ನವದೆಹಲಿ (PTI): ಕಾರ್ಖಾನೆ ವ್ಯಾಜ್ಯಗಳ ಕಾಯ್ದೆ 1947ರಲ್ಲಿ ಅಡಿಯಲ್ಲಿ 'ಕಾರ್ಖಾನೆ' ಎಂದರೇನು ಎಂಬ ವ್ಯಾಖ್ಯಾನವನ್ನು ನಿಗದಿ ಮಾಡುವ ಸಂಬಂಧ ಸುಪ್ರೀಂ ಕೋರ್ಟ್ ರಚಿಸಿರುವ ಒಂಬತ್ತು ನ್ಯಾಯಮೂರ್ತಿಗಳ ಪೀಠವು ಮಾರ್ಚ್ 17ರಿಂದ ವಿಚಾರಣೆ ಆರಂಭಿಸಲಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಪಿ.ಎಸ್.ನರಸಿಂಹ, ದೀಪಂಕರ್ ದತ್ತಾ, ಉಜ್ಜಲ್ ಭುಯಾನ್, ಸತೀಶ್ ಚಂದ್ರ ಶರ್ಮಾ, ಜಾಯ್ ಮಾಲ್ಯಾ ಬಾಗ್ಚಿ, ಅಲೋಕ್ ಅರಾಧೆ ಮತ್ತು ವಿಫುಲ್ ಎಂ. ಪಂಚೋಲಿ ಅವರನ್ನು ಒಳಗೊಂಡ ಪೀಠ ವಿಚಾರಣೆ ನಡೆಸಲಿದೆ.
1978ರ ಬೆಂಗಳೂರು ಜಲ ಪೂರೈಕೆ ಮತ್ತು ಒಳಚರಂಡಿ ಮಂಡಳಿ ಪ್ರಕರಣದ ಸಂಬಂಧ ಕಾಯ್ದೆಯಲ್ಲಿ ವಿವರಿಸಲಾದ 'ಕಾರ್ಖಾನೆ'ಯ ವ್ಯಾಖ್ಯಾನ ಕುರಿತು ವಿವಾದ ಸೃಷ್ಟಿಯಾಗಿತ್ತು. ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿ ಸರ್ಕಾರಿ ಇಲಾಖೆಗಳು ಕೈಗೊಳ್ಳುವ ಚಟುವಟಿಕೆಗಳನ್ನು 'ಕಾರ್ಖಾನೆ ಚಟುವಟಿಕೆಗಳು' ಎನ್ನಬಹುದೇ ಎಂಬುದನ್ನೂ ಸೇರಿ ಹಲವು ಆಯಾಮಗಳಿಗೆ ಸಂಬಂಧಿಸಿ ಪೀಠವು ವಿಚಾರಣೆ ನಡೆಸಲಿದೆ.

