ಟೆಹರಾನ್: ಅಮೆರಿಕದೊಂದಿಗೆ ಮಾತುಕತೆ ಅಥವಾ ಚರ್ಚೆ ನಡೆದಿಲ್ಲ. ಆದರೆ ಮಧ್ಯಸ್ಥಿಕೆದಾರರ ಮೂಲಕ ಹಲವಾರು ಸಂದೇಶಗಳು ವಿನಿಮಯಗೊಂಡಿವೆ ಎಂದು ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ನಮ್ಮ ಮಿತ್ರ ದೇಶಗಳ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತದೆ.
ನಮ್ಮ ನಿಲುವುಗಳನ್ನು ತಿಳಿಸುವುದು ಅಥವಾ ಅಗತ್ಯವಿರುವ ಎಚ್ಚರಿಕೆಗಳನ್ನು ರವಾನಿಸುವುದನ್ನು ಮಾತುಕತೆ ಅಥವಾ ಚರ್ಚೆ ಎಂದು ಕರೆಯಲಾಗದು' ಎಂದು ಅರಾಘ್ಚಿ ಹೇಳಿದ್ದು ಅಮೆರಿಕ ಮುಂದಿರಿಸಿರುವ 15 ಅಂಶಗಳ ಕದನ ವಿರಾಮ ಯೋಜನೆಯನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.