HEALTH TIPS

ಶ್ರೀ ವಿಜಯಪುರಂ: 9 ತಿಂಗಳ ಅವಧಿಯಲ್ಲಿ ₹36,000 ಕೋಟಿ ಮೌಲ್ಯದ ಮೆಥಂಫೆಟಮೈನ್‌ ನಾಶ

ಶ್ರೀವಿಜಯ ಪುರಂ: ಅಂಡಮಾನ್‌ ಮತ್ತು ನಿಕೋಬಾರ್ ಪೊಲೀಸರು, 2024ರ ನವೆಂಬರ್‌ 23ರಂದು ಹಡಗೊಂದರಿಂದ ವಶಪಡಿಸಿಕೊಂಡಿದ್ದ ₹36,000 ಕೋಟಿ ಮೌಲ್ಯದ 6,000 ಕೆ.ಜಿಯಷ್ಟು ಮೆಥಂಫೆಟಮೈನ್‌ ಮಾದಕವಸ್ತುವನ್ನು, ಒಟ್ಟು 9 ತಿಂಗಳ ಅವಧಿಯಲ್ಲಿ ಹಂತಹಂತವಾಗಿ ನಾಶಪಡಿಸಿದ್ದಾರೆ.

2025ರ ಜೂನ್‌ 26ರಂದು ಮೆಥಂಫೆಟಮೈನ್‌ ಅನ್ನು ನಾಶಗೊಳಿಸುವ ಕಾರ್ಯಾಚರಣೆ ಆರಂಭಿಸಲಾಯಿತು. ಅದು 2026ರ ಮಾರ್ಚ್‌ 12ರಂದು ಮುಕ್ತಾಯಗೊಂಡಿದೆ. ಇದು ದೇಶದಲ್ಲಿ ಈವರೆಗೆ ನಡೆದ ಅತಿದೊಡ್ಡ ಮಾದಕವಸ್ತು ನಾಶ ಕಾರ್ಯಾಚರಣೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

ಭಾರತೀಯ ಕರಾವಳಿ ಕಾವಲು ಪಡೆಯು ನಡೆಸಿದ ಕಾರ್ಯಾಚರಣೆಯಲ್ಲಿ, ಮ್ಯಾನ್ಮಾರ್ ಪ್ರಜೆಗಳಿದ್ದ ಹಡಗಿನಿಂದ 6,000 ಕೆ.ಜಿಯಷ್ಟು ಮೆಥಂಫೆಟಮೈನ್‌ ತುಂಬಿದ್ದ 1,500 ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಬಳಿಕ ಈ ಪ್ರಕರಣದ ಕುರಿತು ತನಿಖೆ ನಡೆಸಿ, ಕಾನೂನಿನ ನಿಯಮಗಳ ಅನುಸಾರ ಮೆಥಂಫೆಟಮೈನ್‌ ಅನ್ನು ನಾಶಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries