ಈ ವಲಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಈ ನಿರ್ಧಾರವನ್ನು ಮಾನವೀಯ ಪ್ರತಿಕ್ರಿಯೆ ಎಂದು ಅವರು ವಿವರಿಸಿದ್ದಾರೆ.
ನವದೆಹಲಿಯಲ್ಲಿ ನಡೆದ 'ರೈಸಿನಾ ಡಯಲಾಗ್' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇರಾನ್ ನೆರವು ಕೋರಿದ ಬಳಿಕ ಇರಾನ್‌ನ ಹಡಗು ಐರಿಸ್ ಲಾವನ್‌ಗೆ ಲಂಗರು ಹಾಕಲು ಭಾರತ ಅನುಮತಿ ನೀಡಿದೆ ಎಂದು ವಿವರಿಸಿದರು.
ಫೆಬ್ರವರಿ 15ರಿಂದ ಫೆಬ್ರವರಿ 26ರ ವರೆಗೆ ನಡೆದ 'ಅಂತರರಾಷ್ಟ್ರೀಯ ಹಡಗು ಪರಿಶೀಲನೆ' ಹಾಗೂ ಮಿಲನ್ 2026ರಲ್ಲಿ ಇರಾನ್‌ನ ಪಾಲ್ಗೊಳ್ಳುವಿಕೆಯ ಭಾಗವಾಗಿ ಈ ಹಡಗು ಈ ವಲಯದಲ್ಲಿ ಕಾರ್ಯಾಚರಿಸುತ್ತಿತ್ತು.
ಜೈಶಂಕರ್ ಅವರ ಪ್ರಕಾರ, ಐರಿಸ್ ಲಾವನ್ ಭಾರತದ ಜಲಭಾಗದಲ್ಲಿ ಸಂಚರಿಸುತ್ತಿದ್ದಾಗ ತೊಂದರೆ ಎದುರಿಸಿದೆ. ಈ ಹಿನ್ನೆಲೆಯಲ್ಲಿ ಇರಾನ್ ಭಾರತವನ್ನು ಸಂಪರ್ಕಿಸಿದೆ. ಭಾರತ ಈ ಮನವಿಗೆ ಮಾರ್ಚ್ 1ರಂದು ಒಪ್ಪಿಗೆ ನೀಡಿದೆ ಎಂದು ಬ್ಯಾನರ್ಜಿ ಹೇಳಿದರು.

