ಕಾಸರಗೋಡು: ಜೀವವಿಮಾ ನಿಗಮ ಕಾಸರಗೋಡು ಶಾಖೆಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಕಾಸರಗೋಡು ನಗರಠಾಣಾ ಎಸ್.ಐ ಸಿ.ರ್ ಮೌಶಿಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಅವರು, ಸ್ವಾವಲಂಬೀ ಜೀವನದಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯ. ಇಂದು ಹಲವಾರು ಉದ್ಯೋಗಾವಕಾಶಗಳು ನಮ್ಮಲ್ಲಿದ್ದು, ಇವುಗಳ ಸುದಪಯೋಗಪಡೆದುಕೊಳ್ಳುವ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಮುಂದಾಗಬೇಕು ಎಂದು ತಿಳಿಸಿದರು.
ಭಾರತೀಯ ಜೀವ ವಿಮಾ ಕಾಸರಗೋಡು ಶಾಖೆ ಅಧೀನದಲ್ಲಿ ಕರ್ಯಕ್ರಮ ನೆರವೇರಿತು. ಎಲ್ ಐಸಿ ಕಾಸರಗೋಡು ಶಾಖಾ ಪ್ರಬಂಧಕ ಎಂ.ಪಿ. ಶ್ರೀಜಿತ್, ಮಂಜೇಶ್ವರ ಶಾಖಾ ಪ್ರಬಂಧಕ ಮನಿಶಾ ರಾಘವನ್, ಮುಳ್ಳೇರಿಯ ಶಾಖಾ ಪ್ರಬಂಧಕ ಸಿ.ಎ. ಅಭಿಲಾಷ್, ಕಾಸರಗೋಡು ಶಾಖೆಯ ಸಹಾಯಕ ಶಾಖೆಯ ಎಂ,. ಮದಿಯರಸು, ಜೀವ ವಿಮಾ ನಿಗಮ ಪ್ರತಿನಿಧಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

