HEALTH TIPS

ಅಡುಗೆ ಅನಿಲ ಸರಬರಾಜು ವ್ಯತ್ಯಯ ಹಿನ್ನೆಲೆ: ಪಡಿತರ ಅಂಗಡಿಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ಕ್ರಮ

ನವದೆಹಲಿ: ಹಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ಬಳಕೆ ಮತ್ತೆ ಆರಂಭವಾಗಿದ್ದು, ಪ್ರಾಥಮಿಕವಾಗಿ ಪಡಿತರ ಅಂಗಡಿಗಳ ಮೂಲಕ ವಿವತರಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆಗಳಲ್ಲಿ ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳು, ಅಡುಗೆ ಮತ್ತು ದೀಪದ ವ್ಯವಸ್ಥೆಗೆ ಬಳಸಿಕೊಳ್ಳಲು ಅನುವಾಗುವಂತೆ ಮಳಿಗೆಗಳನ್ನು ತೆರೆದಿವೆ.

ಅಡುಗೆ ಇಂಧನವಾಗಿ ಬಳಸಲು ಬಿಡುಗಡೆ ಮಾಡುತ್ತಿದ್ದ ಒಂದು ಲಕ್ಷ ಕಿಲೋಲೀಟರ್ ಸೀಮೆಎಣ್ಣೆಗೆ ಪೂರಕವಾಗಿ ಹೆಚ್ಚುವರಿಯಾಗಿ 48 ಲಕ್ಷ ಕಿಲೋಲೀಟರ್ ಸೀಮೆಎಣ್ಣೆಯನ್ನು ಕೇಂದ್ರ ಸರ್ಕಾರ ಗುರುವಾರ ಹಂಚಿಕೆ ಮಾಡಿತ್ತು. ಬಹುತೇಕ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕಳೆದ 10 ವರ್ಷಗಳಿಂದ ಸೀಮೆಎಣ್ಣೆ ಬಳಕೆಯನ್ನು ಸ್ಥಗಿತಗೊಳಿಸಿದ್ದವು. ಆದರೆ ಇದೀಗ ಅಡುಗೆ ಅನಿಲ ಸರಬರಾಜು ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಬಳಕೆದಾರರು ಇದೀಗ ಹಳೆಯ ಸ್ಟೌಗಳನ್ನು ಮತ್ತೆ ಹೊರತೆಗೆಯಬೇಕಾಗಿದೆ ಅಥವಾ ಹೊಸ ಸ್ಟೌಗಳನ್ನು ಖರೀದಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.

ಅಂತೆಯೇ ಕೆಲ ರೆಸ್ಟೋರೆಂಟ್ ಗಳು ಅನಿಲ ಆಧರಿತ ಓವನ್ ಗಳ ಬದಲಾಗಿ ಕಲ್ಲಿದ್ದಲು ಬಳಕೆಯ ತಂದೂರ್ ಗಳನ್ನು ಮರು ಬಳಕೆಗೆ ತಂದಿವೆ.

ದೊಡ್ಡ ಪ್ರಮಾಣದಲ್ಲಿ ಕಚ್ಚಾ ತೈಲವನ್ನು ಶುದ್ಧೀಕರಿಸಿ ಸುಲಭವಾಗಿ ದೊಡ್ಡ ಪ್ರಮಾಣದಲ್ಲಿ ಸೀಮೆಎಣ್ಣೆ ಉತ್ಪಾದಿಸಲು ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ಅಡುಗೆ ಉದ್ದೇಶಕ್ಕೆ ಅದನ್ನು ಬಳಸುವ ಸಲುವಾಗಿ ಹೆಚ್ಚುವರಿ ಸೀಮೆಎಣ್ಣೆ ಹಂಚಿಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಎಷ್ಟು ಪ್ರಮಾಣದಲ್ಲಿ ಗ್ರಾಹಕರಿಗೆ ಸೀಮೆಎಣ್ಣೆ ವಿತರಿಸಬೇಕು ಮತ್ತು ಯಾವ ಮಾನದಂಡವನ್ನು ಅನುಸರಿಸಬೇಕು ಎನ್ನುವುದು ಆಯಾ ರಾಜ್ಯ ಸರ್ಕಾರ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಬಿಟ್ಟ ವಿಚಾರ ಎಂದು ಪೆಟ್ರೋಲಿಯಂ ಸಚಿವಾಲಯ ತನ್ನ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದೆ. ಆದರೆ ಪಡಿತರ ಅಂಗಡಿಗಳ ಮೂಲಕ ವಿತರಿಸಿದ ಸೀಮೆಎಣ್ಣೆ ಪೆಟ್ರೋಲ್ ಅಥವಾ ಡೀಸೆಲ್ ಕಲಬೆರಕೆಗೆ ಬಳಸದಂತೆ ಅಥವಾ ಉದ್ದೇಶಿತವಲ್ಲದ ಬಳಕೆಗೆ ವಿಮುಖವಾಗದಂತೆ ಎಚ್ಚರ ವಹಿಸುವುದು ಅಗತ್ಯ ಎಂದು ಎಚ್ಚರಿಕೆ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries