ಇಂದೋರ್: ವಿದ್ಯುತ್ ಚಾಲಿತ (ಇ.ವಿ) ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಮನೆಗೆ ಬೆಂಕಿ ಹೊತ್ತಿಕೊಂಡಿದ್ದರ ಪರಿಣಾಮ ಒಂದೇ ಕುಟುಂಬದ ಎಂಟು ಮಂದಿ ಸಜೀವ ದಹನವಾಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಜೇಶ್ವರಿ ಅನೆಕ್ಸ್ ಕಾಲೋನಿಯಲ್ಲಿ ಬುಧವಾರ ನಸುಕಿನ ವೇಳೆ ಘಟನೆ ನಡೆದಿದ್ದು, ಮೃತರಲ್ಲಿ ಇಬ್ಬರು ಮಕ್ಕಳು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ. ಈ ಮಧ್ಯೆ ಮನೆಯೊಳಗೆ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ.
ಒಡಿಶಾದ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಂದಿ ಸಾವು, 11 ಸಿಬ್ಬಂದಿಗೆ ಗಾಯಬೆಂಕಿ ಅವಘಡ: ₹50 ಲಕ್ಷ ಮೌಲ್ಯದ ವಸ್ತುಗಳಿದ್ದ ಎಲೆಕ್ಟ್ರಿಕಲ್ ಅಂಗಡಿ ಭಸ್ಮ
ತನಿಖೆಗೆ ಆದೇಶ...
ದುರ್ಘಟನೆ ಬೆನ್ನಲ್ಲೇ ಮಧ್ಯಪ್ರದೇಶದ ಸರ್ಕಾರವು ತಜ್ಞರ ಸಮಿತಿಯಿಂದ ಸಮಗ್ರ ತನಿಖೆಗೆ ಆದೇಶಿಸಿದೆ. ಅಲ್ಲದೆ ಇ.ವಿ ಚಾರ್ಜಿಂಗ್ ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು (ಎಸ್‌ಒಪಿ) ರಚಿಸಲು ಸೂಚಿಸಿದೆ.
ಏನಿದು ಘಟನೆ?
ಮೂರು ಅಂತಸ್ತಿನ ಮನೆಯ ಹೊರಗಡೆ ಕಾರನ್ನು ಜಾರ್ಜ್ ಮಾಡಲಾಗುತ್ತಿತ್ತು. ಈ ವೇಳೆ ಚಾರ್ಜಿಂಗ್ ಪಾಯಿಂಟ್‌ನಲ್ಲಿ ಸ್ಫೋಟ ಸಂಭವಿಸಿದೆ. ಬಳಿಕ ಬೆಂಕಿ ಮನೆಗೆ ಆವರಿಸಿತು ಎಂದು ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಸಿಂಗ್ ಹೇಳಿದ್ದಾರೆ.
ಮನೆಯ ಬಾಗಿಲುಗಳನ್ನು ಲಾಕ್ ಮಾಡಿದ್ದರಿಂದ ಪೊಲೀಸರಿಗೆ ಒಳಗೆ ಪ್ರವೇಶಿಸುವುದು ಕಷ್ಟಕರವಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಮನೆಯೊಳಗಿನ ಅಡುಗೆ ಅನಿಲ ಸಿಲಿಂಡರ್‌ಗಳು ಸ್ಫೋಟಗೊಂಡಿರುವುದು ಬೆಂಕಿಯ ತೀವ್ರತೆ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು.
ಬೆಂಕಿ ಅವಘಡದಲ್ಲಿ ಮೃತಪಟ್ಟವರ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ತನ್ಮಯ್ (6), ರಾಶಿ ಸೇಠಿಯಾ (12), ಸಿಮ್ರಾನ್ (30), ಟಿನು (35), ಸುಮನ್ ಸೇಠಿಯಾ (60), ವಿಜಯ್ ಸೇಠಿಯಾ (65), ಛೋಟು ಸೇಠಿಯಾ (22) ಮತ್ತು ಮನೋಜ್ (65) ಮೃತರು.

