HEALTH TIPS

ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ: ದೇವೇಗೌಡ, ಖರ್ಗೆ, ಶರದ್ ಪವಾರ್ ಶ್ಲಾಘಿಸಿದ ಮೋದಿ

 ನವದೆಹಲಿ‌: ಸಂಸತ್ತನ್ನು ಮುಕ್ತ ವಿಶ್ವವಿದ್ಯಾಲಯ ಎಂದಿರುವ ಪ್ರಧಾನಿ ನರೇಂದ್ರ ಮೋದಿ, ರಾಜಕೀಯದಲ್ಲಿ ಪೂರ್ಣವಿರಾಮವಿಲ್ಲ ಎಂದಿದ್ದಾರೆ. 


ರಾಜ್ಯಸಭೆಯಲ್ಲಿ ನಿರ್ಗಮಿತ 59 ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲರ ಕೊಡುಗೆಯನ್ನು ಶ್ಲಾಘಿಸಿದ್ದಾರೆ. ಇಂತಹ ಕ್ಷಣಗಳು ಪಕ್ಷಗಳ ಎಲ್ಲೆಯನ್ನು ಮೀರಿ ನಮ್ಮನ್ನು ಭಾವನಾತ್ಮಕವಾಗಿಸಿಬಿಡುತ್ತವೆ.

ನಿಮ್ಮ (ನಿರ್ಗಮಿತ ಸದಸ್ಯರು) ಅನುಭವ ದೇಶಕ್ಕೆ ಯಾವಾಗಲೂ ದಾರಿದೀಪ ಎಂದಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಪಿ-ಎಸ್‌ಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಶ್ಲಾಘಿಸಿದ ಮೋದಿ, ಇವರು ತಮ್ಮ ಜೀವನದ ಅರ್ಧದಷ್ಟು ಕಾಲ ಸಂಸದೀಯ ಪ್ರಕ್ರಿಯೆಗಳಲ್ಲಿಯೇ ಕಳೆದ ದಿಗ್ಗಜರು ಎಂದಿದ್ದಾರೆ.

ಅವರು ಸದನಕ್ಕೆ ಇಷ್ಟೊಂದು ಸಮರ್ಪಣಾಭಾವದಿಂದ ಹಾಜರಾಗುವುದನ್ನು ಮುಂದುವರಿಸುವ ರೀತಿ ಎಲ್ಲಾ ಹೊಸ ಸಂಸದರು ಕಲಿಯಬೇಕು ಹಾಗೂ ಇದು ನಿಜಕ್ಕೂ ಅನುಕರಣೀಯ. ಇಷ್ಟು ದೀರ್ಘಾವಧಿಯ ರಾಜಕೀಯದಲ್ಲಿ ಸಕ್ರಿಯಯಾಗಿರುವುದು ಸಣ್ಣ ಸಾಧನೆಯಲ್ಲ ಎಂದು ಮೋದಿ ಹೇಳಿದ್ದಾರೆ.

ದೆಹಲಿಯ ಬಹುಮಹಡಿ ಕಟ್ಟಡದಲ್ಲಿ ಬೆಂಕಿ: ಒಂದೇ ಕುಟುಂಬದ 7 ಮಂದಿ ಸಾವುಪ್ರಜ್ವಲ್‌ ಅಶ್ಲೀಲ ವಿಡಿಯೊ ಹಂಚಿಕೆ: 39 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್‌

ಸಂಸತ್ತಿನ ಉಭಯ ಸದನಗಳ ಮಹತ್ವವನ್ನು ವಿವರಿಸುತ್ತಾ ಮೋದಿ, ಯಾವುದೇ ನಿರ್ಧಾರಕ್ಕೆ ಎರಡನೇ ಅಭಿಪ್ರಾಯ ಪಡೆಯುವುದು ಮುಖ್ಯ. ಇದರಿಂದ ಪ್ರಜಾಪ್ರಭುತ್ವದ ನಿರ್ಧಾರಗಳನ್ನು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಮಿಳಿನ ಒಂದು ಗಾದೆಯನ್ನು ಉಲ್ಲೇಖಿಸಿದ ಸಭಾಪತಿ ಸಿ.ಪಿ. ರಾಧಾಕೃಷ್ಣನ್, ಮನುಷ್ಯ ನಿವೃತ್ತನಾಗಬಹುದು, ಆದರೆ ಅವರು ಮಾಡಿದ ಸತ್ಕಾರ್ಯಗಳು ಎಂದಿಗೂ ಜೀವಂತವಾಗಿರುತ್ತವೆ ಎಂದು ಹೇಳಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries