HEALTH TIPS

ಡಾಲರ್ ಎದುರು ದಾಖಲೆಯ 95 ರೂ.ಗೆ ಕುಸಿದ ರೂಪಾಯಿ ಮೌಲ್ಯ

 ರೂಪಾಯಿ ಏರಿಳಿತಗಳನ್ನು ನಿಗ್ರಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೈಗೊಂಡ ಕ್ರಮಗಳ ಹೊರತಾಗಿಯೂ ಸೋಮವಾರ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 95 ರೂ.ಗಳನ್ನು ದಾಟಿ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ.


ವಿದೇಶೀ ಷೇರುಗಳ ಹೊರ ಹರಿವು ಮತ್ತು ಜಾಗತಿಕ ಅಂಶಗಳ ಪರಿಣಾಮವಾಗಿ ಇಂದು ಡಾಲರ್ ವಿರುದ್ಧ ರೂಪಾಯಿ ಶೇ 0.3ರಷ್ಟು ಕುಸಿಯುವ ಮೂಲಕ ಕರೆನ್ಸಿ ಮೌಲ್ಯವು 95.20ಕ್ಕೆ ಇಳಿದಿದೆ.

ಬ್ಯಾಂಕ್ ಗಳ ವಿದೇಶಿ ವಿನಿಮಯಗಳ ಸ್ಥಾನಗಳ ಮೇಲಿನ ಮಿತಿಗಳನ್ನು ಬಿಗಿಗೊಳಿಸುವ RBI ಕ್ರಮವು ರೂಪಾಯಿಗೆ ಅಲ್ಪಾವಧಿ ಬೆಂಬಲ ನೀಡಿದೆ. ಆದರೆ, ಯುದ್ಧದ ಪರಿಣಾಮವಾಗಿ ತೈಲ ಬೆಲೆ ಏರಿಕೆ ಮತ್ತು ಹಣದುಬ್ಬರದ ಬೀತಿಯಂತಹ ಆಧಾರವಾಗಿರುವ ಅಂಶಗಳು ಕರೆನ್ಸಿಗೆ ಪ್ರತಿಕೂಲವಾಗಿ ಉಳಿದಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ವ್ಯವಹಾರ ದಿನದ ಅಂತ್ಯದ ವೇಳೆಗೆ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ತಮ್ಮ ನಿವ್ವಳ ಮುಕ್ತ ರೂಪಾಯಿ ಸ್ಥಾನಗಳನ್ನು 100 ದಶಲಕ್ಷ ಡಾಲರ್ ಗೆ ಮಿತಿಗೊಳಿಸುವಂತೆ ಬ್ಯಾಂಕುಗಳಿಗೆ ಶುಕ್ರವಾರ ತಡರಾತ್ರಿ RBI ನಿರ್ದೇಶಿಸಿದೆ. ಎಪ್ರಿಲ್ 10ರವರೆಗೆ ಈ ನಿಯಮ ಪಾಲಿಸಲು ಬ್ಯಾಂಕ್ ಗಳಿಗೆ ಆದೇಶಿಸಲಾಗಿದೆ. ಈ ನಡೆಯು ಊಹಾತ್ಮಕ ಸ್ಥಾನಗಳನ್ನು ಕಡಿಮೆಗೊಳಿಸುವುದು ಮತ್ತು ಕರೆನ್ಸಿ ಮಾರುಕಟ್ಟೆಯ ಚಂಚಲತೆ ಸೀಮಿತಗೊಳಿಸುವ ಗುರಿಯನ್ನು ಹೊಂದಿತ್ತು.

ಈ ಆದೇಶವನ್ನು ಅನುಸರಿಸಿದ ಬ್ಯಾಂಕ್ ಗಳು ಅಸ್ತಿತ್ವದಲ್ಲಿರುವ ಆಬ್ರಿಟ್ರೇಜ್ ವಹಿವಾಟುಗಳನ್ನು (ಅಗ್ಗವಾಗಿರುವ ಒಂದು ವಿನಿಮಯ ಕೇಂದ್ರದಲ್ಲಿ ಷೇರು ಖರೀದಿಸಿ ಇನ್ನೊಂದು ವಿನಿಮಯ ಕೇಂದ್ರದಲ್ಲಿ ಅದು ಹೆಚ್ಚು ದುಬಾರಿಯಾಗಿದ್ದರೆ ಮಾರಾಟ ಮಾಡುವುದು) ಸಡಿಲಿಸಲು ದೇಶಿ ಮಾರುಕಟ್ಟೆಯಲ್ಲಿ ಡಾಲರ್ ಗಳನ್ನು ಮಾರುವ ನಿರೀಕ್ಷೆಯಿದೆ.

ಈ ವಹಿವಾಟುಗಳು ಭಾರತೀಯ ಮಾರುಕಟ್ಟೆಯಲ್ಲಿ ಡಾಲರ್ ಗಳನ್ನು ಖರೀದಿಸಿ ಎರಡೂ ವಿಭಾಗಗಳ ನಡುವಿನ ಬೆಲೆ ವ್ಯತ್ಯಾಸದ ಲಾಭ ಪಡೆದು ನಾನ್-ಡೆಲಿವರೇಬಲ್ ಫಾರ್ವರ್ಡ್ (ಎನ್ಡಿಎಫ್) ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ಒಳಗೊಂಡಿತ್ತು.

ಇರಾನ್ ಯುದ್ಧಕ್ಕೆ ಸಂಬಂಧಿಸಿದ ಅಪಾಯ ಮತ್ತು ಹೆಚ್ಚಿನ ತೈಲ ಬೆಲೆಗಳಿಂದಾಗಿ ಏರುತ್ತಿರುವ ಚಂಚಲತೆಯಿಂದಾಗಿ ಭಾರತೀಯ ಮಾರುಕಟ್ಟೆ (ಆನ್ಶೋರ್) ಮತ್ತು NDF ಮಾರುಕಟ್ಟೆಗಳ ನಡುವಿನ ವ್ಯತ್ಯಾಸ ಇತ್ತೀಚೆಗೆ ತೀವ್ರವಾಗಿ ವಿಸ್ತರಿಸಿದೆ. ಆರ್ಬರಿಟ್ರೇಜ್ ಸ್ಥಾನಗಳ ಗಾತ್ರ 25 ಶತಕೋಟಿ ಡಾಲರ್ ನಿಂದ 50 ಶತಕೋಟಿ ಡಾಲರ್ ನಡುವೆ ಇರುವುದನ್ನು ಅಂದಾಜಿಸಲಾಗಿದೆ.

ರೂಪಾಯಿ ಮೌಲ್ಯ ಕುಸಿಯಲು ಕಾರಣವೇನು?

RBIನ ಮಧ್ಯಪ್ರವೇಶದ ಹೊರತಾಗಿಯೂ ರೂಪಾಯಿ ಮೇಲೆ ಒತ್ತಡ ಹೆಚ್ಚಿದೆ. ಪದೇಪದೆ ವಿದೇಶಿ ಷೇರುಗಳ ಹೊರಹರಿವು ಮತ್ತು ತೈಲ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಭಾರತದ ಆರ್ಥಿಕ ಸ್ವರೂಪದ ಕುರಿತಂತೆ ಕಳವಳಗಳು ಹೆಚ್ಚಾಗುತ್ತಿರುವುದು ಮುಂದುವರಿದಿದೆ. ಕಚ್ಚಾ ತೈಲದ ಬೆಲೆಗಳು ಏರುವುದರಿಂದ ಭಾರತದ ಆಮದು ಶುಲ್ಕಗಳು ಹೆಚ್ಚಾಗಿ ಚಾಲ್ತಿಖಾತೆ ಕೊರತೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ರೂಪಾಯಿ ಮೇಲೆ ಒತ್ತಡ ಹೆಚ್ಚಾಗುತ್ತದೆ.

ಷೇರು ಮಾರುಕಟ್ಟೆಗಳಲ್ಲಿ ತೀವ್ರ ಕುಸಿತದೊಂದಿಗೆ ರೂಪಾಯಿ ದುರ್ಬಲಗೊಳ್ಳುತ್ತದೆ. ಸೋಮವಾರ NIFTY ಶೇ 2ರಷ್ಟು ಕುಸಿದಿದ್ದು, 2020 ಮಾರ್ಚ್ ನಂತರದ ಅತಿ ಕೆಟ್ಟ ಮಾಸಿಕ ಕುಸಿತದ ಹಾದಿಯಲ್ಲಿದೆ. ಕುಸಿಯುತ್ತಿರುವ ಕರೆನ್ಸಿ, ಏರುತ್ತಿರುವ ತೈಲ ಬೆಲೆಗಳು ಮತ್ತು ಜಾಗತಿಕ ಅನಿಶ್ಚಿತತೆಯು ಜೊತೆಗೂಡಿ ಪರಿಣಾಮ ಬೀರಿರುವುದು ಒಟ್ಟು ಮಾರುಕಟ್ಟೆಯ ಸಂವೇದನೆಯನ್ನು ದುರ್ಬಲಗೊಳಿಸಿದೆ. ಮಾರ್ಚ್ ತಿಂಗಳಲ್ಲಿ ಈವರೆಗೆ ರೂಪಾಯಿ ಶೇ 4ರಷ್ಟು ಕುಸಿದಿದ್ದು, ಏಳು ವರ್ಷಗಳಲ್ಲಿಯೇ ಅತ್ಯಂತ ಕೆಟ್ಟ ಮಾಸಿಕ ಕಾರ್ಯಕ್ಷಮತೆಗೆ ಕಾರಣವಾಗಿದೆ.

ತೈಲ ಬೆಲೆ ಇಳಿಯುವುದು ಅಥವಾ ವಿದೇಶಿ ಹೊರ ಹರಿವು ಹಿಮ್ಮುಖ ಬದಲಾವಣೆ ಬಾರದೆ ಇದ್ದಲ್ಲಿ ರೂಪಾಯಿ ಮೇಲಿನ ಒತ್ತಡ ಮುಂದಿನ ತಿಂಗಳೂ ಮುಂದುವರಿಯುವ ಸಾಧ್ಯತೆಯಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries