರ ಸ್ಥಳಾಂತರ

ಪಾಲ್ಘರ್‌: ಮಹಾರಾಷ್ಟ್ರ ಪಾಲ್ಘರ್‌ ಜಿಲ್ಲೆಯ ಕೈಗಾರಿಕಾ ವಲಯದಲ್ಲಿರುವ ರಾಸಾಯನಿಕ ಘಟಕದಲ್ಲಿ ಸೋಮವಾರ ಓಲಿಯಂ ಅನಿಲ (ಸಲ್ಪ್ಯೂರಿಕ್‌ ಆಮ್ಲ) ಸೋರಿಕೆಯಾಗಿದ್ದು, ಘಟಕದಿಂದ 458 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಓಲಿಯಂ ಅನಿಲ ಸೋರಿಕೆಯಿಂದ ಕೆಲವರಿಗೆ ಕಣ್ಣಿನ ಉರಿ ಉಂಟಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಭಾಗೇರಿಯಾ ಕೆಮಿಕಲ್ಸ್‌ ಕಂಪನಿಯ ಘಟಕದಿಂದ ಈ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ತಕ್ಷಣವೇ ಅಗ್ನಿಶಾಮಕ ದಳ, ಪೊಲಿಸ್‌ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಭಾಯಿಸಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.

'458 ಜನರನ್ನು ಘಟಕದಿಂದ ಸ್ಥಳಾಂತರಿಸಲಾಗಿದ್ದು, ಕೆಲವರಿಗೆ ಕಣ್ಣಿನ ಉರಿ ಕಾಣಿಸಿಕೊಂಡಿದೆ. ಮೂವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ' ಎಂಬುದಾಗಿ ಜಿಲ್ಲಾಡಳಿತದ ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries