HEALTH TIPS

ಮೋದಿ, ಟ್ರಂಪ್ ಮತ್ತು ನೆತನ್ಯಾಹು ಅವರನ್ನು ತೃಪ್ತಿಪಡಿಸಲು ಬ್ರಿಕ್ಸ್+ ಅಧ್ಯಕ್ಷತೆಯ ಮೌಲ್ಯವನ್ನು ತಗ್ಗಿಸುತ್ತಿದ್ದಾರೆ: ಕಾಂಗ್ರೆಸ್

ನವದೆಹಲಿ: 2026ನೇ ಸಾಲಿಗೆ ಬ್ರಿಕ್ಸ್+ ಗುಂಪಿನ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರೂ, ಉಲ್ಬಣಗೊಳ್ಳುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಕುರಿತು ಸಾಮೂಹಿಕ ಹೇಳಿಕೆಯನ್ನು ಹೊರಡಿಸದ್ದಕ್ಕಾಗಿ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಸೋಮವಾರ ತೀವ್ರ ತರಾಟೆಗೆತ್ತಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರೊಂದಿಗೆ ನಿಕಟ ಸಂಬಂಧಗಳನ್ನು ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ಬ್ರಿಕ್ಸ್+ ವೇದಿಕೆಯ ಸ್ಥಾನಮಾನವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಅದು ಆರೋಪಿಸಿದೆ.

2025ರಲ್ಲಿ ಬ್ರಿಕ್ಸ್+ ಅಧ್ಯಕ್ಷತೆಯನ್ನು ಹೊಂದಿದ್ದ ಬ್ರೆಝಿಲ್ ಕಳೆದ ವರ್ಷದ ಜೂನ್‌ ನಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ವಾಯುದಾಳಿಗಳನ್ನು ಖಂಡಿಸಿ ಜಂಟಿ ಹೇಳಿಕೆಯೊಂದನ್ನು ಹೊರಡಿಸಲು 11 ಸದಸ್ಯ ದೇಶಗಳ ಗುಂಪನ್ನು ಯಶಸ್ವಿಯಾಗಿ ಒಗ್ಗೂಡಿಸಿತ್ತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಅವರು ಎಕ್ಸ್ ಪೋಸ್ಟ್ ನಲ್ಲಿ ನೆನಪಿಸಿಕೊಂಡಿದ್ದಾರೆ.

ಭಾರತವು 2026ರಲ್ಲಿ ತನ್ನ ಬ್ರಿಕ್ಸ್+ ಅಧ್ಯಕ್ಷತೆಯ ಬಗ್ಗೆ ಹೇಳಿಕೊಳ್ಳುತ್ತಿದೆ. ಆದರೆ ಇರಾನ್ ಮೇಲೆ ಅಮೆರಿಕ-ಇಸ್ರೇಲ್ ವಾಯುದಾಳಿಗಳು ಮತ್ತು ನಿರ್ದೇಶಿತ ಹತ್ಯೆಗಳು, ನಂತರ ಇರಾನ್ ಜಿಸಿಸಿ ದೇಶಗಳಲ್ಲಿನ ಮಿಲಿಟರಿಯೇತರ ಗುರಿಗಳ ಮೇಲೆ ನಡೆಸಿದ ದಾಳಿಗಳು ಮತ್ತು ಶ್ರೀಲಂಕಾ ಹಾಗೂ ಭಾರತದ ಸಮೀಪ ಹಿಂದೂ ಮಹಾಸಾಗರದಲ್ಲಿ ಅಮೆರಿಕ ನೌಕಾಪಡೆಯ ಆಘಾತಕಾರಿ ಕ್ರಮದ ಬಗ್ಗೆ ಸಾಮೂಹಿಕ ಹೇಳಿಕೆಯನ್ನು ಹೊರಡಿಸುವ ಧೈರ್ಯವನ್ನು ಅದು ಈವರೆಗೂ ತೋರಿಸಿಲ್ಲ ಎಂದು ರಮೇಶ್ ಎಕ್ಸ್ ಪೋಸ್ಟ್ ನಲ್ಲಿ ಬರೆದಿದ್ದಾರೆ.

ಅಮೆರಿಕ ಮತ್ತು ಇಸ್ರೇಲ್ ಜೊತೆ ಸೌಹಾರ್ದಯುತ ಸಂಬಂಧಗಳನ್ನು ಕಾಯ್ದುಕೊಳ್ಳುವ ಪ್ರಧಾನಿ ಮೋದಿಯವರ ಪ್ರಯತ್ನವು ಬ್ರಿಕ್ಸ್+ ಗುಂಪಿನಲ್ಲಿ ಭಾರತದ ನಾಯಕತ್ವ ಪಾತ್ರದ ವಿಶ್ವಾಸಾರ್ಹತೆಯನ್ನು ಕುಂದಿಸುತ್ತಿದೆ. ಟ್ರಂಪ್ ಅವರನ್ನು ತೃಪ್ತಿಗೊಳಿಸುವ ಮತ್ತು ನೆತಾನ್ಯಹು ಅವರೊಂದಿಗಿನ ತನ್ನ ಆತ್ಮೀಯ ಸಂಬಂಧವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮೋದಿ ಬ್ರಿಕ್ಸ್+ ಅಧ್ಯಕ್ಷತೆಯ ಮೌಲ್ಯ ಮತ್ತು ಸ್ಥಾನಮಾನವನ್ನು ಕುಗ್ಗಿಸುತ್ತಿದ್ದಾರೆ ಎಂದು ರಮೇಶ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries