HEALTH TIPS

ಮಧ್ಯಪ್ರಾಚ್ಯ ಬಿಕ್ಕಟ್ಟಿಂದ ಜನಸಾಮಾನ್ಯರಿಗೆ ಪೆಟ್ರೋಲ್‌-ಡೀಸೆಲ್ ದರ ಹೆಚ್ಚುತ್ತಾ? ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು?

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ, ಉಂಟಾಗಬಹುದಾದ ಕಚ್ಚಾ ತೈಲ ಪೂರೈಕೆ ಕೊರತೆ, ತೈಲ ಬೆಲೆ ಏರಿಕೆ ಸ್ಥಳೀಯವಾಗಿ ಗಂಭೀರ ಪರಿಣಾಮ ಬೀರದಂತೆ ತಡೆಯಲು, ಭಾರತ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಪ್ರಮಾಣವನ್ನು ಕಡಿತಗೊಳಿಸಲು ಮುಂದಾಗಿದೆ.

ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಾ?

ಆದರೆ ತೈಲ ಕಂಪನಿಗಳು ಬೆಲೆ ಏರಿಕೆಯ ನಷ್ಟವನ್ನು ತಾವೇ ಭರಿಸಿ, ಬೆಲೆ ಇಳಿಕೆಯಾದಾಗ ಅದನ್ನು ಸರಿದೂಗಿಸಿಕೊಳ್ಳುವ ವಿಧಾನ ಅನುಸರಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ ಏಪ್ರಿಲ್ 2022 ರಿಂದ ಚಿಲ್ಲರೆ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುದು ಗಮನಾರ್ಹ. ಹೀಗಾಗಿ ಚಿಲ್ಲರೆ ಡೀಸೆಲ್-ಪೆಟ್ರೋಲ್ ದರ ತಕ್ಷಣಕ್ಕೆ ಏರಿಕೆ ಆಗದಿರಬಹುದು, ಜನಸಾಮಾನ್ಯರು ತಕ್ಷಣವೇ ಬೆಲೆ ಏರಿಕೆಯ ಸಂಕಷ್ಟಕ್ಕೆ ಎದುರಾಗುವ ಸಾಧ್ಯತೆ ಕಡಿಮೆ ಎಂದೇ ಹೇಳಲಾಗಿದೆ.


ಸದ್ಯ ಬೆಂಗಳೂರಲ್ಲಿರುವ ಪೆಟ್ರೋಲ್-ಡೀಸೆಲ್ ದರ

ಬೆಂಗಳೂರು ಸಿಟಿ
ಡೀಸೆಲ್ 90.99
ಪೆಟ್ರೋಲ್ 102.92

ಬೆಂಗಳೂರು ಗ್ರಾಮಾಂತರ
ಡೀಸೆಲ್ 91.26
ಪೆಟ್ರೋಲ್ 103.22

ಆಮದು ಮೇಲಿನ ಪರಿಣಾಮಗಳು

ಜಾಗತಿಕ ಉದ್ವಿಗ್ನತೆಯಿಂದಾಗಿ ತೈಲ ಹಾಗೂ ಅನಿಲ ಬೆಲೆ ಏರಿಕೆ ಆಗಿವೆ
ಭಾರತವು ಕಚ್ಚಾ ತೈಲದ ಅಗತ್ಯದ ಸುಮಾರು ಶೇ.90 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ, ಅಲ್ಲದೆ ಶೇ 60-65 ರಷ್ಟು ಎಲ್‌ಪಿಜಿ ಬೇಡಿಕೆ ಹಾಗೂ ಶೇ 60ರಷ್ಟು ಎಲ್‌ಎನ್‌ಜಿ ಆಮದು ಮಾಡಿಕೊಳ್ಳುತ್ತದೆ.
ತೈಲ ಆಮದನ್ನೇ ನೆಚ್ಚಿಕೊಂಡಿರುವುದರಿಂದ ಭಾರತಕ್ಕೆ ಆಮದು ವೆಚ್ಚ ಹೆಚ್ಚಳವಾಗಿ ಹಣದುಬ್ಬರದ ಒತ್ತಡಕ್ಕೂ ಕಾರಣ ಆಗಬಹುದು.

ಇದಕ್ಕಾಗಿ ಹೆಚ್ಚು, ಆಟೋ ಇಂಧನ (ಪೆಟ್ರೋಲ್-ಡೀಸೆಲ್) ಮತ್ತು ಎಲ್‌ಪಿಜಿ ಯನ್ನು ದೇಶೀಯ ಮಾರುಕಟ್ಟೆಗೆ ನೀಡುವಂತೆ ತೈಲ ಸಂಸ್ಕರಣಾಗಾರಗಳಿಗೆ ಸೂಚಿಸುವ ಸಾಧ್ಯತೆ ಇದೆ. ಕಚ್ಚಾ ತೈಲ ಪೂರೈಕೆಯಲ್ಲಾಗುವ ಅಡಚಣೆ ಸರಿದೂಗಿಸಲು ಸಂಸ್ಕರಣಾಗಾರರು ಪರ್ಯಾಯ ಮೂಲಗಳನ್ನೂ ಹುಡುಕುತ್ತಿದ್ದಾರೆ.

ತೈಲ ಉತ್ಪಾದಿಸುವ ಕೊಲ್ಲಿರಾಷ್ಟ್ರಗಳಲ್ಲಿ, ಮಧ್ಯಪ್ರಾಚ್ಯದಲ್ಲಿ ಯುದ್ಧ ಬಿಕ್ಕಟ್ಟು, ಅಸ್ಥಿರತೆ ಕಾಡಿದಾಗಲೆಲ್ಲ ಭಾರತದ ತೈಲ ಮಾರುಕಟ್ಟೆಗೆ ಪರಿಣಾಮ ತಟ್ಟಿದೆ. ಈಗಿನ ಇರಾನ್‌ ಮೇಲಿನ ಅಮೆರಿಕ- ಇಸ್ರೇಲ್‌ನ ಜಂಟಿ ದಾಳಿಯ ಸಂದರ್ಭವೂ ಇಂಥದ್ದೇ ಮುನ್ಸೂಚನೆ ರವಾನಿಸುತ್ತಿದೆ. ಇರಾನ್‌ ಯುದ್ಧ ಪ್ರಾರಂಭವಾಗುವ ಮುನ್ನವೇ ತೈಲ ಬೆಲೆ ಏರುತ್ತಿತ್ತು. ಯುದ್ಧ ಕಾಲದಲ್ಲಿಈಗ ಇನ್ನೆಷ್ಟು ಎತ್ತರಕ್ಕೆ ಏರುತ್ತೆ ಎನ್ನುವುದೇ ಸದ್ಯದ ಪ್ರಶ್ನೆ.

ಬೆಲೆ ಏರಿಕೆ ಎಷ್ಟಾಗಿದೆ?

ಕಳೆದ ಜೂನ್‌ನಲ್ಲಿ ಇರಾನ್‌ ಮೇಲೆ ಇಸ್ರೇಲ್‌ ದಾಳಿ ಮಾಡಿದಾಗ ತೈಲವು ಬ್ಯಾರೆಲ್‌ಗೆ 70 ಡಾಲರ್‌ನಿಂದ 80 ಡಾಲರ್‌ಗೆ ಏರಿತ್ತು. ಆಗ ತಜ್ಞರು 100-120 ಡಾಲರ್‌ಗೆ ತಲುಪಬಹುದು ಎಂದೇ ವಿಶ್ಲೇಷಿಸಿದ್ದರು. ಆದರೆ, ಅದು ಕೇವಲ 12 ದಿನಗಳ ಯುದ್ಧವಷ್ಟೇ. ಈ ಬಾರಿ ಯುದ್ಧ ಯಾವಾಗ ನಿಲ್ಲುವುದು ಎಂದು ಯಾರಿಗೂ ತಿಳಿದಿಲ್ಲ. ಈಗ ಬ್ಯಾರೆಲ್‌ಗೆ 72.8 ಡಾಲರ್‌ ಇದ್ದು ಯುದ್ಧ ಹೀಗೆ ಮುಂದುವರಿದರೆ ಅಂತಿಮವಾಗಿ 100 ಮುಟ್ಟುವ ನಿರೀಕ್ಷೆಯಿದೆ.

ಹಾರ್ಮುಜ್‌ ಜಲಸಂಧಿಯ ಮೂಲಕ ಪ್ರತಿದಿನ ಸುಮಾರು 20 ದಶಲಕ್ಷ ಬ್ಯಾರೆಲ್‌ ತೈಲ ಹರಿಯುತ್ತದೆ. ಈ ಪ್ರಮಾಣವು ಭಾರತ-ಚೀನಾ ಒಟ್ಟು ದೈನಂದಿನ ಬೇಡಿಕೆಗೆ ಸರಿಸುಮಾರು ಸಮ. ಅದನ್ನು ಬದಲಾಯಿಸಲು ಯಾವುದೇ ಸುಲಭ ಮಾರ್ಗವಿಲ್ಲ. ಅಮೆರಿಕದ ಒತ್ತಡದಿಂದಾಗಿ ಭಾರತವು ರಷ್ಯಾದ ಸರಬರಾಜುಗಳನ್ನು ತಗ್ಗಿಸಿದ ನಂತರ, ಇರಾಕ್‌ ಮತ್ತು ಸೌದಿ ಅರೇಬಿಯಾದಿಂದ ತೈಲದ ಮೇಲಿನ ಅವಲಂಬನೆ ಹೆಚ್ಚಾಗಿದೆ.

ವೆನಿಜುವೆಲಾ ದಿನಕ್ಕೆ 10 ಲಕ್ಷ ಬ್ಯಾರೆಲ್‌ಗಿಂತ ಕಡಿಮೆ ಉತ್ಪಾದಿಸುತ್ತಿರುವುದರಿಂದ, ಭಾರತಕ್ಕೆ ಅದು ಪರ್ಯಾಯವಾಗಿಲ್ಲ. ಬ್ರೆಜಿಲ್‌ ಮತ್ತು ಅಮೆರಿಕದ ಪೂರೈಕೆಯನ್ನೂ ಭಾರತ ಸದ್ಯಕ್ಕೆ ನಿರೀಕ್ಷಿಸಲಾಗದು. ಯುದ್ಧಕ್ಕೆ ತೆರೆ ಬಿದ್ದರಷ್ಟೇ ತೈಲ ದರ ಏರಿಕೆ ಬ್ಯಾರೆಲ್‌ಗೆ 100 ಡಾಲರ್‌ ತಲುಪುವುದನ್ನು ತಡೆಯಬಹುದಷ್ಟೇ.

ಇನ್ನೊಂದೆಡೆ ಹಾರ್ಮುಜ್‌ ಜಲಸಂಧಿ ತಡೆಯಲ್ಪಡುವ ಭೀತಿಯ ನಡುವೆ, ಸಂಸ್ಕರಣಾಗಾರರು ಈಗಾಗಲೇ ಸಾಮರ್ಥ್ಯ ಕಾಯ್ದಿರಿಸಿಕೊಳ್ಳುವ ಬಗ್ಗೆ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ತೈಲ ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕತಾರ್ ಅನಿಲ ಸಾಗಾಣೆಯನ್ನು ಅಮಾನತುಗೊಳಿಸಿದ ನಿರ್ಧಾರ ಜಾಗತಿಕ ಮಾರುಕಟ್ಟೆಗಳಲ್ಲಿ ಆತಂಕ ಮೂಡಿಸಿದೆ.

ಆದರೆ ಸದ್ಯಕ್ಕೆ ಭಾರತೀಯ ಕಂಪನಿಗಳು ಅಮೆರಿಕ ಸೇರಿದಂತೆ ಇತರ ಮೂಲಗಳಿಂದ ಎಲ್‌ಎನ್‌ಜಿ ಪಡೆಯಲು ಅವಕಾಶ ಇದೆ. ಹಡಗುಗಳನ್ನು ಕೂಡಾ ಸೂಯೆಜ್ ಕಾಲುವೆ ಮೂಲಕ ತರಿಸಿಕೊಳ್ಳಬಹುದಾಗಿದೆ. ಅಲ್ಲದೆ ಭಾರತಕ್ಕೆ ಪರ್ಯಾಯ ತೈಲ ಪೂರೈಕೆ ಮಾರ್ಗಗಳೂ ಇವೆ, ಅಲ್ಲದೆ ಯಾರೂ ಅನಿರ್ದಿಷ್ಟವಾಗಿ ಸರಬರಾಜು ನಿಲ್ಲಿಸುವುದಿಲ್ಲ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries