ನವದೆಹಲಿ: AI ಚಾಲಿತ ಮೂಲಸೌಕರ್ಯ ವ್ಯವಸ್ಥೆಯ ವೆಚ್ಚಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರೆಯಾಗಿರುವ ಶೇ 20ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ಸಂಸ್ಥೆ ಯೋಜಿಸುತ್ತಿದೆ.
ಮೆಟಾ ಕಂಪನಿಯು ದೊಡ್ಡ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲು ಯೋಜಿಸುತ್ತಿದೆ ಎಂದು ʼರಾಯಿಟರ್ಸ್ʼ ವರದಿ ಮಾಡಿದೆ.
ಮೆಟಾ ಕಂಪನಿಯ ಕೃತಕ ಬುದ್ಧಿಮತ್ತೆ (AI) ಚಾಲಿತ ಮೂಲಸೌಕರ್ಯ ವ್ಯವಸ್ಥೆಯ ವೆಚ್ಚಗಳು ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೊರೆಯಾಗಿರುವ ಶೇ 20ರಷ್ಟು ಉದ್ಯೋಗಿಗಳನ್ನು ವಜಾ ಮಾಡಲು ಸಂಸ್ಥೆ ಯೋಜಿಸುತ್ತಿದೆ. ಉದ್ಯೋಗಿಗಳನ್ನು ತೆಗೆದು ಹಾಕಿದ ಮೇಲೆ ಂI ಚಾಲಿತ ವ್ಯವಸ್ಥೆಯನ್ನು ಇನ್ನಷ್ಟು ದಕ್ಷತೆಯಿಂದ ಕೆಲಸ ಮಾಡಲು ನೇಮಿಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.
ಮೆಟಾ ಸಂಸ್ಥೆ ಉದ್ಯೋಗ ಕಡಿತಕ್ಕೆ ಯಾವುದೇ ದಿನ ನಿಗದಿಪಡಿಸಿಲ್ಲ ಅಥವಾ ಪಟ್ಟಿಯನ್ನು ಅಂತಿಮಗೊಳಿಸಿಲ್ಲ. ಆದರೆ ಉದ್ಯೋಗ ಕಡಿತಕ್ಕೆ ಯೋಜನೆ ರೂಪಿಸುವಂತೆ ಮೆಟಾ ಉನ್ನತ ಮಟ್ಟದ ಸಿಬ್ಬಂದಿಗಳಿಗೆ ಸೂಚಿಸಿದೆ. ಉದ್ಯೋಗ ಕಡಿತ ಮಾಡುವ ಅಧಿಕಾರ ಹೊಂದಿರುವವರು ತಮ್ಮ ಹೆಸರು ಹೇಳಲಿಚ್ಛಿಸದೆ ಅನಾಮಧೇಯವಾಗಿ ವಿವರ ನೀಡಿರುವುದಾಗಿ ʼರಾಯಿಟರ್ಸ್ʼ ವರದಿ ಮಾಡಿದೆ.
"ಸೈದ್ಧಾಂತಿಕ ವಿಧಾನಗಳ ಕುರಿತಂತಹ ಊಹಾತ್ಮಕ ವರದಿಯಾಗಿದೆ" ಎಂದು ಮೆಟಾ ವಕ್ತಾರ ಆಯಂಡಿ ಸ್ಟೋನ್ ವಜಾ ಯೋಜನೆಯ ಕುರಿತ ಪ್ರಶ್ನೆಯನ್ನು ತಳ್ಳಿ ಹಾಕಿದ್ದಾರೆ. ಮೆಟಾ ಶೇ 20ರಷ್ಟು ಮಂದಿಯನ್ನು ತೆಗೆದು ಹಾಕುವುದು ನಿಜವಾದಲ್ಲಿ, 2022 ಮತ್ತು 203ರ ನಂತರದ ಅತಿದೊಡ್ಡ ಮರುರಚನೆಯಾಗುತ್ತದೆ. ಆ ಎರಡು ವರ್ಷವನ್ನು ಅದು 'ದಕ್ಷತೆಯ ವರ್ಷ' ಎಂದು ಕರೆದುಕೊಂಡಿತ್ತು. ಕಳೆದ ಡಿಸೆಂಬರ್ 31ರೊಳಗೆ ಮೆಟಾ 79,000 ಮಂದಿಯನ್ನು ನೇಮಿಸಿಕೊಂಡಿತ್ತು.
ಕಂಪನಿಯು 2022ರಲ್ಲಿ 11,000 ಸಿಬ್ಬಂದಿಯನ್ನು ಅಂದರೆ ಶೇ 13ರಷ್ಟು ಜನರನ್ನು ವಜಾಗೊಳಿಸಿದೆ. ನಾಲ್ಕು ತಿಂಗಳ ನಂತರ ಅದು ಮತ್ತೆ 10,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು.
ಕಳೆದೊಂದು ವರ್ಷದಿಂದ ಮೆಟಾ ಸಂಸ್ಥೆಯ ಸಿಇಒ ಮಾರ್ಕ್ ಜುಕರ್ಬರ್ಗ್ ಮೆಟಾವನ್ನು ಜನರೇಟಿವ್ AI ಕಡೆಗೆ ಕೊಂಡೊಯ್ಯುವ ಕಡೆಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಜನರೇಟಿವ್ ಂI ಕಡೆಗೆ ಗಮನ ಹೊರಳಿಸಲು ಕಂಪನಿ ದೊಡ್ಡ ಪ್ರಮಾಣದ ವೇತನವನ್ನು ನೀಡಿ ತಜ್ಞರನ್ನು ನೇಮಿಸಿಕೊಳ್ಳುತ್ತಿದೆ. ನಾಲ್ಕು ವರ್ಷಗಳಲ್ಲಿ ಲಕ್ಷಾಂತರ ವೇತನವನ್ನು ನೀಡಿ ಸಿಬ್ಬಂದಿಗಳನ್ನು ನೇಮಿಸಿಕೊಂಡಿದೆ. ಪ್ರಮುಖAI ಸಂಶೋಧಕರನ್ನು ತನ್ನ ತೆಕ್ಕೆಗೆ ಎಳೆದುಕೊಮಡಿದೆ. ಒಟ್ಟಿನಲ್ಲಿ ಹೊಸ ಸೂಪರ್ ಇಂಟೆಲಿಜೆನ್ಸ್ ತಂಡವನ್ನು ಕಟ್ಟಿದೆ.
2028ರ ವೇಳೆಗೆ ಡೇಟಾ ಸೆಂಟರ್ಗಳನ್ನು ನಿರ್ಮಿಸಲು 600 ಬಿಲಿಯನ್ ಡಾಲರ್ಗಳಷ್ಟು ಹೂಡಿಕೆ ಮಾಡಲು ಕಂಪನಿ ಯೋಜಿಸಿದೆ. ಮಾರ್ಚ್ ಎರಡನೇ ವಾರದ ಆರಂಭದಲ್ಲಿ ಮೆಟಾ ಎಐ ಏಜೆಂಟ್ಗಳಿಗಾಗಿ ನಿರ್ಮಿಸಲಾದ ಸಾಮಾಜಿಕ ನೆಟ್ವರ್ಕಿಂಗ್ ಪ್ಲಾಟ್ಫಾರ್ಮ್ ಮೋಲ್ಟ್ ಬುಕ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಮೆಟಾ ಚೀನೀ AI ಸ್ಟಾರ್ಟಪ್ ಮನುಸ್ ಅನ್ನು ಖರೀದಿಸಲು ಕನಿಷ್ಠ 2 ಬಿಲಿಯನ್ ಡಾಲರ್ ವೆಚ್ಚ ಮಾಡುತ್ತಿದೆ ಎಂದು ರಾಯ್ಟರ್ಸ್ ಹಿಂದೆ ವರದಿ ಮಾಡಿತ್ತು.
ದೊಡ್ಡ ತಂಡಗಳ ಬದಲಾಗಿ ಒಬ್ಬ ಅತಿ ಪ್ರತಿಭಾವಂತ ಒಬ್ಬ ವ್ಯಕ್ತಿಯಿಂದ ಕೆಲಸ ಮಾಡುವ ಪ್ರಾಜೆಕ್ಟ್ಗಳತ್ತ ಗಮನಹರಿಸುವುದಾಗಿ ಮೆಟಾ ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್ ಹೇಳಿದ್ದಾರೆ. ಹೀಗೆ ದೊಡ್ಡ ತಂಡಗಳನ್ನು ತೆಗೆದು ಪ್ರತಿಭಾವಂತರನ್ನು ಮಾತ್ರ ಉಳಿಸಿಕೊಳ್ಳುವುದು ಕಳೆದೊಂದು ವರ್ಷಗಳಿಂದ ಅಮೆರಿಕದ ಬಹುತೇಕ ತಂತ್ರಜ್ಞಾನ ಕಂಪನಿಗಳಲ್ಲಿ ಕಂಡುಬಂದಿರುವ ಬೆಳವಣಿಗೆಯಾಗಿದೆ.
ಜನವರಿಯಲ್ಲಿ ಅಮೆಝಾನ್ ಶೇ 10ರಷ್ಟು ಅಂದರೆ 16,000 ಉದ್ಯೋಗಿಗಳನ್ನು ವಜಾ ಮಾಡಿತ್ತು. ಕಳೆದ ತಿಂಗಳು ಫಿನ್ಟೆಕ್ ಕಂಪನಿ ತನ್ನ ಅರ್ಧದಷ್ಟು ಉದ್ಯೋಗಿಗಳನ್ನು ತೆಗೆದು ಹಾಕಿತ್ತು. ಂI ಸಾಧನಗಳು ಮತ್ತು ಅವುಗಳ ಬೆಳೆಯುತ್ತಿರುವ ಸಾಮರ್ಥ್ಯದಿಂದಾಗಿ ಕಂಪನಿಗಳು ಸಣ್ಣ ತಂಡಗಳಿಂದ ಕೆಲಸ ಮಾಡಲು ಸಾಧ್ಯವಾಗುತ್ತಿದೆ ಎಂದು ಸಂಸ್ಥೆಗಳು ಹೇಳಿವೆ.
ಕಳೆದ ವರ್ಷ ಮೆಟಾ ಸಂಸ್ಥೆಯ ಲ್ಲಾಮಾ 4 ಮಾಡೆಲ್ಗಳು ಯಶಸ್ಸು ಕಂಡಿರಲಿಲ್ಲ. ಹೀಗೆ ಕಂಡುಬಂದ ಹಿನ್ನಡೆಯಿಂದಾಗಿ ಬೆಹಮೂತ್ ಎನ್ನುವ ತನ್ನ ದೊಡ್ಡ ಆವೃತ್ತಿಯ ಮಾಡೆಲ್ ಅನ್ನು ಬಿಡುಗಡೆಯೇ ಮಾಡಿರಲಿಲ್ಲ. ಇದೀಗ ತನ್ನ ಸೂಪರ್‌ಇಂಟೆಲಿಜೆನ್ಸ್ ತಂಡವನ್ನು ಕಟ್ಟಿ ಹೊಸ ಮಾಡೆಲ್ ಅವಕಾಡೊ ಆವೃತ್ತಿಯನ್ನು ತರಲು ಪ್ರಯತ್ನಿಸುತ್ತಿದೆ. ಆದರೆ ಈ ಮಾಡೆಲ್ ಕೂಡ ಹಿನ್ನಡೆ ಎದುರಿಸುತ್ತಿದೆ ಎನ್ನುವ ಸುದ್ದಿ ಹರಡಿದೆ.

