HEALTH TIPS

'ತ್ಯಾಜ್ಯ ಮುಕ್ತ ಕೇರಳ' ಯೋಜನೆ- ಜಿಲ್ಲೆಯಲ್ಲಿ 51 'ಟೇಕ್ ಎ ಬ್ರೇಕ್' ಕೇಂದ್ರಗಳ ಯಶಸ್ವೀ ಕಾರ್ಯಾರಂಭ

ಕಾಸರಗೋಡು: ರಾಜ್ಯ ಸರ್ಕಾರದ 'ತ್ಯಾಜ್ಯ ಮುಕ್ತ ಕೇರಳ' ಯೋಜನೆಯ ಅಂಗವಾಗಿ ಜಿಲ್ಲೆಯಲ್ಲಿ ಸ್ಥಳೀಯಾಡಳಿತ ಇಲಾಖೆ ಮತ್ತು ಶುಚಿತ್ವ ಮಿಷನ್ ಜಂಟಿಯಾಗಿ ಜಾರಿಗೆ ತಂದಿರುವ 'ಟೇಕ್ ಎ ಬ್ರೇಕ್' ಯೋಜನೆ ಯಶಸ್ವಿಯಾಗಿ ಜಾರಿಗೊಳ್ಳುತ್ತಿದೆ.  ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ಸ್ವಚ್ಛ ಮತ್ತು ಸುರಕ್ಷಿತ ರಸ್ತೆಬದಿಯ ಶೌಚಗೃಹ ಮತ್ತು ವಿಶ್ರಾಂತಿ ಪ್ರದೇಶಗಳನ್ನು ಒದಗಿಸುವ ಗುರಿಯೊಂದಿಗೆ ಯೋಜನೆ ಆರಂಭಿಸಲಾಗಿದೆ.  ಜಿಲ್ಲೆಯಲ್ಲಿ ಒಟ್ಟು 51 ಕೇಂದ್ರಗಳ ನಿರ್ಮಾಣಕಾರ್ಯ ಪೂರ್ಣಗೊಳಿಸಿದೆ. 


ಜಿಲ್ಲೆಯಲ್ಲಿ ಒಟ್ಟು 59 ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದ್ದು, ಪೂರ್ಣಗೊಂಡ ನಿರ್ಮಾಣಗಳಲ್ಲಿ ಎಲ್ಲಾ 51 ಕೇಂದ್ರಗಳನ್ನು ಸಾರ್ವಜನಿಕರಿಗೆ ತೆರೆದುಕೊಡಲಾಗಿದೆ. ರೈಲ್ವೆ ನಿಲ್ದಾಣ ರಸ್ತೆ ಅಭಿವೃದ್ಧಿಯ ಸಂಬಂಧ ಕಾಸರಗೋಡು ನಗರಸಭೆಯಲ್ಲಿ ಒಂದು ಕೇಂದ್ರವನ್ನು ಕೆಡವಲಾಗಿದ್ದು,  ಪ್ರಸಕ್ತ ಕಾಸರಗೋಡು ಮತ್ತು ಕಾಞಂಗಾಡು ನಗರಸಭಾ ವ್ಯಾಪ್ತಿಯಲ್ಲಿ  ತಲಾ ಮೂರು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ 45 ಟೇಕ್ ಎ ಬ್ರೇಕ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು,  ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿ ಆರು ಕೇಂದ್ರಗಳ ನಿರ್ಮಾಣವು ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ.

ಉದ್ಘಾಟನೆಗೆ ಸಿದ್ಧ:

ಮಡಿಕೈ ಗ್ರಾಮ ಪಂಚಾಯಿತಿಯಲ್ಲಿರುವ ಬಂಗಳಂ ಹಾಗೂ ವಲಿಯಪರಂಬ ಗ್ರಾಮ ಪಂಚಾಯಿತಿಯ ಒರಿಪುಲಿಮಠದಲ್ಲಿ ನಿರ್ಮಿಸಲಾದ ಕೇಂದ್ರವು ಉದ್ಘಾಟನೆಗೆ ಸಿದ್ಧಗೊಂಡಿದೆ.

ಮಂಗಲ್ಪಾಡಿ ಗ್ರಾಮ ಪಂಚಾಯಿತಿಯ ಉಪ್ಪಳ ಮೀನು ಮಾರುಕಟ್ಟೆಯ ಬಳಿಯ ಕೇಂದ್ರದ ನೆಲ ಮಹಡಿ ರಚನೆಕೆಲಸ ಪೂರ್ಣಗೊಂಡಿದ್ದರೆ, ಮೊದಲ ಮಹಡಿಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ದೇಲಂಪಾಡಿ ವೆಲ್ಲಚ್ಚೇರಿಯಲ್ಲಿ ಕೇಂದ್ರದ ಕೆಲಸ ಪ್ರಗತಿಯಲ್ಲಿದೆ.  

ಶೌಚಗೃಹಗಳನ್ನು ನವೀಕರಿಸುವುದು, ಮಹಿಳೆಯರು ಮತ್ತು ಮಕ್ಕಳು ಯಾವುದೇ ಸಮಯದಲ್ಲಿ ಸುರಕ್ಷಿತವಾಗಿ ಬಳಸಬಹುದಾದ ಗುಣಮಟ್ಟದ ಶೌಚಗೃಹ ಸಂಕೀರ್ಣ ಮತ್ತು ವಿಶ್ರಾಂತಿ ಕೇಂದ್ರಗಳನ್ನು ನಿರ್ಮಿಸುವಲ್ಲೂ ಮಿಷನ್ ಗಮನಹರಿಸುತ್ತಿದೆ.


ಅಭಿಮತ:

ಕೇರಳದಲ್ಲಿ ಸಮಗ್ರ ಶುಚಿತ್ವ, ಅಭಿವೃದ್ಧಿಯ ಗುರಿಯೊಂದಿಗೆ ಶುಚಿತ್ವ ಮಿಷನ್ ಜಾರಿಗೆ ತಂದಿರುವ ಪ್ರಮುಖ ಸಾರ್ವಜನಿಕ ಶೌಚಗೃಹ ಸಂಕೀರ್ಣ ನಿರ್ಮಾಣಕಾರ್ಯಗಳು  ಟೇಕ್ ಎ ಬ್ರೇಕ್ ಯೋಜನೆ ಉದ್ದೇಶವಾಗಿದೆ.  ಇವುಗಳನ್ನು ಮುಖ್ಯವಾಗಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ, ಬಸ್ ನಿಲ್ದಾಣ, ವಾಣಿಜ್ಯ ಸಂಕೀರ್ಣ ಮತ್ತು ಜನದಟ್ಟಣೆಯ ಇತರ ಪ್ರದೇಶಗಳಲ್ಲಿ ನಿರ್ಮಿಸಲಾಗುತ್ತಿದೆ.

ಪಿ.ಜಯನ್ ಜಿಲ್ಲಾ ಸಂಯೋಜಕ, 

ಜಿಲ್ಲಾ ಶುಚಿತ್ವ ಮಿಷನ್ ಕಾಸರಗೋಡು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries