ನವದೆಹಲಿ: ಶ್ರೀಲಂಕಾ ಸಾಗರದಲ್ಲಿ ದಾಳಿಗೆ ಒಳಗಾದ ಇರಾನ್ ನೌಕೆ ಬಗೆಗಿನ ಗುಪ್ತಚರ ಮಾಹಿತಿಗಳನ್ನು ಭಾರತದ ನೌಕಾಪಡೆಯು ಅಮೆರಿಕಕ್ಕೆ ನೀಡಿತ್ತು ಎಂಬ ಆರೋಪವು ಆಧಾರ ರಹಿತ ಮತ್ತು ಅಸಂಬದ್ಧವಾದದ್ದು ಎಂದು ಸರ್ಕಾರದ ಮೂಲಗಳು ಶುಕ್ರವಾರ ತಿಳಿಸಿವೆ.
ಅಮೆರಿಕಕ್ಕೆ ರಹಸ್ಯ ಮಾಹಿತಿ ನೀಡುವ ಪ್ರಶ್ನೆಯೇ ಇಲ್ಲ ಎಂದು ಮೂಲಗಳು ಹೇಳಿವೆ.
ಭಾರತದಲ್ಲಿ ನಡೆದಿದ್ದ ಸೇನಾ ಸಮರಭ್ಯಾಸದಲ್ಲಿ ಭಾಗಿಯಾಗಿದ್ದ ಇರಾನ್‌ನ ನೌಕೆಯೊಂದನ್ನು ಅಮೆರಿಕವು ಶ್ರೀಲಂಕಾದ ಜಲ ಗಡಿಯೊಳಗೆ ಬುಧವಾರ ಹೊಡೆದುರುಳಿಸಿತ್ತು.

