HEALTH TIPS

ಹೂಡಿಕೆದಾರರನ್ನು ಆಕರ್ಷಿಸದ ಚಿನ್ನ; ಕಾರಣವೇನು?

ಅಮೆರಿಕದಲ್ಲಿ ತೈಲ ಬೆಲೆಯಲ್ಲಿ ವಿಪರೀತ ಏರಿಕೆಯಿಂದಾಗಿ ಬಡ್ಡಿದರ ಕಡಿತ ಮಾಡಲು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ.

ಫೆಬ್ರವರಿಯಲ್ಲಿ ಹೆಚ್ಚು ಏರಿಳಿತ ಕಾಣದ ಶುದ್ಧ ಚಿನ್ನದ ಬೆಲೆ ಮಾರ್ಚ್ 01ರಂದು ಪ್ರತಿ ಗ್ರಾಂಗೆ 17 ಸಾವಿರ ದಾಟಿತ್ತು. ಆದರೆ ನಂತರ ಕಳೆದ ಸೋಮವಾರದಿಂದ ಚಿನ್ನದ ಬೆಲೆ ಕುಸಿತದ ಹಾದಿಯಲ್ಲಿದೆ.

ಸೋಮವಾರ ದಿಢೀರ್ ಕುಸಿತ ಕಂಡ ಚಿನ್ನದ ಬೆಲೆ ಗ್ರಾಂಗೆ 16,980 ರೂ.ಗೆ ಬಂದು ನಿಂತಿತ್ತು. ಮಂಗಳವಾರ ಮತ್ತೆ ತುಸು ಕುಸಿದಿದೆ. ಬುಧವಾರ ತೀವ್ರವಾಗಿ ಕುಸಿದ ನಂತರ ಗುರುವಾರ ಮತ್ತು ಶುಕ್ರವಾರವೂ ಬೆಲೆಯಲ್ಲಿ ಸ್ವಲ್ಪ ಕುಸಿತ ಕಂಡುಬಂದಿದೆ. ಆದರೆ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ ಹಠಾತ್ ಏರಿಕೆ ಕಂಡುಬಂದಿತ್ತು. ಮಾರ್ಚ್ 09 ಸೋಮವಾರ ಮತ್ತೆ ಕುಸಿದ ಶುದ್ಧ ಚಿನ್ನದ ಬೆಲೆ 16 ಸಾವಿರದ ಮಿತಿಯೊಳಗೆ ನಿಂತಿತ್ತು. ಮಂಗಳವಾರ ಮತ್ತು ಬುಧವಾರ ಚಿನ್ನದ ಬೆಲೆಯಲ್ಲಿ ಮತ್ತೆ ಸತತ ಏರಿಕೆಯಾಗಿದ್ದು, ಮತ್ತೆ 16 ಸಾವಿರದ ಮಿತಿ ಮೀರಿ ಬೆಳೆದಿದೆ. ಇದೀಗ ಗುರುವಾರ ಮತ್ತು ಶುಕ್ರವಾರ ಮತ್ತೆ ಚಿನ್ನದ ಬೆಲೆ ಅಲ್ಪ ಮಟ್ಟಿಗೆ ಕುಸಿದಿದೆ.

ಚಿನ್ನ-ಬೆಳ್ಳಿ ಬೆಲೆ ಏರಿಳಿತಕ್ಕೆ ಕಾರಣವೇನು?

ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ಮೇಲೆ ದಾಳಿ ಮಾಡಿರುವುದು, ಜಾಗತಿಕ ಭೌಗೋಳಿಕ ರಾಜಕೀಯದ ಉದ್ವಿಗ್ನತೆ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷದ ವಾತಾವರಣದ ನಡುವೆಯೂ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ವಿಪರೀತ ಏರದೆ ಸ್ಥಿರವಾಗಿವೆ. ಅಮೆರಿಕದಲ್ಲಿ ತೈಲ ಬೆಲೆಯಲ್ಲಿ ವಿಪರೀತ ಏರಿಕೆಯಿಂದಾಗಿ ಬಡ್ಡಿದರ ಕಡಿತ ಮಾಡಲು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ. ಹೀಗಾಗಿ ಹೂಡಿಕೆದಾರರು ಅಮೆರಿಕದ ಹಣದುಬ್ಬರದ ದತ್ತಾಂಶಕ್ಕಾಗಿ ಕಾಯುತ್ತಿದ್ದಾರೆ. ಫೆಬ್ರವರಿಗೆ ಅಮೆರಿಕದ ವ್ಯಕ್ತಿಗತ ಉಪಭೋಗ ವೆಚ್ಚ ಸೂಚ್ಯಂಕದ ಜೊತೆಗೆ ಗ್ರಾಹಕ ಬೆಲೆ ಸೂಚ್ಯಂಕ ಬಿಡುಗಡೆಗೂ ಕಾಯಲಾಗುತ್ತಿದೆ. ಈ ಸೂಚ್ಯಂಕಗಳು ಮತ್ತು ವರದಿಗಳು ಶುಕ್ರವಾರ ಬಿಡುಗಡೆಯಾಗಲಿವೆ. ಹೀಗಾಗಿ ಸದ್ಯದ ಮಟ್ಟಿಗೆ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿಲ್ಲ ಅಥವಾ ಹೂಡಿಕೆಯನ್ನು ಹಿಂತೆಗೆಯುತ್ತಿಲ್ಲ. ಅದೇ ಕಾರಣದಿಂದ ಚಿನ್ನ-ಬೆಳ್ಳಿ ಬೆಲೆಗಳು ಅಲ್ಪ ಏರಿಳಿತ ಕಾಣುತ್ತಿವೆ.

ಇಂದಿನ ಚಿನ್ನದ ದರ ಹೇಗಿದೆ?

ಮಾರ್ಚ್ 13ರಂದು ಶುಕ್ರವಾರ ಬೆಂಗಳೂರಿನ ಮಾರುಕಟ್ಟೆಗಳಲ್ಲಿ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಗುರುವಾರ ಸಂಜೆಯ ಬೆಲೆಗೆ ಹೋಲಿಸಿದರೆ ಪ್ರತಿ ಗ್ರಾಂಗೆ 98 ರೂ. ಕುಸಿತ ಕಂಡು ಹತ್ತು ಗ್ರಾಂ ಬೆಲೆ 1,61,240 ರೂ. ಗೆ ಬಂದು ನಿಂತಿದೆ. ಆಭರಣ ಚಿನ್ನವಾದ 22 ಕ್ಯಾರೆಟ್ ಬೆಲೆಯು ಗ್ರಾಂಗೆ 90 ರೂ. ಕುಸಿತವಾಗಿ ಹತ್ತು ಗ್ರಾಂಗೆ 1,47,800 ರೂ. ಗೆ ತಲುಪಿದೆ. 18 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 74 ರೂ. ಕುಸಿದು ಹತ್ತು ಗ್ರಾಂಗೆ 1,20,930 ರೂ. ಗೆ ತಲುಪಿದೆ.

ಮಂಗಳೂರಿನಲ್ಲಿ ಚಿನ್ನದ ದರವೆಷ್ಟಿದೆ?

ಮಾರ್ಚ್ 13ರಂದು ಶುಕ್ರವಾರ ಬೆಳಗಿನ 11 ಗಂಟೆಯ ವಹಿವಾಟಿನಲ್ಲಿ ಮಂಗಳೂರಿನಲ್ಲಿ ಚಿನ್ನದ ಬೆಲೆ ಮತ್ತೆ ಸ್ವಲ್ಪ ಕುಸಿತ ಕಂಡುಬಂದಿದೆ. ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ದರ 16,124 (-98) ರೂ. ನಷ್ಟಿದೆ. ಒಂದು ಗ್ರಾಂ 22 ಕ್ಯಾರೆಟ್ ಚಿನ್ನದ 14,780 (-90) ರೂ. ಮತ್ತು ಒಂದು ಗ್ರಾಂ 18 ಕ್ಯಾರೆಟ್ ಚಿನ್ನದ ದರ 12,093 (-74) ರೂ. ಬೆಲೆಗೆ ತಲುಪಿದೆ.

ಸ್ಥಿರವಾದ ಬೆಳ್ಳಿ ದರ

ಮಾರ್ಚ್ 02ರಂದು ಗ್ರಾಂಗೆ 20 ರೂ. ಕುಸಿತ ಕಂಡು ಒಂದು ಕೆಜಿ ಬೆಳ್ಳಿ ಬೆಲೆಯು 2,95,000 ರೂ. ಗೆ ಬಂದು ನಿಂತಿತ್ತು. ಕಳೆದ ಬುಧವಾರ ಮತ್ತೆ ಪ್ರತಿ ಗ್ರಾಂಗೆ 10 ರೂ. ಕುಸಿದ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,85,000 ರೂ. ಗೆ ತಲುಪಿತ್ತು. ನಂತರ ಗುರುವಾರ, ಶುಕ್ರವಾರ ಮತ್ತು ಶನಿವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ. ಮಾರ್ಚ್ 09ರಂದು ಸೋಮವಾರ ಮತ್ತೆ ಪ್ರತಿ ಗ್ರಾಂಗೆ 5 ರೂ. ಕುಸಿದ ಬೆಳ್ಳಿ ಪ್ರತಿ ಕೆಜಿಗೆ 2,80,000 ರೂ. ಗೆ ತಲುಪಿತ್ತು. ಮಂಗಳವಾರ ಪ್ರತಿ ಗ್ರಾಂಗೆ 10 ರೂ. ಏರಿಕೆಯಾಗಿರುವ ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,90,000 ರೂ.ಗೆ ಆಗಿತ್ತು. ಬುಧವಾರ ಇದೇ ಬೆಲೆಯಲ್ಲಿ ಸ್ಥಿರವಾಗಿ ನಿಂತಿದ್ದ ಪ್ರತಿ ಗ್ರಾಂ ಬೆಳ್ಳಿಯ ಬೆಲೆ ಗುರುವಾರ 10 ರೂ. ಕುಸಿದು ಮತ್ತೆ ಪ್ರತಿ ಕೆಜಿಗೆ 2,80,000 ರೂ.ಗೆ ಬಂದು ತಲುಪಿದೆ. ಶುಕ್ರವಾರ ಇದೇ ಬೆಲೆಗೆ ಸ್ಥಿರವಾಗಿ ನಿಂತಿದೆ.

ವಿವಿಧ ನಗರಗಳಲ್ಲಿ 1 ಗ್ರಾಮ್ ಚಿನ್ನದ ದರ (ಬೆಳಗಿನ ವಹಿವಾಟು) ಹೇಗಿದೆ?

ದಿಲ್ಲಿ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ.

ಮುಂಬೈ: 24 ಕ್ಯಾರೆಟ್ ಚಿನ್ನದ ದರ 16,124 (-98) ರೂ., 22 ಕ್ಯಾರೆಟ್ ಚಿನ್ನದ ದರ 14,780 (-90) ರೂ.

ಅಹಮದಾಬಾದ್: 24 ಕ್ಯಾರೆಟ್ ಚಿನ್ನದ ದರ 16,129 (-98) ರೂ., 22 ಕ್ಯಾರೆಟ್ ಚಿನ್ನದ ದರ 14,783 (-92) ರೂ.

ಚೆನ್ನೈ: 24 ಕ್ಯಾರೆಟ್ ಚಿನ್ನದ ದರ 16,256 (-75) ರೂ., 22 ಕ್ಯಾರೆಟ್ ಚಿನ್ನದ ದರ 14,900 (-70) ರೂ.

ಕೋಲ್ಕತ್ತಾ: 24 ಕ್ಯಾರೆಟ್ ಚಿನ್ನದ ದರ 16,124 (-98) ರೂ., 22 ಕ್ಯಾರೆಟ್ ಚಿನ್ನದ ದರ 14,780 (-90) ರೂ.

ಹೈದರಾಬಾದ್: 24 ಕ್ಯಾರೆಟ್ ಚಿನ್ನದ ದರ 16,124 (-98) ರೂ., 22 ಕ್ಯಾರೆಟ್ ಚಿನ್ನದ ದರ 14,780 (-90) ರೂ.

ಜೈಪುರ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ.

ಚಂಡೀಗಢ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ.

ಲಕ್ನೋ: 24 ಕ್ಯಾರೆಟ್ ಚಿನ್ನದ ದರ 16,139 (-98) ರೂ., 22 ಕ್ಯಾರೆಟ್ ಚಿನ್ನದ ದರ 14,793 (-92) ರೂ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries