HEALTH TIPS

ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವುದು ಕೇಂದ್ರದ ಧ್ಯೇಯ-ಎಂ.ಎಲ್ ಅಶ್ವಿನಿ

ಕಾಸರಗೋಡು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಆರ್ಥಿಕ ಸುಧಾರಣೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಕಾರಣವಾಗಿದ್ದು, ನರೇಂದ್ರ ಮೋದಿ ಸರ್ಕಾರ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಮಹತ್ವ ನೀಡಿದೆ ಎಂದು  ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ತಿಳಿಸಿದ್ದಾರೆ.

ಅವರು ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಸಮಿತಿ ಅಂಬಲತ್ತರದ 'ಸ್ನೇಹದ ಮನೆ'ಯಲ್ಲಿ ಆಯೋಜಿಸಿದ್ದ ಅಂತಾರಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ  ಮಾತನಾಡಿದರು.  


ಪ್ರಧಾನಿ ನರೇಂದ್ರ ಮೋದಿನೇತೃತ್ವದ ಸರ್ಕಾರ, ರಾಷ್ಟ್ರಪತಿ ಹುದ್ದೆ ಸೇರಿದಂತೆ ಹಲವು ನಿರ್ಣಾಯಕ ಹುದ್ದೆಗಳನ್ನು ಮಹಿಳೆಯರೇ ಅಲಂಕರಿಸುವಂತೆ ಮಾಡಿದೆ.  ಅತಿ ಹೆಚ್ಚು ಕೇಂದ್ರ ಬಜೆಟ್ ಮಂಡಿಸಿದ ದಾಖಲೆ ಮಹಿಳಾ ಹಣಕಾಸು ಸಚಿವೆಯರದ್ದಾಗಿದೆ.  ಉಜ್ವಲ ಯೋಜನೆ ಮತ್ತು ಜಲ ಜೀವನ್ ಈ ಮಿಷನ್ ಕೋಟ್ಯಂತರ ಮಹಿಳೆಯರ ಜೀವನವನ್ನು ಸುಲಭಗೊಳಿಸಿದೆ. ಪ್ರಧಾನ ಮಂತ್ರಿ ವಸತಿ ಯೋಜನೆಯಡಿಯಲ್ಲಿ ನಿರ್ಮಿಸಲಾದ ಮನೆಗಳು ಮಹಿಳೆಯರ ಹೆಸರಿನಲ್ಲಿವೆ ಮತ್ತು ಕೇಂದ್ರವು ಸಣ್ಣ ಮತ್ತು ಹೊಸ ಉದ್ಯಮಶೀಲ ಮಹಿಳಾ ಗುಂಪುಗಳಿಗೆ ಭಾರಿ ಸಬ್ಸಿಡಿ ನೀಡುವ ಮೂಲಕ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿಸಿದೆ ಎಂದು ತಿಳಿಸಿದರು.

ಪೆರಿಯಾದಲ್ಲಿರುವ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಅಶೋಕನ್ ಎಂ.ವಿ. ಅವರು ಕಿರು ಧಾನ್ಯಗಳು ಮತ್ತು ಆತ್ಮರಕ್ಷಣಾ ವಿಧಾನಗಳ ಕುರಿತು ತರಗತಿ ನಡೆಸಿದರು. ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷೆ ಕೆ. ರಮಣಿ ಅಧ್ಯಕ್ಷತೆ ವಹಿಸಿದ್ದರು.

ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅನಿತಾ ನಾಯ್ಕ್, ಪ್ರೇಮಲತಾ ಎಸ್, ಮಹಿಳಾ ಮೋರ್ಚಾ ಉದುಮ ಮಂಡಲ ಅಧ್ಯಕ್ಷೆ ಆಶಾ, ಕಾಞಂಗಾಡ್ ಮಂಡಲ ಅಧ್ಯಕ್ಷೆ ಕೆ.ಶೋಭನಾ, ಪೆರಿಯ ಬ್ಲಾಕ್ ಕುಟುಂಬ ಆರೋಗ್ಯ ಕೇಂದ್ರನೌಕರರಾದ ಸಜಿ, ಶೀಬಾ ಎಂ, ಬಿಜೆಪಿ ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರನ್ ಎ.ಎಂ., 'ಸ್ನೇಹದ ಮನೆ' ಅಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಅಂಬಲತ್ತರ ಕುಞÂಕೃಷ್ಣನ್  ಉಪಸ್ಥಿತರಿದ್ದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries