ಕಾಸರಗೋಡು: ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆಯಲ್ಲಿ ಕಾಸರಗೋಡು ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 5480 ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ. ತಲಾ 1370 ಅಧ್ಯಕ್ಷಾಧಿಕಾರಿಗಳು, ಮೊದಲ ಮತಗಟ್ಟೆ ಅಧಿಕಾರಿಗಳು ಮತ್ತು 2740 ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿ 116 ವಲಯ ಅಧಿಕಾರಿಗಳನ್ನು ನೇಮಿಸಲಾಗಿದೆ.
ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳ ಸಂಚಾರಕ್ಕಾಗಿ 612 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದ್ದು, 263 ಎಲ್‍ಎಂವಿ ಯಾ ಜೀಪ್‍ಗಳು, 176 ಮಿನಿ ಬಸ್‍ಗಳು, ಟೆಂಪೆÇೀ ಟ್ರಾವೆಲರ್‍ಗಳು ಮತ್ತು 173 ಬಸ್‍ಗಳನ್ನು ಬಳಸಲಾಗುತ್ತಿದೆ. 15 ಆಂಬ್ಯುಲೆನ್ಸ್‍ಗಳನ್ನೂ ವ್ಯವಸ್ಥೆ ಮಾಡಲಾಗಿದೆ. ಸೆಕ್ಟರಲ್ ಅಧಿಕಾರಿಗಳಿಗೆ 116 ವಾಹನಗಳನ್ನುಬಳಸಲಾಗುತ್ತದೆ.
ಈ ಬಾರಿ ಜಿಲ್ಲೆಯ ಎಲ್ಲಾ 1141 ಮತಗಟ್ಟೆಗಳಲ್ಲೂ ವೆಬ್‍ಕಾಸ್ಟಿಂಗ್ ಸ್ಥಾಪಿಸಲಾಗುವುದು. ಮತದಾನ ದಿನವಾದ ಏ. 9ರಂದು ಬೆಳಗ್ಗೆ ಕಲ್ಪಿತ ಮತದಾನ ಪ್ರಾರಂಭದಿಂದ ತೊಡಗಿ ಮತದಾನದ ಅಂತ್ಯದವರೆಗೆ ವೆಬ್ ಕ್ಯಾಮರಾ ಚಿತ್ರೀಕರಣದೊಂದಿಗೆ ನಡೆಯಲಿದ್ದು, ಮತಯಂತ್ರಗಳ ಪ್ಯಾಕಿಂಗ್ ವರೆಗಿನ ಎಲ್ಲಾ ದೃಶ್ಯಾವಳಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಿರುವ ಕಂಟ್ರೋಲ್ ರೂಮ್ ಮೂಲಕ ನೇರಪ್ರಸಾರದ ಮೂಲಕ ವೀಕ್ಷಿಸಲು ಅವಕಾಶವಿದೆ.
ಜಿಲ್ಲೆಯಲ್ಲಿ ಐದು ಮತಗಟ್ಟೆಗಳನ್ನು ಮಹಿಳೆಯರೇ ನಿರ್ವಹಿಸಲಿದ್ದು, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲಾ ಮತಗಟ್ಟೆ ಅಧಿಕಾರಿಗಳು ಮಹಿಳೆಯರೇ ಕರ್ತವ್ಯದಲ್ಲಿರಲಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಒಟ್ಟು ಐದು ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳೆಯರು ನಿರ್ವಹಿಸುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಇನ್ನೂ ಐದು ಮಾದರಿ ಮತಗಟ್ಟೆಗಳನ್ನು ಗುರುತಿಸಲಾಗಿದೆ.

