ಭೂಗ್ರಹ ಶೀಘ್ರವೇ ಶಕ್ತಿಯುತವಾದ ಎಲ್ನಿನೊ ಹಂತಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇತ್ತೀಚೆಗಿನ ದಶಕಗಳಲ್ಲಿ ಕಂಡಂತಹ ಅತಿ ಪ್ರಬಲ ಎಲ್ ನಿನೊ ಹಂತ ಬರಲಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಎಲ್ ನಿನೊ ಈ ವರ್ಷದ ನಂತರದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಜಾಗತಿಕವಾಗಿ ಹವಾಮಾನವನ್ನು ಪ್ರಮುಖವಾಗಿ ಬದಲಿಸಲಿದೆ. ಅತಿಯಾದ ಶಾಖ ಮತ್ತು ಅಸಹಜವಾದ ಮುಂಗಾರು ಕಂಡುಬರಲಿದೆ ಎಂದು ವರದಿಯಾಗಿದೆ.
ಮಧ್ಯಮ ರೇಂಜ್ ಹವಾಮಾನ ಸೂಚ್ಯಂಕದ ಯುರೋಪಿಯನ್ ಕೇಂದ್ರದ (ECMWF) ಹೊಸ ದತ್ತಾಂಶದ ಪ್ರಕಾರ ಭೂಗ್ರಹವು ಇತಿಹಾಸದಲ್ಲೇ ಕಂಡರಿಯದಷ್ಟು ಪ್ರಬಲವಾದ "ಸೂಪರ್" ಎಲ್ ನಿನೊವನ್ನು ಎದುರಿಸಲಿದೆ. ಜೂನ್ ವೇಳೆಗೆ ಸಾಗರ ಮತ್ತು ಹವಾಮಾನದ ಸಂಕೇತಗಳು ಸಾಲು ಜೋಡಲು ಆರಂಭಿಸಲಿರುವ ಮುನ್ಸೂಚನೆ ಮಾದರಿಗಳನ್ನು ತೋರಿಸಲಿವೆ. ಈ ವಿದ್ಯಮಾನವು ಎಲ್ ನಿನೊ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಸಂಕೇತವಾಗಿರುತ್ತದೆ. ಈ ವಿದ್ಯಮಾನದ ಕೇಂದ್ರ ಭಾಗದಲ್ಲಿ ಎಲ್ ನಿನೊ ಇದೆ. ಇದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಹೆಚ್ಚಾದಾಗ ಸಂಭವಿಸುವ ನೈಸರ್ಗಿಕ ಹವಾಮಾನ ಚಕ್ರ.
ಎಲ್ ನಿನೊ ಎಂದರೇನು?
ಸಾಮಾನ್ಯ ಸ್ಥಿತಿಯಲ್ಲಿ ಟ್ರೇಡ್ ವಿಂಡ್ಗಳು (ಯಾವಾಗಲೂ ಸಮಭಾಜಕದ ಕಡೆಗೆ ಮತ್ತು ನಂತರ ಪಶ್ಚಿಮಕ್ಕೆ ಬೀಸುವ ಬಲವಾದ ಗಾಳಿ) ಬೆಚ್ಚನೆಯ ಮೇಲ್ಮೈ ನೀರನ್ನು ಆಗ್ನೇಯ ಏಷ್ಯಾದ ಮತ್ತು ಆಸ್ಟ್ರೇಲಿಯ ಕಡೆಗೆ ಬೀಸಲಿವೆ ಮತ್ತು ತಂಪಾದ ನೀರನ್ನು ದಕ್ಷಿಣ ಅಮೆರಿಕದ ಕಡೆಗೆ ಏರಿಸಲಿವೆ. ಎಲ್ ನಿನೊ ಸಂದರ್ಭದಲ್ಲಿ ಈ ಗಾಳಿಗಳು ದುರ್ಬಲವಾಗಲಿವೆ ಮತ್ತು ಬೆಚ್ಚನೆಯ ನೀರು ಪೆಸಿಫಿಕ್ನಾದ್ಯಂತ ಪೂರ್ವಮುಖವಾಗಿ ಹರಡಲಿವೆ.
ಫಲಿತಾಂಶವಾಗಿ ಜಾಗತಿಕ ವಾತಾವರಣದ ಪರಿಚಲನೆಯಲ್ಲಿ ಅತಿ ದೊಡ್ಡ ಬದಲಾವಣೆಯಾಗಲಿದೆ. ಬೆಚ್ಚನೆಯ ಸಾಗರದ ನೀರು ವಾಯುಭಾರವನ್ನು ಏರಿಸಲಿದೆ ಮತ್ತು ಮಧ್ಯ ಮತ್ತು ಪೂರ್ವ ಪೆಸಿಫಿಕ್ನಲ್ಲಿ ಅತಿಯಾದ ಮಳೆಯಾಗಲಿದೆ. ಅದೇ ಸಮಯದಲ್ಲಿ ಹಿಂದೂ ಮಹಾ ಸಾಗರದ ಪ್ರದೇಶಗಳು ಮತ್ತು ಆಫ್ರಿಕಾದ ಭಾಗಗಳು ವಾಯು ಕುಸಿತವಾಗಲಿದ್ದು, ಮಳೆಯನ್ನು ನಿಗ್ರಹಿಸಲಿದೆ ಮತ್ತು ತಾಪಮಾನವನ್ನು ಹೆಚ್ಚಿಸಲಿದೆ.
ಹೊಸ ಮುನ್ಸೂಚನೆಗಳು ಅತ್ಯಂತ ಬಲಿಷ್ಠವಾದ ಎಲ್ ನಿನೊ ವಾತಾವರಣದ ಪ್ರತಿಕ್ರಿಯೆಯು ರೂಪುಗೊಳ್ಳುವುದನ್ನು ತೋರಿಸುತ್ತಿವೆ. ಅದರಲ್ಲಿ ಪೆಸಿಫಿಕ್ನಲ್ಲಿ ಪ್ರಬಲ ವಾಯು ಭಾರ ಮತ್ತು ಹಿಂದೂ ಮಹಾ ಸಾಗರದ ಸುತ್ತಲೂ ವಾಯು ಕುಸಿತವನ್ನು ಕಾಣಬಹುದು.
ಭಾರತದ ಮೇಲೆ ಏಕೆ ಪರಿಣಾಮ ಬೀರಲಿದೆ?
ಭಾರತದ ಮಟ್ಟಿಗೆ ಎಲ್ ನಿನೊ ಎಂದರೆ ಐತಿಹಾಸಿಕವಾಗಿ ಹೆಚ್ಚಿನ ತಾಪಮಾನ ಮತ್ತು ದುರ್ಬಲ ಮುಂಗಾರು ಆಗಿರುತ್ತದೆ. ಭಾರತದ ಬೇಸಗೆಯ ಮುಂಗಾರು ಮುಖ್ಯವಾಗಿ ಭೂಮಿ ಮತ್ತು ಸಾಗರದ ನಡುವಿನ ತಾಪಮಾನ ವ್ಯತ್ಯಾಸವನ್ನು ಅವಲಂಬಿಸಿದೆ. ಎಲ್ ನಿನೊ ವರ್ಷಗಳಲ್ಲಿ ಹವಾಮಾನ ಬದಲಾವಣೆಯು ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಿಂದ ತೇವಾಂಶವನ್ನು ತರುವ ಮುಂಗಾರನ್ನು ದುರ್ಬಲಗೊಳಿಸಬಹುದು. ಪ್ರಬಲ ಎಲ್ ನಿನೊ ಅಭಿವೃದ್ಧಿ ಹೊಂದಿದಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಉಷ್ಣ ಅಲೆಗಳು ಉಂಟಾಗುವ ಸಾಧ್ಯತೆ ಅಧಿಕವಿದೆ ಮತ್ತು ಮುಂಗಾರು ಋತುವಿನಲ್ಲಿ ಮಳೆ ಕೊರತೆಯ ಬಗ್ಗೆ ಕಳವಳ ವ್ಯಕ್ತವಾಗಬಹುದು.
ಪ್ರಬಲವಾದ ಎಲ್ ನಿನೊ ಜಾಗತಿಕ ತಾಪಮಾನವನ್ನು ದಾಖಲೆಯ ಗರಿಷ್ಠ ಮಟ್ಟಕ್ಕೆ ತಳ್ಳಬಹುದು. 1997-98 ಮತ್ತು 2015-16ರಲ್ಲಿ ನಡೆದ ಕೊನೆಯ ಪ್ರಮುಖ ಹವಾಮಾನ ಬದಲಾವಣೆಯಲ್ಲಿ ವಿಶ್ವಾದ್ಯಂತ ಅತಿಯಾದ ಧಗೆಯನ್ನು ತಂದು ತಾತ್ಕಾಲಿಕವಾಗಿ ಜಾಗತಿಕ ತಾಪಮಾನ ಏರಿಕೆಯ ಮಟ್ಟವನ್ನು ಹೆಚ್ಚಿಸಿದ್ದವು.
ECMWF ನೀಡಿರುವ ಹೊಸ ಮುನ್ಸೂಚನೆಯ ಪ್ರಕಾರ ಜೂನ್ ವೇಳೆಗೆ ಸಾಗರ ಮತ್ತು ವಾತಾವರಣ ಜೊತೆಗೂಡಿ ಪೆಸಿಫಿಕ್ ನೀರನ್ನು ಬಿಸಿಯಾಗಿಸಬಹುದು ಮತ್ತು ಪೂರ್ಣ ಎಲ್ ನಿನೊಗೆ ಅಗತ್ಯವಿರುವಂತೆ ವಾತಾವರಣದ ಮಾದರಿಗಳು ಪರಸ್ಪರ ಬಲಪಡಿಸಲಿವೆ.
ಭಾರತವನ್ನು ಮೀರಿ ಅಭಿವೃದ್ಧಿಹೊಂದುತ್ತಿರುವ ಹವಾಮಾನದ ಮಾದರಿಯು ಜಾಗತಿಕವಾಗಿ ಹವಾಮಾನವನ್ನು ಮರುರೂಪಿಸಬಹುದು. ಪ್ರಬಲವಾಗಿ ಬೀಸಲಿರುವ ಗಾಳಿ ಅಟ್ಲಾಂಟಿಕ್ ದಾಟಿ ಚಂಡಮಾರುತದ ಚಟುವಟಿಕೆಯನ್ನು ನಿಗ್ರಹಿಸಬಹುದು ಮತ್ತು ಪಶ್ಚಿಮ ಪೆಸಿಫಿಕ್ ಸಾಮಾನ್ಯಕ್ಕಿಂತ ಹೆಚ್ಚು ಸುಂಟರಗಾಳಿಯನ್ನು ಕಾಣಬಹುದು. ಆದರೆ ಪೂರ್ಣಪ್ರಮಾಣದಲ್ಲಿ ಎಲ್ ನಿನೊವನ್ನು ಈಗಲೇ ಊಹಿಸಲು ಸಾಧ್ಯವಿಲ್ಲದೆ ಇದ್ದರೂ, ವಿಜ್ಞಾನಿಗಳ ಪ್ರಕಾರ ಸೂಚನೆಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಎಲ್ ನಿನೊ ರೂಪುಗೊಳ್ಳುತ್ತಿದೆ ಮತ್ತು ಅದರ ಪರಿಣಾಮಗಳು ಜಾಗತಿಕವಾಗಿ ಮುಂದಿನ ತಿಂಗಳುಗಳಲ್ಲಿ ಹವಾಮಾನವನ್ನು ಮರುರೂಪಿಸಲಿದೆ.

