HEALTH TIPS

"ಶಿಖಾ ಗೌತಮ್", "113ನೇ ರ‍್ಯಾಂಕ್" : UPSC ಫಲಿತಾಂಶದಲ್ಲಿ ಮತ್ತೊಂದು ಗೊಂದಲ ಬಹಿರಂಗ

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ 2025ರ ಯುಪಿಎಸ್‌ಸಿ ಅಂತಿಮ ಫಲಿತಾಂಶಗಳನ್ನು ಘೋಷಿಸಿದ ಒಂದು ವಾರದೊಳಗೆ ಎರಡನೇ ಗೊಂದಲದ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್ ಅಭ್ಯರ್ಥಿ ಶಿಖಾ ಗೌತಮ್ ಯುಪಿಎಸ್ಸಿಯಲ್ಲಿ 113ನೇ ರ‍್ಯಾಂಕ್ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದರು.

ಆದರೆ ಪರಿಶೀಲನೆ ವೇಳೆ ಇದು ಸುಳ್ಳು ಎನ್ನುವುದು ಬಹಿರಂಗವಾಗಿದೆ. ಸ್ವತಃ ಶಿಖಾ ಗೌತಮ್ ಅವರೇ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಶಿಖಾ, UPSC ಪಟ್ಟಿಯಲ್ಲಿ ರೋಲ್ ನಂಬರ್‌ ಪರಿಶೀಲಿಸದ ಕಾರಣ ಗೊಂದಲ ಉಂಟಾಗಿದೆ. ಆಯ್ಕೆಯಾದ ಶಿಖಾ ಬೇರೆಯಾಗಿದ್ದಾರೆ. ನಾನು PDF ನಲ್ಲಿ ಹೆಸರನ್ನು ಮಾತ್ರ ಪರಿಶೀಲಿಸಿದ್ದೆ. ರೋಲ್ ಸಂಖ್ಯೆಯನ್ನು ಪರಿಶೀಲಿಸಲಿಲ್ಲ, ಅದು ನನ್ನ ತಪ್ಪು ಎಂದು ಹೇಳಿದ್ದಾರೆ.

ಈ ಮೊದಲು ಆಕಾಂಕ್ಷಾ ಸಿಂಗ್ ಎಂಬ ಇಬ್ಬರು ಅಭ್ಯರ್ಥಿಗಳು 301 ರ‍್ಯಾಂಕ್ ಪಡೆದ ಬಗ್ಗೆ ವಿವಾದ ಉದ್ಭವಿಸಿತ್ತು. ಈ ಬಗ್ಗೆ UPSC ಕೂಡ ಸ್ಪಷ್ಟನೆ ನೀಡಿತ್ತು.

ವರದಿಗಳ ಪ್ರಕಾರ, UPSC ಫಲಿತಾಂಶ ಪ್ರಕಟವಾದ ನಂತರ ಶಿಖಾ ಗೌತಮ್ ಅವರು ಪರೀಕ್ಷೆಯಲ್ಲಿ ಆಯ್ಕೆಯಾಗಿರುವ ಬಗ್ಗೆ ತಮ್ಮ ಕುಟುಂಬಕ್ಕೆ ತಿಳಿಸಿದ್ದರು. ಇದರಿಂದಾಗಿ ಅವರ ಕುಟುಂಬದ ಸದಸ್ಯರು ಮತ್ತು ಗ್ರಾಮಸ್ಥರು ಅವರಿಗೆ ಮೆರವಣಿಗೆ ಮಾಡಿ ಅದ್ದೂರಿ ಅಭಿನಂದನೆಯನ್ನು ಸಲ್ಲಿಸಿದ್ದಾರೆ.

ಜಿಲ್ಲಾಡಳಿತದ ವಿಚಾರಣೆಯ ನಂತರ ಶಿಖಾ ಗೌತಮ್ ಮತ್ತು ಅವರ ಕುಟುಂಬವು ತಪ್ಪನ್ನು ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಸ್ತವವಾಗಿ 113ನೇ ರ‍್ಯಾಂಕ್ ಪಡೆದ ಅಭ್ಯರ್ಥಿ ಹರ್ಯಾಣದ ರೋಹ್ಟಕ್‌ನವರು. ಅವರು ಪ್ರಸ್ತುತ ರೋಹ್ಟಕ್ ಜಿಲ್ಲೆಯ ಸಾಂಪ್ಲಾದಲ್ಲಿ ಬ್ಲಾಕ್ ಡೆವೆಲಪ್‌ಮೆಂಟ್‌ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries