ಕಾಸರಗೋಡು: ಸನಾತನ ಧರ್ಮದ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಅರಿವು ಮೂಡಿಸುವ ಕೆಲಸವನ್ನು ತಾಯಂದಿರು ನಡೆಸಬೇಕು ಎಂಬುದಾಗಿ ಆಧ್ಯಾತ್ಮಿಕ ಆಚಾರ್ಯ ಡಾ. ಎಂ.ಜಿ ವಿನೋದ್‍ಕುಮಾರ್ ತಿಳಿಸಿದ್ದಾರೆ.
ಅವರು ಕಾಸರಗೋಡು ಹಿಂದೂ ಸಮಜೋತ್ಸವ ಸಮಿತಿ ವತಿಯಿಂದ ಕಾಸರಗೋಡಿನ ತಾಳಿಪಡ್ಪು ಮೈದಾನದಲ್ಲಿ ವಿಶೇಷವಾಗಿ ನಿರ್ಮಿಸಿದ 'ಕೋಟಿ ಚೆನ್ನಯ'ನಗರದಲ್ಲಿಆಯೋಜಿಸಲಾಗಿದ್ದ ಏಕತಾ ಸಂಗಮ'ಬೃಹತ್ ಹಿಂದೂ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು.
ಸನಾತನ ಧರ್ಮದ ನಾಶಕ್ಕಾಗಿ ಕೆಲವೊಂದು ಶಕ್ತಿಗಳು ಕಳೆದ ಹಲವು ವರ್ಷಗಳಿಂದ ನಡೆಸುತ್ತಿರುವ ಸಂಚಿನ ನಡುವೆಯೂ ಧರ್ಮ ಭದ್ರವಾಗಿ ನೆಲೆಯೂರಿದೆ. ಹಿಂದೂ ಸಮುದಾಯದಲ್ಲಿ ಜಾತಿಯ ವಿಷಬೀಜ ಬಿತ್ತಿ ಸಮಸ್ತ ಹಿಂದೂ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿರುವ ಬಗ್ಗೆ ಜಾಗೃತರಾಗಬೇಕಾಗಿದೆ. ಹಿಂದೂ ಧರ್ಮದಲ್ಲಿ ಆಧ್ಯಾತ್ಮಿಕ ಚಿಂತನೆ ಹೆಚ್ಚಾಗಿಬೆಳೆದುಬರಬೇಕು ಎಂದು ತಿಳಿಸಿದರು.
ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿ, ಪಾಶ್ಚಾತ್ಯ ಸಂಸ್ಕøತಿ ನಮ್ಮ ಸನಾತನ ಧರ್ಮಕ್ಕೆ ಧಕ್ಕೆ ತಂದೊಡ್ಡುತ್ತಿದ್ದು, ಸನತನ ಮೌಲ್ಯಗಳಿಗೆ ಚ್ಯುತಿಯಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕುಎಂದು ತಿಳಿಸಿದರು.
ಕಾಸರಗೋಡು ಹಿಂದೂ ಸಮಾಜೋತ್ಸವ ಸಮಿತಿ ಅಧ್ಯಕ್ಷ ಸಂದೀಪ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಮಾಧವ ಕಾರ್ನವರ್, ಚಿದಾನಂದ ಪೂಜಾರಿ, ಸಿ.ವಿ ಪೊದುವಾಳ್, ಅಶೋಕ್, ಗಂಗಾಧರ ಕಾಮತ್, ಡಾ.ವಾಮನರಾವ್ ಬೇಕಲ್, ರಂಗನಾಥ ಮಲ್ಯ, ಪ್ರದೀಪ್ ಬೇಕಲ್, ಕಲ್ಮಾಡಿ ಸದಾಶಿವ ಆಚಾರ್ಯ, ಎ.ಟಿ ನಾಯ್ಕ್, ಡಾ. ಕೆ.ಎನ್ ವೆಂಕಟ್ರಮಣ ಹೊಳ್ಳ, ವಿಶ್ವನಾಥ ಮಣಿಯಾಣಿ, ದಾಮೋದರನ್ ನಾಯರ್, ರಾಮ ಪಡುಮಲೆ, ನಗೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಕಮಲಾಕ್ಷ ಬೀರಂತಬೈಲು ಸ್ವಾಗತಿಸಿದರು. ಶ್ರೀಲತಾ ಟೀಚರ್ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ಕಾರ್ಯಕರ್ತರ ಆಕರ್ಷಕ ಮೆರವಣಿಗೆ ನಡೆಯಿತು. ವಂದೇಮಾತರಂ ಆಲಾಪನೆ, ವಿಷ್ಣು ಸಹಸ್ರನಾಮ ಸ್ತೋತ್ರ ಸಾಮೂಹಿಕ ಪಾರಾಯಣ ನಡೆಯಿತು.



