HEALTH TIPS

ರಾಜ್ಯದಲ್ಲಿ ಸಪ್ಲೈಕೋ ಮಳಿಗೆಗಳ ಅವಲಂಬಿತರು 50 ಲಕ್ಷಕ್ಕೂ ಹೆಚ್ಚು ಕುಟುಂಬಗಳು: ಸಚಿವ ಜಿ.ಆರ್. ಅನಿಲ್

ಕಾಸರಗೋಡು: ಸಪ್ಲೈಕೋ ಕಾಞಂಗಾಡ್ ಡಿಪೆÇೀ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಳ್ಳಾರ್ ಗ್ರಾಮ ಪಂಚಾಯತಿಯ ಕಳ್ಳಾರ್ ಮಾವೇಲಿ ಅಂಗಡಿಯನ್ನು ಸಪ್ಲೈಕೋ ಮಾವೇಲಿ ಸೂಪರ್ ಸ್ಟೋರ್ ಆಗಿ ಮೇಲ್ದರ್ಜೆಗೇರಿಸುವುದನ್ನು ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಅಡ್ವ. ಜಿ.ಆರ್. ಅನಿಲ್ ಆನ್‍ಲೈನ್‍ನಲ್ಲಿ ಉದ್ಘಾಟಿಸಿದರು. ಶಾಸಕ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. 


ಮಾವೇಲಿ ಅಂಗಡಿಯನ್ನು ಸೂಪರ್ ಸ್ಟೋರ್ ಆಗಿ ಮೇಲ್ದರ್ಜೆಗೇರಿಸುವುದರಿಂದ ಜನರು ಒಂದೇ ಕೇಂದ್ರದಿಂದ ವಿವಿಧ ಉತ್ಪನ್ನಗಳನ್ನು ಖರೀದಿಸುವ ಸೌಲಭ್ಯವನ್ನು ಪಡೆಯುತ್ತಾರೆ ಎಂದು ಸಚಿವರು ಹೇಳಿದರು. ರಾಜ್ಯದ ವಿವಿಧ ಭಾಗಗಳಲ್ಲಿ ಹೊಸ ಸಪ್ಲೈಕೋ ಮಳಿಗೆಗಳನ್ನು ತೆರೆಯಲಾಗುತ್ತಿದೆ ಮತ್ತು ಅಸ್ತಿತ್ವದಲ್ಲಿರುವ ಮಾವೇಲಿ ಅಂಗಡಿಗಳನ್ನು ಸೂಪರ್ ಸ್ಟೋರ್‍ಗಳು, ಸೂಪರ್‍ಮಾರ್ಕೆಟ್‍ಗಳು ಮತ್ತು ಸಿಗ್ನೇಚರ್ ಮಾರುಕಟ್ಟೆಗಳಾಗಿ ವಿಸ್ತರಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಒಂದು ಕ್ಷೇತ್ರದಲ್ಲಿ ಒಂದು ಮಾವೇಲಿ ಅಂಗಡಿಯಾಗಿ ಪ್ರಾರಂಭವಾದ ಈ ಯೋಜನೆಯು ಇಂದು 1700 ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿರುವ ವ್ಯಾಪಕ ಜಾಲವಾಗಿದೆ. 13 ಸಬ್ಸಿಡಿ ಉತ್ಪನ್ನಗಳು ಸೇರಿದಂತೆ ನ್ಯಾಯಯುತ ಬೆಲೆಯಲ್ಲಿ ಸರಕುಗಳನ್ನು ಒದಗಿಸುವ ಸಪ್ಲೈಕೋ ಮಳಿಗೆಗಳು 50 ಲಕ್ಷಕ್ಕೂ ಹೆಚ್ಚು ಕುಟುಂಬಗಳ ಅವಲಂಬಿತ ಕೇಂದ್ರಗಳಾಗಿವೆ ಮತ್ತು ಸಪ್ಲೈಕೋ ಜನರನ್ನು ಬೆಲೆ ಏರಿಕೆಯ ಬೆದರಿಕೆಯಿಂದ ರಕ್ಷಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಬಿಂದು ಕೃಷ್ಣ, ಜಿಲ್ಲಾ ಪಂಚಾಯತ್ ಸದಸ್ಯೆ ರೀನಾ ಥಾಮಸ್, ಪರಪ್ಪ ಬ್ಲಾಕ್ ಪಂಚಾಯತ್ ಉಪಾಧ್ಯಕ್ಷೆ ಟಿ.ಕೆ. ದೀಪಾ, ಕಲ್ಲಾರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಎಂ.ಎಂ. ಸೈಮನ್, ಬ್ಲಾಕ್ ಪಂಚಾಯತ್ ಸದಸ್ಯೆ ನಸೀಮಾ, ಕಲ್ಲಾರ್ ಗ್ರಾಮ ಪಂಚಾಯತ್ ವಾರ್ಡ್ ಸದಸ್ಯೆ ಸನಿತಾ ಜೋಸೆಫ್, ರಾಜಕೀಯ ಮತ್ತು ಸಾಂಸ್ಕøತಿಕ ಪ್ರತಿನಿಧಿಗಳಾದ ಪಿ.ಕೆ. ರಾಮಚಂದ್ರನ್, ಸಂತೋಷ್ ವಿ. ಚಾಕೊ, ರಾಘವನ್ ಕಪ್ಪಳ್ಳಿ, ಇಬ್ರಾಹಿಂ ಚೆಮ್ಮನಾಡ್, ಎಚ್. ಲಕ್ಷ್ಮಣ ಭಟ್, ಪಿ.ಕೆ. ಸುಬೈರ್ ಮುಂತಾದವರು ಉಪಸ್ಥಿತರಿದ್ದರು. ಸಪ್ಲೈಕೋ ಕಾಂಞಂಗಾಡ್ ಡಿಪೆÇೀ ವ್ಯವಸ್ಥಾಪಕ ಎಂ. ರವೀಂದ್ರನ್ ಸ್ವಾಗತಿಸಿ, ಕಾಸರಗೋಡು ಜಿಲ್ಲಾ ಸರಬರಾಜು ಅಧಿಕಾರಿ ಜಿ. ಮಾಧವನ್ ಪೋತ್ತಿ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries