ಕೋಲ್ಕತ್ತ: ಪಶ್ಚಿಮ ಬಂಗಾಳದ ಮಾಜಿ ಕ್ರಿಕೆಟಿಗ ಶಿಬ್ ಶಂಕರ್ ಪಾಲ್, ಪ್ರಾಧ್ಯಾಪಕಿ, ಸಂತಾಲ ಬುಡಕಟ್ಟು ಸಮುದಾಯದ ತನುಶ್ರೀ ಹಂಸದಾ ಮತ್ತು ಮುಸ್ಲಿಂ ವಿದ್ವಾಂಸ ಎಂ.ಡಿ ಮುಫ್ತಿ ಅಬ್ದುಲ್ ಮತೀನ್ ಅವರು ಮಂಗಳವಾರ ತೃಣಮೂಲ ಕಾಂಗ್ರೆಸ್‌ಗೆ(ಟಿಎಂಸಿ) ಸೇರ್ಪಡೆಗೊಂಡಿದ್ದಾರೆ.
ಪಶ್ಚಿಮ ಬಂಗಾಳದ ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ಮೂವರನ್ನೂ ಪಕ್ಷಕ್ಕೆ ಬರಮಾಡಿಕೊಂಡರು.
'ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟ ಬುಡಕಟ್ಟು ಸಮುದಾಯಗಳ ಸಬಲೀಕರಣವೇ ಮಮತಾ ಬ್ಯಾನರ್ಜಿ ಸರ್ಕಾರ ಆದ್ಯತೆ' ಎಂದು ಚಂದ್ರಿಮಾ ಹೇಳಿದರು.

