HEALTH TIPS

ಲೈಂಗಿಕ ಸಂಬಂಧ ಹೊಂದಿ ಮದುವೆಯಾಗದಿರುವುದು ಅತ್ಯಾಚಾರವಲ್ಲ; ಅಲಹಾಬಾದ್ ಹೈಕೋರ್ಟ್‌

 ಲಖನೌ: ಲೈಂಗಿಕ ಸಂಬಂಧವನ್ನು ಹೊಂದಿದ ಬಳಿಕ, ಮದುವೆಯಾಗುವ ಭರವಸೆಯನ್ನು ಈಡೇರಿಸದೇ ಹೋದಲ್ಲಿ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುವುದಿಲ್ಲ ಎಂದು, ಪ್ರಕರಣವೊಂದರಲ್ಲಿ ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಅಜಯ್ ಸೈನಿ ಎಂಬಾತ ತನಗೆ ಮತ್ತು ಬರುವ ಪಾನೀಯವನ್ನು ನೀಡಿ, ಬಳಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 


ಮದುವೆಯಾಗುವುದಾಗಿ ಭರವಸೆ ನೀಡಿ ಮೂರು ವರ್ಷ ಲೈಂಗಿಕ ಶೋಷಣೆ ಮುಂದುವರಿಸಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸುವ ವೇಳೆ, ನ್ಯಾಯಮೂರ್ತಿ ಅವಿನಾಶ್‌ ಸಕ್ಸೇನಾ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ.

'ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ಸಂಪರ್ಕ ಬೆಳೆಸಿದ ನಂತರ ಓಡಿಹೋದ ಪ್ರಕರಣ ಇದಲ್ಲ. ಇವರ ಸಂಬಂಧವು ಮೂರು ವರ್ಷ ಮುಂದುವರಿದಿದೆ. ಇದು ದೀರ್ಘ ಅವಧಿಯೇ ಆಗಿದೆ. ಮದುವೆಯಾಗಿಲ್ಲ ಎಂಬ ಕಾರಣಕ್ಕೆ, ಇಬ್ಬರೂ ಭಾವನಾತ್ಮಕ ಸಂಬಂಧ ಹೊಂದಿದ್ದ ಸಮಯದಲ್ಲಿ ನಡೆದ ಲೈಂಗಿಕ ಸಂಬಂಧವು ಅತ್ಯಾಚಾರವಲ್ಲ' ಎಂದಿದೆ.

'ಅತ್ಯಾಚಾರ ಎಂಬುದು ಅತ್ಯಂತ ಗಂಭೀರ ಸ್ವರೂಪದ ಅಪರಾಧ. ಬಲವಂತವಾಗಿ ಲೈಂಗಿಕ ಹಿಂಸೆ ನೀಡುವ ಸಂದರ್ಭಗಳಲ್ಲಿ ಮಾತ್ರವೇ ಅದು ಅತ್ಯಾಚಾರ ಎಂದು ಆರೋಪಿಸಬಹುದು. ಸಂಬಂಧ ಹಾಳಾದ ಮಾತ್ರಕ್ಕೆ ಅತ್ಯಾಚಾರದ ಆರೋಪ ಹೊರಿಸುವುದು ಆ ಅಪರಾಧದ ಗಂಭೀರತೆಯನ್ನು ಕಡಿಮೆ ಮಾಡುತ್ತದೆ. ಆರೋಪಿಗೆ ಇದರಿಂದ ಗಂಭೀರ ಕಳಂಕ ತರುತ್ತದೆ. ಈ ವಿಷಯದಲ್ಲಿ ಕ್ರಿಮಿನಲ್‌ ಕಾನೂನಿನ ಬಳಕೆಯು ಖಂಡನೆಗೆ ಅರ್ಹವಾಗಿದೆ' ಎಂದಿದೆ.

ಮುರಿದುಹೋದ ಅಥವಾ ವಿಫಲವಾದ ಸಂಬಂಧಗಳಿಗೆ ಅಪರಾಧದ ಬಣ್ಣ ನೀಡುವ ಆತಂಕಕಾರಿ ಪ್ರವೃತ್ತಿಯನ್ನು ಹಲವು ಬಾರಿ ಗಮನಿಸಲಾಗಿದೆ ಎಂದು ‍ಪೀಠವು ಕಳವಳ ವ್ಯಕ್ತಪಡಿಸಿತು. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries