ಗುವಾಹಟಿ: ಅಸ್ಸಾಂನ ಕಛಾರ್ ಜಿಲ್ಲೆಯಲ್ಲಿ ವಿದೇಶಿ ಎಂದು ಘೋಷಿಸಿದ ಬಳಿಕ ಎರಡು ವರ್ಷಗಳ ಕಾಲ ಬಂಧನದಲ್ಲಿದ್ದ ಮಹಿಳೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅಡಿ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಈ ಮಹಿಳೆಯನ್ನು 59 ವರ್ಷದ ದೀಪಾಲಿ ದಾಸ್ ಎಂದು ಗುರುತಿಸಲಾಗಿದೆ. ಇವರು ಧೊಲಾಯಿ ವಿಧಾನಸಭಾ ಕ್ಷೇತ್ರದ ಹವಾಯ್ತಾಂಗ್ ಪ್ರದೇಶದ ನಿವಾಸಿ.
ಇವರನ್ನು 2019ರ ಫೆಬ್ರವರಿಯಲ್ಲಿ ವಿದೇಶಿಗರ ನ್ಯಾಯಮಂಡಳಿ (ಎಫ್‌ಟಿ) ಅಕ್ರಮ ವಲಸಿಗರೆಂದು ಘೋಷಿಸಿತ್ತು. ಅಸ್ಸಾಂನಲ್ಲಿ ದೀಪಾಲಿ ಅವರನ್ನು ಮೊಟ್ಟಮೊದಲು ವಿದೇಶಿ ಎಂದು ಘೋಷಿಸಲಾಗಿತ್ತು.
ನ್ಯಾಯಮಂಡಳಿ ಘೋಷಿಸಿದ ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು. ಅದೇ ವರ್ಷ ಮೇ 10ರಂದು ಅವರನ್ನು ಸಿಲ್ಚಾರ್ ಬಂಧನ ಕೇಂದ್ರಕ್ಕೆ ಕಳುಹಿಸಿದ್ದರು. ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ 2021ರ ಮೇ 17ರಂದು ಜಾಮೀನಿನಲ್ಲಿ ಬಿಡುಗಡೆಯಾಗುವವರೆಗೆ ಎರಡು ವರ್ಷಗಳ ಕಾಲ ಅವರು ಬಂಧನ ಕೇಂದ್ರದಲ್ಲಿದ್ದರು ಎಂದು ಅವರ ವಕೀಲ ಧರ್ಮಾನಂದ ದೇಬ್ ತಿಳಿಸಿದ್ದಾರೆ.
ದೀಪಾಲಿ ಅವರು ಮೂಲತಃ ಬಾಂಗ್ಲಾದೇಶದ ಸಿಲೆಟ್ ಜಿಲ್ಲೆಯ ಧಿರೈ ಪೊಲೀಸ್ ಠಾಣಾ ವ್ಯಾಪ್ತಿಯ ದಿಪ್ಪುರ್ ಗ್ರಾಮದ ನಿವಾಸಿ. ಅವರು ಹಬಿಗಂಜ್ ಜಿಲ್ಲೆಯ ಬನಿಯಾಚೋಂಗ್ ಪೊಲೀಸ್ ಠಾಣಾ ವ್ಯಾಪ್ತಿಯ ಪರಾಯಿ ಗ್ರಾಮದ ಅಭಿಮನ್ಯು ದಾಸ್ ಅವರನ್ನು 1987ರಲ್ಲಿ ವಿವಾಹವಾಗಿದ್ದರು.
ಈ ದಂಪತಿ 1988ರಲ್ಲಿ ಭಾರತ ಪ್ರವೇಶಿಸಿದ್ದರು. ಕಛಾರ್ ಜಿಲ್ಲೆಗೆ ತೆರಳಿದ್ದರು. ಅನಂತರ ಅವರು ಅಲ್ಲೇ ವಾಸಿಸುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
Thane | ಸಾಮಾಜಿಕ ಮಾಧ್ಯಮ ಪ್ರಭಾವಿಯ ಹೌಸಿಂಗ್ ಸೊಸೈಟಿ ಮೇಲೆ ಗುಂಡಿನ ದಾಳಿ, ಓರ್ವನ ಬಂಧನ(w)
ಥಾಣೆ, ಮಾ. 7: ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರ ಹೌಸಿಂಗ್ ಸೊಸೈಟಿ ಮೇಲೆ ಶನಿವಾರ ಮುಂಜಾನೆ ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಶಹಬಾದ್ ಅಲಿಯಾಸ್ ಶಂಭು ಮುನ್ನಾ ಶಂಶದ್ ಖುರೇಶಿ (28)ಯನ್ನು ಬಂಧಿಸಿದ್ದಾರೆ. ಪೊಲೀಸರ ತಂಡ ಶಿಲ್ ದಾಯಿಗಡ್ ಬೀದಿಯಲ್ಲಿ ಬೆನ್ನಟ್ಟಿದಾಗ ಆತ ಐದು ಸುತ್ತು ಗುಂಡು ಹಾರಿಸಿದ್ದಾನೆ. ಇದರಿಂದ ಬೀದಿಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಖುರೇಶಿ ಹಾಗೂ ಇನ್ನೋರ್ವ ಆರೋಪಿ ಮುಂಬ್ರಾದ ಕೌಸಾ ಪ್ರದೇಶದಲ್ಲಿ ವಾಸಿಸುತ್ತಿರುವ ಉದ್ಯಮಿ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿ ನದೀಮ್ ಮೊಯಿನುದ್ದೀನ್ ಖಾನ್ (45) ಅಲಿಯಾಸ್ ಬಾಬಾ ಖಾನ್ ಅವರ ಹೌಸಿಂಗ್ ಸೊಸೈಟಿ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ಗುಂಡುಗಳು ಖಾನ್ ಅವರ ಕಾರನ್ನು ಹಾನಿಗೊಳಿಸಿವೆ. ಗಾಳಿಯಲ್ಲಿ ಒಂದು ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳ ಪರಿಶೀಲನೆ ನಡೆಸಿದ ಕೂಡಲೇ ತನಿಖಾ ತಂಡ ಕಾರ್ಯಾಚರಣೆ ಆರಂಭಿಸಿತು ಹಾಗೂ ಖುರೇಶಿಯನ್ನು ಬಂಧಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

