HEALTH TIPS

ಮೋದಿಯಿಂದ ಮಾತ್ರವೇ ಪಂಜಾಬ್‌ ಕಾಪಾಡಲು ಸಾಧ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಮೊಗಾ: 'ಸಾಲ, ಮಾದಕವಸ್ತು, ಮತಾಂತರ, ಭ್ರಷ್ಟಾಚಾರ ಮತ್ತು ಗ್ಯಾಂಗ್‌ಸ್ಟರ್‌ಗಳ ಭಯದಿಂದ ಪಂಜಾಬ್‌ ಅನ್ನು ನಾಶ ಮಾಡಲಾಗಿದೆ. ಈ ಸಮಸ್ಯೆಗಳಿಂದ ರಾಜ್ಯವನ್ನು ಯಾರಾದರೂ ಕಾಪಾಡಬಲ್ಲರು ಎಂದರೆ ಅದು ನರೇಂದ್ರ ಮೋದಿ ಮತ್ತು ಬಿಜೆಪಿಯಿಂದ ಮಾತ್ರ ಸಾಧ್ಯ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

'ಪಂಜಾಬ್‌ ಬದಲಾವಣೆ ಬಯಸುತ್ತಿದೆ' ಎನ್ನುವ ಘೋಷಣೆಯೊಂದಿಗೆ ಪಂಜಾಬ್‌ನ ಮೊಗ ಪ್ರದೇಶದಲ್ಲಿ ಶಾ ಅವರು ಶನಿವಾರ ರ್‍ಯಾಲಿ ನಡೆಸಿದರು. 2027ರಲ್ಲಿ ನಡೆಯಲಿರುವ ವಿಧಾನಸಭೆ ಚುನವಾಣೆಗೆ ಬಿಜೆಪಿಯು ತನ್ನ ಪ್ರಚಾರ ಆರಂಭಿಸಿದೆ ಎಂದೂ ಶಾ ಹೇಳಿದರು.

'ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದೆವು. ಭಯೋತ್ಪಾದನೆಯು ಅಲ್ಲಿ ಕೊನೆಯುಸಿರೆಳೆಯುತ್ತಿದೆ. ನಕ್ಸಲ್‌ವಾದ ಕೂಡ ತನ್ನ ಅಂತ್ಯದಲ್ಲಿದೆ. ನಮಗೆ ಮತ ನೀಡಿ ಆಶೀರ್ವದಿಸಿ. ರಾಜ್ಯದಿಂದ ಮಾದಕವಸ್ತು ವ್ಯಾಪಾರವನ್ನು ಎರಡೇ ವರ್ಷದಲ್ಲಿ ಬುಡಸಮೇತ ಕಿತ್ತು ಹಾಕುತ್ತೇವೆ' ಎಂದು ಭರವಸೆ ನೀಡಿದರು.

'ಭಗವಂತ್‌ ಮಾನ್‌ ಅವರ ಸರ್ಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ದೆಹಲಿಯಲ್ಲಿ ಕುಳಿತಿರುವ 'ನಾಲ್ಕು ಸುಬೇದಾರರು' ಇಲ್ಲಿನ ಸಂಪತ್ತನ್ನು ಹೊತ್ತೊಯ್ಯುತ್ತಿದ್ದಾರೆ. ಇದಕ್ಕೆ ಮಾನ್‌ ಅವರಿಗೆ ನಾಚಿಕೆಯಾಗಬೇಕು. ಕಳೆದ ಬಾರಿ ಚುನಾವಣೆಯ ವೇಳೆ ನೀಡಿದ್ದ ಯಾವ ಭರವಸೆಯನ್ನೂ ಈ ಸರ್ಕಾರ ಈಡೇರಿಸಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮಿತ್‌ ಶಾ, ಕೇಂದ್ರ ಗೃಹ ಸಚಿವವರ್ಷದ ಆರಂಭದಿಂದ ಇಲ್ಲಿಯವರೆಗೆ ಮೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹತ್ಯೆಯಾಗಿದ್ದಾರೆ. ಗ್ಯಾಂಗ್‌ಸ್ಟರ್‌ಗಳು ಜನರಿಗೆ ಹಣ ಸುಲಿಗೆ ಮಾಡುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries