ಈ ಚಿನ್ನ ಕಳ್ಳ ಸಾಗಾಟ ಕಾರ್ಯಾಚರಣೆ ಆಫ್ರಿಕಾದಿಂದ ಚಿನ್ನವನ್ನು ತರುವ ಸಂಘಟಿತ ಅಂತರ ರಾಷ್ಟ್ರೀಯ ಜಾಲದ ಭಾಗವಾಗಿದೆ ಎಂಬುದು ತನಿಖೆಯ ಸಂದರ್ಭ ಜಾರಿ ನಿರ್ದೇಶನಾಲಯ ಪತ್ತೆ ಮಾಡಿದೆ.
ED ತನ್ನ ಆರೋಪ ಪಟ್ಟಿಯಲ್ಲಿ ನಟಿಯ ಸಹವರ್ತಿ ಎಂದು ಹೇಳಲಾದ ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ತರುಣ್ ಕೊಂಡುರು ಹೆಸರನ್ನು ಉಲ್ಲೇಖಿಸಿದೆ.
ರನ್ಯಾ ರಾವ್ ಹಾಗೂ ಆಕೆಯ ಸಹವರ್ತಿ 2024 ಮಾರ್ಚ್ ಹಾಗೂ 2025 ಮಾರ್ಚ್ ನಡುವೆ 102.55 ಕೋಟಿ ರೂ. ಮೌಲ್ಯದ 127.28 ಕಿ.ಗ್ರಾಂ. ಚಿನ್ನವನ್ನು ಕಳ್ಳ ಸಾಗಾಟ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕಳ್ಳ ಸಾಗಾಟ ಮಾಡಲಾದ ಚಿನ್ನವನ್ನು ಅನಂತರ ಆಭರಣ ವ್ಯಾಪಾರಿಗಳು ಹಾಗೂ ಮಧ್ಯವರ್ತಿ ಜಾಲದ ಮೂಲಕ ದೇಶಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಅವು ಹೇಳಿವೆ.

