HEALTH TIPS

ಅಬುಧಾಬಿ: ಇರಾನ್‌ ಹಾರಿಸಿದ ಕ್ಷಿಪಣಿಯ ಅವಶೇಷ ಬಿದ್ದು ಭಾರತೀಯ ಸಾವು

ಪ್ಯಾರಿಸ್‌: ಇರಾನ್‌ ವಿರುದ್ಧ ವೈಮಾನಿಕ ದಾಳಿಯನ್ನು ಇಸ್ರೇಲ್‌ ತೀವ್ರಗೊಳಿಸಿದೆ. ಇಸ್ರೇಲ್‌ನ ನಗರಗಳನ್ನು ಗುರಿಯಾಗಿಸಿ ಇರಾನ್‌ ಸೇನೆ ಕ್ಷಿಪಣಿ, ಡ್ರೋನ್‌ಗಳನ್ನು ಹಾರಿಸಿದೆ.

ಇರಾನ್‌ ಹಾರಿಸಿದ ಕ್ಷಿಪಣಿಯ ಅವಶೇಷ ಬಿದ್ದು ಅಬುಧಾಬಿಯಲ್ಲಿ ಒಬ್ಬ ಭಾರತೀಯ ಸೇರಿ ಇಬ್ಬರು ಮೃತಪಟ್ಟಿದ್ದಾರೆ.

ಮೂವರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲೂ 6 ಮಂದಿ ಗಾಯಗೊಂಡಿದ್ದಾರೆ.

ದಕ್ಷಿಣ ಲೆಬನಾನ್‌ನ ಬೈರೂತ್‌ನಲ್ಲಿ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿ ನಡೆಸಿದ ದಾಳಿ ವೇಳೆ ಸೈನಿಕರೊಬ್ಬರು ಮೃತಪಟ್ಟಿರುವುದಾಗಿ ಇಸ್ರೇಲ್‌ ಸೇನೆ ಹೇಳಿದೆ. ಇರಾನ್‌ನ 18 ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಸೌದಿ ಅರೇಬಿಯಾ ಹೇಳಿದೆ.

ಇರಾಕ್‌ಗೆ ಮನವಿ: 'ಇರಾನ್‌ ಪರ ಸಶಸ್ತ್ರ ಗುಂಪುಗಳಿಗೆ ತನ್ನ ನೆಲದಿಂದ ದಾಳಿ ನಡೆಸಲು ಇರಾಕ್‌ ಅವಕಾಶ ನೀಡಬಾರದು, ತಕ್ಷಣವೇ ದಾಳಿ ನಿಲ್ಲಿಸಬೇಕು' ಎಂದು ಜೋರ್ಡಾನ್‌, ಸೌದಿ ಅರೇಬಿಯಾ, ಬಹ್ರೇನ್‌ ಸೇರಿದಂತೆ ಹಲವು ಕೊಲ್ಲಿ ದೇಶಗಳು ಇರಾಕ್‌ಗೆ ಆಗ್ರಹಿಸಿವೆ.

ಯುದ್ಧಕಾಲ ಬಜೆಟ್‌: ದಕ್ಷಿಣ ಕೊರಿಯಾ 17 ಬಿಲಿಯನ್‌ ಡಾಲರ್‌ ಮೊತ್ತದ ಯುದ್ಧಕಾಲದ ಬಜೆಟ್ ಸಿದ್ಧಪಡಿಸಿದೆ. ತೈಲ ಬಿಕ್ಕಟ್ಟು ಮುಂದುವರಿದಿರುವುದರಿಂದ ಇಂಧನ ತೆರಿಗೆ ಕಡಿತವನ್ನು ಇನ್ನಷ್ಟು ದಿನ ವಿಸ್ತರಿಸಲು ನಿರ್ಧರಿಸಿದೆ.

ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಮತ್ತು ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಖಿರ್‌ ಖಾಲೀಬಾಫ್ ಅವರನ್ನು ಪಾಕಿಸ್ತಾನದ ಮನವಿಯ ಮೇರೆಗೆ ಇಸ್ರೇಲ್‌ ತನ್ನ 'ಹಿಟ್‌ ಲಿಸ್ಟ್‌'ನಿಂದ ಕೈಬಿಟ್ಟಿದೆ ಎಂದು ಪಾಕ್‌ ಮೂಲಗಳು ತಿಳಿಸಿವೆ.

ಕದನ ವಿರಾಮ: ಚೀನಾ ಸಲಹೆ

ಪಶ್ಚಿಮ ಏಷ್ಯಾ ಯುದ್ಧ ಕೊನೆಗೊಳ್ಳುವ ನಿಟ್ಟಿನಲ್ಲಿ 'ಭರವಸೆಯ ಕಿರಣ'ವೊಂದು ಕಾಣಿಸಿಕೊಂಡಿದೆ ಎಂದು ಚೀನಾ ಹೇಳಿದೆ. 'ಅಮೆರಿಕ ಮತ್ತು ಇರಾನ್‌ ಕದನ ವಿರಾಮ ಮಾತುಕತೆಗೆ ಒಲವು ತೋರುತ್ತಿದ್ದು ಇದಕ್ಕೆ ಸೂಕ್ತ ವೇದಿಕೆ ಕಲ್ಪಿಸುವಂತೆ ಟರ್ಕಿ ಮತ್ತು ಈಜಿಪ್ಟ್‌ಗೆ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಮನವಿ ಮಾಡಿದ್ದಾರೆ.

ಸೀಮಿತ ಗುರಿ: 'ಹೊರ್ಮುಜ್‌ ಜಲಸಂಧಿ ಮೂಲಕ ತೈಲ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸುವುದಕ್ಕೆ ಪಶ್ಚಿಮ ಏಷ್ಯಾ ಯುದ್ಧದ ಗುರಿ ಸೀಮಿತಗೊಂಡಂತೆ ಕಾಣುತ್ತಿದೆ. ಯುದ್ಧದ ಪೂರ್ವದಲ್ಲೇ ಈ ಜಲಸಂಧಿ ತೆರೆದಿತ್ತು' ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

'ಏಕಪಕ್ಷೀಯ ಒಪ್ಪಂದ'

ದುಬೈ: 'ಯುದ್ಧ ನಿಲ್ಲಿಸಲು ಅಮೆರಿಕ ಮುಂದಿಟ್ಟಿರುವ ಒಪ್ಪಂದದ ಪ್ರಸ್ತಾವವು ನ್ಯಾಯಯುತವಾಗಿಲ್ಲ ಮತ್ತು ಏಕಪಕ್ಷೀಯವಾಗಿದೆ ಆದರೆ ರಾಜತಾಂತ್ರಿಕತೆಯ ಬಾಗಿಲು ಇನ್ನೂ ತೆರೆದಿದೆ' ಎಂದು ಇರಾನ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

-ಇಶಾಕ್‌ ದಾರ್‌ , ಪಾಕಿಸ್ತಾನದ ವಿದೇಶಾಂಗ ಸಚಿವ ಅಮೆರಿಕದ 15 ಅಂಶಗಳ ಕದನ ವಿರಾಮ ಒಪ್ಪಂದ ಪ್ರಸ್ತಾವವನ್ನು ಇರಾನ್‌ ಮುಂದಿಡಲಾಗಿದೆ. ಪರೋಕ್ಷ ಮಾತುಕತೆಗೆ ಪಾಕ್‌ ಮಧ್ಯಸ್ಥಿಕೆ ವಹಿಸಲಿದೆ - ಅಬ್ಬಾಸ್‌ ಅರಾಗ್ಚಿ, ಇರಾನ್‌ನ ವಿದೇಶಾಂಗ ಸಚಿವ ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಯಾವುದೇ ರಾಜತಾಂತ್ರಿಕ ಪ್ರಯತ್ನಗಳು ನಡೆದಿಲ್ಲ. ಮಾತುಕತೆಗೆ ಮುಂದಾಗುವುದು ಸೋಲನ್ನು ಸ್ವೀಕರಿಸಿದಂತೆ -ಡೊನಾಲ್ಡ್‌ ಟ್ರಂಪ್‌, ಅಮೆರಿಕದ ಅಧ್ಯಕ್ಷ. ಇರಾನ್‌ ಮಧ್ಯಸ್ಥಿಕೆದಾರರಿಗೆ ತಮ್ಮವರಿಂದಲೇ ಹತ್ಯೆ ಭೀತಿ ಇರುವುದರಿಂದ ಅವರು ಅಮೆರಿಕ ಮುಂದಿಟ್ಟಿರುವ ಕದನ ವಿರಾಮ ಒಪ್ಪಂದ ಮಾತುಕತೆಗೆ ಮುಂದಾಗುತ್ತಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries