HEALTH TIPS

ಎನ್.ಎಚ್. 66 ರಲ್ಲಿ ಪ್ರತಿಭಟನಾ ರೋಡ್ ಶೋಗೆ ಬಳಸಲಾದ ವಾಹನ ಫಿಟ್‍ನೆಸ್ ಪ್ರಮಾಣಪತ್ರವನ್ನು ಹೊಂದಿಲ್ಲ ಎಂದು ದೂರು: ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಸ್ ವಿರುದ್ಧ ಪ್ರಕರಣ ದಾಖಲು!

ಕೋಝಿಕೋಡ್: ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಸ್ ಅವರು ರಾ.ಹೆದ್ದಾರಿ 66 ರಲ್ಲಿ ಪ್ರತಿಭಟನಾ ರೋಡ್ ಶೋಗೆ ಬಳಸಲಾದ ವಾಹನವು ಫಿಟ್‍ನೆಸ್ ಪ್ರಮಾಣಪತ್ರವನ್ನು ಹೊಂದಿರಲಿಲ್ಲ ಎಂದು ದೂರು ದಾಖಲಿಸಲಾಗಿದೆ. ಬಿಜೆಪಿ ಕೋಝಿಕೋಡ್ ನಗರ ಜಿಲ್ಲಾಧ್ಯಕ್ಷ ಅಡ್ವ. ಪ್ರಕಾಶ್ ಬಾಬು ಈ ಸಂಬಂಧ ದೂರು ದಾಖಲಿಸಿದ್ದಾರೆ. 


ಈ ವಿಷಯದಲ್ಲಿ ಕ್ರಮ ಕೈಗೊಳ್ಳುವಂತೆ ಮತ್ತು ವಾಹನವನ್ನು ವಶಪಡಿಸಿಕೊಳ್ಳುವಂತೆ ಒತ್ತಾಯಿಸಿ ಆರ್.ಟಿ.ಒ ಜಾರಿ ಇಲಾಖೆಗೆ ದೂರು ಸಲ್ಲಿಸಲಾಗಿದೆ.

ಪ್ರಧಾನಿಯವರು ಎನ್.ಎಚ್. 66 ರ ಉದ್ಘಾಟನಾ ಸಮಾರಂಭದಲ್ಲಿ ಅವರನ್ನು ನಿರ್ಲಕ್ಷಿಸಿದರು ಎಮದು ವಿರೋಧಿಸಿ ಮುಹಮ್ಮದ್ ರಿಯಾಸ್ ರಾಮನಾಟುಕ್ಕರ-ವೆಂಗಲಂ ವ್ಯಾಪ್ತಿಯಲ್ಲಿ ರೋಡ್ ಶೋ ನಡೆಸಿದರು.

ಎನ್.ಎಚ್. 66 ಪ್ರತಿ ಗಂಟೆಗೆ ನೂರಾರು ವಾಹನಗಳು ಸಂಚರಿಸುವ ಸ್ಥಳವಾಗಿದೆ. ಆದ್ದರಿಂದ, ಸೂಕ್ತವಲ್ಲದ ವಾಹನವನ್ನು ಬಳಸುವುದು ಅಪರಾಧವಾಗಿದ್ದು, ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

ಸೂಕ್ತವಲ್ಲದ ವಾಹನವನ್ನು ಚಲಾಯಿಸುವುದು ಅಪರಾಧ ಎಂದು ತಿಳಿದಿರುವ ಸಚಿವರು, ಯಾವುದೇ ಸುರಕ್ಷತೆಯಿಲ್ಲದೆ ಈ ರೀತಿ ಪ್ರಯಾಣಿಸುವುದು ಸಾರ್ವಜನಿಕರಿಗೆ ಸವಾಲು ಮತ್ತು ಕಾನೂನು ಉಲ್ಲಂಘನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾನೂನು ಉಲ್ಲಂಘಿಸಿದ ವಾಹನವನ್ನು ತಕ್ಷಣವೇ ವಶಕ್ಕೆ ಪಡೆದು ಮುಹಮ್ಮದ್ ರಿಯಾಜ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಲಾಗಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries