ರಿಯಾದ್ : ಸೌದಿ ಅರೇಬಿಯಾದ ಅರಾಮ್ಕೊದ ಸ್ಯಾಮ್ರೆಫ್ ಸಂಸ್ಕರಣಾಗಾರದ ಮೇಲೆ ಡ್ರೋನ್ ಅಪ್ಪಳಿಸಿರುವ ಬಗ್ಗೆ ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ಂಟರಿಚಿzeeಡಿಚಿ ವರದಿ ಮಾಡಿದೆ.
ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯದ ಪ್ರಕಾರ, ಬಂದರು ನಗರ ಯಾನ್ಬುನಲ್ಲಿ ಇರುವ ಸೌದಿ ಅರಾಮ್ಕೋಗೆ ಸೇರಿದ ಸ್ಯಾಮ್ರಿಫ್ ರಿಫೈನರಿಗೆ ಡ್ರೋನ್ ಅಪ್ಪಳಿಸಿದೆ.
ಘಟನೆಯಿಂದಾದ ಹಾನಿಯ ಬಗ್ಗೆ ಮೌಲ್ಯಮಾಪನ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಇರಾನ್‌ನ ಸೌತ್ ಪಾರ್ಸ್ ಗ್ಯಾಸ್ ಫೀಲ್ಡ್ ಮೇಲೆ ಇಸ್ರೇಲ್ ದಾಳಿ ನಡೆಸಿದ ಬೆನ್ನಲ್ಲೆ ಇರಾನ್ ಪ್ರತೀಕಾರದ ಎಚ್ಚರಿಕೆಯನ್ನು ನೀಡಿತ್ತು.

