HEALTH TIPS

'ನಮ್ಮೊಂದಿಗೆ ಪ್ರೇಮ, ಮದುವೆಯಾದದ್ದು ಮೋದಿಯನ್ನ': ಗೌಡರ ಕಾಲೆಳೆದ ಖರ್ಗೆ

 ನವದೆಹಲಿ: 'ಅವರು ನಮ್ಮನ್ನು ಪ್ರೇಮಿಸಿದರು. ಆದರೆ ಮೋದಿ ಅವರನ್ನ ಮದುವೆಯಾದರು' ಎಂದು ಮಾಜಿ ಪ್ರಧಾನಿ, ರಾಜ್ಯಸಭೆ ಸದಸ್ಯ ಎಚ್.ಡಿ. ದೇವೇಗೌಡ ಅವರನ್ನು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕಾಲೆಳೆದಿದ್ದಾರೆ. 


ರಾಜ್ಯಸಭೆಯಲ್ಲಿ ನಿರ್ಗಮಿತ ಸದಸ್ಯರಿಗೆ ಬುಧವಾರ ಬೀಳ್ಕೊಡುಗೆ ಭಾಷಣದ ವೇಳೆ ಎಐಸಿಸಿ ಅಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಖರ್ಗೆ ಈ ರೀತಿಯಾಗಿ ಹೇಳಿದ್ದಾರೆ.

'ದೇವೇಗೌಡ ಅವರನ್ನು ನಾನು 54 ವರ್ಷಗಳಿಂದ ಬಲ್ಲೆ. ಅವರೊಂದಿಗೆ ಬಹಳಷ್ಟು ಕೆಲಸ ಮಾಡಿದ್ದೇನೆ. ಆದರೆ ನಂತರ ಏನಾಯಿತು ಎಂದು ಗೊತ್ತಿಲ್ಲ. ನಮ್ಮನ್ನು ಪ್ರೇಮಿಸಿದರು. ಆದರೆ ಮದುವೆ ಮೋದಿ ಜೊತೆ ಆಯಿತು' ಎಂದು ವ್ಯಂಗ್ಯವಾಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ಸ್ವತಃ ಉಪಸ್ಥಿತರಿದ್ದ ಪ್ರಧಾನಿ ಮೋದಿ ನಗುಮುಖ ಬೀರಿದ್ದಾರೆ.

ಮಾತು ಮುಂದುವರಿಸಿದ ಖರ್ಗೆ, 'ರಾಜಕೀಯ ಹಾಗೂ ಸಾರ್ವಜನಿಕ ಬದುಕಿನಲ್ಲಿರುವವರಿಗೆ ದೇಶ ಸೇವೆ ಮಾಡುವ ಉತ್ಸಾಹ ಎಂದಿಗೂ ಕುಂದುವುದಿಲ್ಲ. ಯಾವತ್ತೂ ನಿವೃತ್ತಿ ಹೊಂದುವುದಿಲ್ಲ' ಎಂದು ಪ್ರತಿಪಾದಿಸಿದ್ದಾರೆ.

ಮತ್ತೊಂದೆಡೆ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, 'ದೇವೇಗೌಡರು, ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್ ತಮ್ಮ ಬದುಕಿನ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಸಂಸದೀಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಸದಾಗಿ ಆಯ್ಕೆಯಾದ ಸಂಸದರು ಅವರಿಂದ ಕಲಿತುಕೊಳ್ಳಬೇಕು' ಎಂದು ಸಲಹೆ ನೀಡಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries